ಸ್ಪ್ಯಾಮ್ ಅಥವಾ ಕಂಪನಿ ಕರೆಗಳಿಂದ ಕಿರಿಕಿರಿಯಾಗುತ್ತಿದೆಯಾ? – ಹೀಗೆ ಮಾಡಿ ಸ್ಪ್ಯಾಮ್ ಕರೆಗಳು ಬರೋದೇ ಇಲ್ಲ..!!

ಸ್ಪ್ಯಾಮ್ ಅಥವಾ ಕಂಪನಿ ಕರೆಗಳಿಂದ ಕಿರಿಕಿರಿಯಾಗುತ್ತಿದೆಯಾ? – ಹೀಗೆ ಮಾಡಿ ಸ್ಪ್ಯಾಮ್ ಕರೆಗಳು ಬರೋದೇ ಇಲ್ಲ..!!

ನ್ಯೂಸ್ ಆ್ಯರೋ : ಫೋನ್‌ ಬಳಸುವ ನಾವು ನೀವೆಲ್ಲ ದಿನವೊಂದಕ್ಕೆ ಹತ್ತಾರು ಟೆಲಿಮಾರ್ಕೆಟಿಂಗ್ ಕರೆಗಳು ಹಾಗೂ ಎಸ್ಎಮ್ಎಸ್ ಗಳನ್ನು‌ ನೋಡುತ್ತಲೆ ಇರುತ್ತೆವೆ. ಕೆಲವೊಮ್ಮೆ ಕಿರಿಕಿರಿಯಾಗುವಷ್ಟು ಕರೆಗಳು ಕೂಡ ಬರುತ್ತವೆ. ಒಂದು ಬಾರಿ ಅಪ್ಪಿತಪ್ಪಿ ಕರೆ ಸ್ವೀಕರಿಸಿದರಂತೂ ಮುಗಿದೇ ಹೋಯಿತು ಬೆನ್ನು ಬಿದ್ದು ಬಿಡುತ್ತಾರೆ‌. ಇಂತಹಾ ಕರೆಗಳನ್ನು ತಡೆಯುವುದು ಹೇಗೆ? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸ್ಪ್ಯಾಮ್ ಕರೆಗಳನ್ನು ತಡೆಯುವುದು ಹೀಗೆ..

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1909 ಈ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಸುಲಭವಾಗಿ, ಟೆಲಿಮಾರ್ಕೆಟಿಂಗ್ ಕರೆಗಳು ಮತ್ತು ಮೆಸೇಜ್ ಗಳನ್ನು ತಡೆಯಬಹುದಾಗಿದೆ. ಇದರೊಂದಿಗೆ ಪ್ರಚಾರದ ಕರೆಗಳನ್ನು ಮೆಸೇಜ್ ಗಳನ್ನು ತಡೆಯಲು ನಿಮ್ಮ ನೆಟ್ವರ್ಕ್ ಆಪರೇಟರ್ ವೆಬ್ಸೈಟ್ ಕೂಡ ನೋಡಬಹುದಾಗಿದೆ. ಇನ್ನುಳಿದಂತೆ ನಿಮ್ಮ ಮೊಬೈಲ್ ಸಿಮ್ ಆಧಾರಿತ ಆ್ಯಲ್ ಬಳಕೆಯ ಮೂಲಕ ಇಂತಹಾ ಕರೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ DND ಅನ್ನು ಸಕ್ರಿಯಗೊಳಿಸುವ ಮೂಲಕ ಇಂತಹಾ ಮೆಸೇಜ್ ಅಥವಾ ಕರೆಗಳನ್ನು‌ ತಡೆಯಬಹುದಾಗಿದೆ. ಇದರಿಂದಾಗಿ ಯಾವುದೇ ಪ್ರಚಾರದ ಮೆಸೇಜ್, ಕರೆಗಳು ನಿಮ್ಮತ್ತ ಸುಳಿಯುವುದಿಲ್ಲ. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಮೊದಲು ಡಿಫಾಲ್ಟ್ ಮೆಸೇಜ್ ಓಪನ್‌ ಮಾಡಿ, ಹೊಸ ಸಂದೇಶ ರಚಿಸಿ ಅಲ್ಲಿ FULLY BLOCK ಎಂದು ಬರೆದು ಅದನ್ನು 1909 ಈ ನಂಬರಿಗೆ ಕಳುಹಿಸಿ. ಈ ಸೇವೆಯೂ ಉಚಿತವಾಗಿದ್ದು, ಸ್ಪ್ಯಾಮ್ ಕರೆಗಳಿಂದ ಕಿರಿಕಿರಿ ಅನುಭವಿಸುವವರು ಈ ಮಾರ್ಗ ಅನುಸರಿಸಬಹಿದಾಗಿದೆ‌.

