What is Sandalwood Divine star Rishabh Shetty's net worth?

ನಟ ರಿಷಬ್ ಶೆಟ್ಟಿ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ..? – ‘ಕಾಂತಾರದ ಶಿವ’ನ ಬಳಿಯಿದೆ ಕೋಟ್ಯಾಂತರ ಬೆಲೆಯ ಕಾರ್ ಗಳು‌‌..!!

ನ್ಯೂಸ್ ಆ್ಯರೋ : ‘ ಕಾಂತಾರ’ ದೇಶದಾದ್ಯಂತ ಮೈ ರೋಮಾಂಚನಗೊಳಿಸಿದ ಅದ್ಭುತ ಸಿನಿಮಾ. ಕಾಂತಾರ ದಿ ಲೆಜೆಂಡ್ – ಅಧ್ಯಾಯ 1 ಇದೀಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಮೊದಲ ಹಂತದಲ್ಲೇ ರೋಮಾಂಚನ ಸೃಷ್ಟಿಸಿದ್ದ, ವಿಭಿನ್ನ ಕಥಾಹಂದರ ಹೊಂದಿದ್ದ ಕಾಂತಾರ, ಇದೀಗ ಎರಡನೇ ಹಂತದಲ್ಲಿ ಇನ್ನೆಷ್ಟು ಸದ್ದು ಮಾಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ. ಕಾಂತಾರ ದಿ ಲೆಜೆಂಡ್ – ಅಧ್ಯಾಯ 1ರ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ರಿಷಬ್ ಶೆಟ್ಟಿ ಮತ್ತು ತಂಡ ಹಂಚಿಕೊಂಡಿದೆ. ಈ ಚಿತ್ರವು 2024 ರಲ್ಲಿ ಥಿಯೇಟರ್‌’ಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾಕ್ಕೆ ಎಷ್ಟೇ ಅವಧಿ ತೆಗೆದುಕೊಂಡರೂ ತನ್ನದೇ ಶೈಲಿಯಲ್ಲಿ ಜೀವವಿತ್ತು ಸಿನಿಮಾಕ್ಕೆ ಪರಿಪೂರ್ಣತೆ ತಂದುಕೊಡುವಲ್ಲಿ ಶ್ರಮಿಸುವ ನಟ ರಿಷಬ್ ಶೆಟ್ಟಿ. ಸಿನಿಮಾ ಮಾಡುವುದರಲ್ಲಿ ಇವರ ಕಾರ್ಯ ವೈಖರಿ ಇತರರಿಗಿಂತ ಭಿನ್ನ. ಡಿವೈನ್ ಸ್ಟಾರ್ ಎಂದೇ ಖ್ಯಾತಿ ಪಡೆದ ರಿಷಬ್ ಶೆಟ್ಟಿಯವರ ಆಸ್ತಿ ಮೌಲ್ಯದ ಬಗ್ಗೆ ಕ್ಯೂರಾಸಿಟಿ ನಿಮಗೂ ಇರಬಹುದಲ್ಲವೇ…?

ರಿಷಬ್ ಅವರ ವೃತ್ತಿ ಜೀವನ:

ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ರಿಷಬ್ ಶೆಟ್ಟಿ ವಾಟರ್ ಕ್ಯಾನ್ ಮಾರಾಟ, ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ಕೆಲಸ ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದರು. ಅರವಿಂದ್ ಕೌಶಿಕ್ ಅವರ ತುಘಲಕ್ ಸಿನಿಮಾದಲ್ಲಿ ಕೆಲಸ ಮಾಡೋದಕ್ಕೂ ಮುನ್ನ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ, ಇತ್ಯಾದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಇಂದು ನಟನೆ, ನಿರ್ದೇಶನ ಮತ್ತು ಚಲನಚಿತ್ರ ನಿರ್ಮಾಣದಿಂದ ಹಣವನ್ನು ಗಳಿಸುತ್ತಿದ್ದಾರೆ. ಕಾಂತಾರದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿಯವರ ಒಟ್ಟು ಆಸ್ತಿ ಮೌಲ್ಯ ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.

ಇವರ ಆಸ್ತಿ ಒಟ್ಟು ಮೌಲ್ಯ ಎಷ್ಟು ಗೊತ್ತಾ…?

Mashable India ಪ್ರಕಾರ, ಅಂದಾಜು ರೂ. 12 ಕೋಟಿ (USD 1.43 ಮಿಲಿಯನ್) ಆಸ್ತಿ ಮೌಲ್ಯವನ್ನು ರಿಷಬ್ ಹೊಂದಿದ್ದಾರೆ. ಇನ್ನು ಸಿನಿಮಾವೊಂದರಲ್ಲಿ ನಟನೆಗಾಗಿ ರೂ. 4 ಕೋಟಿ (USD 479,837) ಸಂಭಾವನೆ ಪಡೆಯುತ್ತಾರೆ.

ಇವೆಲ್ಲದರ ಹೊರತಾಗಿ ಅವರ ವಾರ್ಷಿಕ ಆದಾಯ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌’ಗಳ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅಂದಹಾಗೆ ನಟ ರಿಷಬ್ ಶೆಟ್ಟಿ ಅವರು ರೂ. 10.5 ಕೋಟಿ (USD 1,259,699) ನೀಡಿ ಸ್ಯಾಂಡಲ್‌ವುಡ್ ಹಿರಿಯ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅವರಿಂದ ಮನೆಯನ್ನು ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಮನೆ ಬೆಂಗಳೂರಿನ ಎಚ್‌ಆರ್‌ಎಸ್ ಲೇಔಟ್‌’ನಲ್ಲಿ ಇದೆ.

Cartoq ಪ್ರಕಾರ, 2022 ರಲ್ಲಿ ರಿಷಬ್ ಶೆಟ್ಟಿ ಅವರು ಸುಮಾರು ರೂ.83 ಲಕ್ಷ (USD 99,578) ಬೆಲೆಯ Audi Q7ನ್ನು ಖರೀದಿಸಿದ್ದರು. ಇದಲ್ಲದೆ, ರೂ. 7.95 ಕೋಟಿ (USD 953,791) ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್, ರೂ. 1.60 ಕೋಟಿ ಬೆಲೆಯ ಮರ್ಸಿಡಸ್ ಬೆನ್ಜ್ S 350 d Coupe, ರೂ. 1.58 ಕೋಟಿ ಮೌಲ್ಯದ ಆಡಿ ಐ A8L Lexus LX 570 ಮತ್ತು ಮರ್ಸಿಡಸ್ ಬೆನ್ಜ್ S500 ಕೂಡ ರಿಷಬ್ ಬಳಿ ಇದೆ.