ಎಲ್ಲಾ ವಿಧದ ಸ್ಪ್ಯಾಮ್ ಕರೆಗೂ ಈ ಒಂದೇ ಕೋಡ್

  • ಈ ಒಂದು ನಿರ್ದಿಷ್ಟ ಕೋಡ್ ಬಳಸುವ ಮೂಲಕ ನಿಮ್ಮ ಮೊಬೈಲ್ ಗೆ ಬರುವ ವಿವಿಧ ರೀತಿಯ ಎಲ್ಲಾ ಸ್ಪ್ಯಾಮ್ ಕರೆಗಳನ್ನು ತಡೆಯಬಹುದಾಗಿದೆ.
  • ಎಲ್ಲಾ ವರ್ಗಗಳಿಗೂ FULLY BLOCK ಎಂದು ಟೈಪ್ ಮಾಡಿ.
  • -ಬ್ಯಾಂಕ್/ವಿಮೆ/ಕ್ರೆಡಿಟ್ ಕಾರ್ಡ್/ ಹಣಕಾಸು ಸ್ಪ್ಯಾಮ್ ಕರೆಗಳಿಗೆ BLOCK ಎಂದು ಟೈಪ್ ಮಾಡಿ.
  • -ರಿಯಲ್ ಎಸ್ಟೇಟ್ ಸ್ಪ್ಯಾಮ್ ಕರೆಗೆ BLOCK 2 ಎಂದು ಟೈಪ್ ಮಾಡಿ
  • ಶಿಕ್ಷಣ ಸಂಬಂಧಿತ ಸ್ಪ್ಯಾಮ್ ಕರೆಗಳಿಗೆ BLOCK 3 ಎಂದು ಟೈಪ್ ಮಾಡಿ.
    -ಆರೋಗ್ಯ ಸಂಬಂಧಿ ಸ್ಪ್ಯಾಮ್ ಕರೆಗಳಿಗೆ BLOCK 4 ಎಂದು ಟೈಪ್ ಮಾಡಿ.
    -ಗ್ರಾಹಕ ಸರಕು/ಮನರಂಜನೆ/ಆಟೋಮೊಬೈಲ್ ಸ್ಪ್ಯಾಮ್ ಕರೆಗಳಿಗೆ BLOCK 5 ಎಂದು ಟೈಪ್ ಮಾಡಿ.
    -ಸಂವಹನ/ಪ್ರಸಾರ ಸ್ಪ್ಯಾಮ್ ಕರೆಗಳಿಗೆ BLOCK 6 ಎಂದು ಟೈಪ್ ಮಾಡಿ.
    -ಪ್ರವಾಸೋದ್ಯಮ ಕರೆಗಳಿಗೆ BLOCK 7 ಎಂದು ಟೈಪ್ ಮಾಡಿ.
    -ಆಹಾರ ಮತ್ತು ಪಾನಿಯ ಕರೆಗಳಿಗಾಗಿ BLOCK 8 ಎಂದು ಟೈಪ್ ಮಾಡಿ.
    ಈ ರೀತಿಯಲ್ಲಿ ಎಲ್ಲಾ ರೀತಿಯ ಸ್ಪ್ಯಾಮ್ ಕರೆಗಳನ್ನು ತಡೆಯಬಹುದಾಗಿದೆ‌.

ಜಿಯೋ ಬಳಕೆದಾರರು ಹೀಗೆ ಮಾಡಿ

ಜಿಯೋ ಸಿಮ್ ಬಳಕೆದಾರರು ಜಿಯೋ ಆಫ್ ನಲ್ಲಿ DND ನೋಂದಾಯಿಸುವ ಮೊದಲು ಮೈ ಜಿಯೋ ಆಫ್ ಸೈನ್ ಇನ್ ಮಾಡಬೇಕಿದೆ. ಅನಂತರ ತೆರೆಯುವ ಮೆನು ಟ್ಯಾಪ್ ಮಾಡಿದರೆ ‘ಪ್ರೊಫೈಲ್ ಮತ್ತು ಸೆಟ್ಟಿಂಗ್’ ಓಪನ್‌ ಆಗುತ್ತದೆ. ಅಲ್ಲಿ ‘ಡೋಂಟ್ ಡಿಸ್ಟರ್ಬ್’ ಕ್ಲಿಕ್ ಮಾಡಿದರೆ ಸ್ಪ್ಯಾಮ್ ಕರೆಗಳಿಂದ ನೀವು ಮುಕ್ತರಾಗಬಹುದು.

ಏರ್ ಟೆಲ್ ಬಳಕೆದಾರರು ಹೀಗೆ ಮಾಡಿ

ಏರ್ ಟೆಲ್ ಸಿಮ್ ಬಳಕೆದಾರರು ಏರ್ ಟೆಲ್ ಥ್ಯಾಂಕ್ಸ್ ಆಫ್ ನಲ್ಲಿ DND ನೋಂದಾಯಿಸಲು ‘more’ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಅಲ್ಲಿ ತೆರೆದುಕೊಳ್ಳುವ ಮ್ಯನೇಜ್ ಸರ್ವಿಸ್ ವಿಭಾಗದಲ್ಲಿ DND ಯನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ ಆಯ್ಕೆ‌ ಮೇಲೆ ಕ್ಲಿಕ್‌ ಮಾಡಿ. ಅನಂತರ ಸ್ಪ್ಯಾಮ್ ವಿಭಾಗದಲ್ಲಿ ಸಬ್ ಮಿಟ್ ಬಟನ್ ಕ್ಲಿಕ್ ಮಾಡಬೇಕು.

ವೊಡಾಫೋನ್ ಮತ್ತು ಐಡಿಯಾ ಸಿಮ್ ಬಳಸುವವರು ಹೀಗೆ ಮಾಡಿ

ಈ ಸಿಮ್ ಬಳಕೆದಾರರು ನಿಮ್ಮ ಫೋನ್‌ ನಲ್ಲಿ ವಿ ಆ್ಯಪ್ ಓಪನ್‌ ಮಾಡಿ ಅಲ್ಲಿರುವ ಮೈ ಅಕೌಂಟ್ ಖಾತೆಯನ್ನು ಟ್ಯಾಪ್ ಮಾಡಿ, ಅಲ್ಲಿ ‘ಇನ್ನಷ್ಟು ಸೇವೆಗಳು’ ವಿಭಾಗದಲ್ಲಿ ‘ಡೋಂಟ್ ಡಿಸ್ಟರ್ಬ್’ ಆಯ್ಕೆ ಕ್ಲಿಕ್ ಮಾಡುವ ಮೂಲಕ ಇಂತಹ ಸ್ಪ್ಯಾಮ್ ಕರೆಗಳಿಂದ ದೂರವಿರಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *