Those producers asked me to come to guest house: Amani

‘ಒಮ್ಮೆ ಬಟ್ಟೆ ಬಿಚ್ಚಿ ನಿಮ್ಮ ಸೌಂದರ್ಯ ತೋರಿಸಿ’ ಅಂತ ನೇರವಾಗಿ ಹೇಳಿದ್ದಾರೆ! – ‘ಅಪ್ಪಾಜಿ’ ಸಿನಿಮಾ ನಟಿ ಈ ಆರೋಪ ಮಾಡಿದ್ದು ಯಾರ ಮೇಲೆ ಗೊತ್ತಾ?

ನ್ಯೂಸ್ ಆ್ಯರೋ : ‘ನಿನ್ನ ಬಟ್ಟೆ ಬಿಚ್ಚಿ ತೋರಿಸು, ನಿನ್ನ ಸೌಂದರ್ಯ ಎಷ್ಟಿದೆ ಎಂದು ನೋಡುತ್ತೇನೆ’ ಎಂದು ಆ ಸಿನಿಮಾ ರಂಗದ ನಿರ್ದೇಶಕರು ನೇರವಾಗಿ ಕೇಳಿದ್ದರು ಎಂದು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ‘ಅಪ್ಪಾಜಿ’ ಸಿನಿಮಾದಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಅಮಾನಿ ಹೇಳಿಕೊಂಡಿದ್ದಾರೆ.

ಎರಡು ಬಾರಿ ನಂದಿ ಪ್ರಶಸ್ತಿ ಗೆದ್ದ ಈ ಖ್ಯಾತ ನಟಿ ಈ ರೀತಿ ನೇರ ಆರೋಪ ಮಾಡಿದ್ದು ಯಾರಿಗೆ? ಸಿನಿ ರಂಗಕ್ಕೆ ಎಂಟ್ರಿಯಾಗುವ ವೇಳೆ ಇಂತಹದ್ದೊಂದು ಕೆಟ್ಟ ಬೇಡಿಕೆ ಇಟ್ಟ ನಿರ್ದೇಶಕ ಯಾರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಂಬ್ಯಾಕ್ ಮಾಡಿದ ಅಮಾನಿ!

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಅಮಾನಿ ಮದುವೆಯ ನಂತರ ನಟನೆಗೆ ಬ್ರೇಕ್ ಹಾಕಿದ್ದರು. ಆದರೆ ಇದೀಗ ತಮ್ಮ ಸಿನಿ ಜರ್ನಿಯ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಮಿಡಲ್ ಕ್ಲಾಸ್ ಹುಡುಗ, ಮೋಸ್ಟ್ ಎಲಿಜಬಲ್ ಬ್ಯಾಚುಲರ್, ವಿನರೋ ಬಾಗ್ಯಮ್ ವಿಷ್ಣು ಕಥಾ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ‌.

ಇದೇ ವೇಳೆ ಅಮಾನಿ ತಮಗೆ ಸಿನಿಮಾ ರಂಗದಲ್ಲಾದ ಅವಮಾನದ ಬಗ್ಗೆ ಹೇಳಿಕೊಂಡಿದ್ದು, ನಿರ್ದೇಶಕನೊಬ್ಬ ‘ತನ್ನೆದುರಲ್ಲಿ ಬಟ್ಟೆ ಬಿಚ್ಚು’ ಎಂದು ಹೇಳಿದ್ದ ಎಂದಿದ್ದಾರೆ.

‘ಬಟ್ಟೆ ಬಿಚ್ಚಿ ತೋರಿಸು’ ಎಂದಿದ್ದ ನಿರ್ದೇಶಕ!

ನಟನಾ ವೃತ್ತಿಗೆ ಕಾಲಿಡುವ ವೇಳೆ ತಮಗಾದ ಅವಮಾನದ ಬಗ್ಗೆ ಹೇಳಿಕೊಂಡಿರುವ ಅಮಾನಿ, ‘ನನ್ನ ಫೋಟೋ ನೋಡಿ ಕರೆ ಮಾಡುತ್ತಿದ್ದರು ಆದರೆ‌ಮೈ ಬಣ್ಣದಿಂದಾಗಿ ತಿರಸ್ಕಾರ ಮಾಡುತ್ತಿದ್ದರು. ತೆಲುಗಿಗಿಂತ ತಮಿಳು ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚಿದೆ. ನಾನು ನಟನೆಗೆ ಅವಕಾಶ ಕೇಳಿದ್ದಾಗ ತಮಿಳು ನಿರ್ದೇಶಕನೊಬ್ಬ ಸ್ಟ್ರೆಚ್ ಮಾರ್ಕ್ಸ್ ಇದೆಯಾ?, ಒಮ್ಮೆ ಬಟ್ಟೆ ಬಿಚ್ಚಿ ತೋರಿಸ್ತೀಯಾ? ಎಂದು ಅಸಹ್ಯವಾಗಿ ಹೇಳಿದ್ದ. ಇದರಿಂದಾಗಿ ಬಹಳಷ್ಟು ನೋವು ಅನುಭವಿಸಿದ್ದೇನೆ’ ಎಂದು ಅಮಾನಿ ಹೇಳಿಕೊಂಡಿದ್ದಾರೆ.

‘ಬೀಚ್ ಗೆ ಬನ್ನಿ’ ಎನ್ನುತ್ತಿದ್ದರು!

ಮಾತು ಮುಂದುವರೆಸಿದ ನಟಿ ಅಮಾನಿ, ಇದಿಷ್ಟೇ ಅಲ್ಲದೆ ಸಿನಿಮಾ ಒಪ್ಪಿಕೊಂಡು ಅಡ್ವಾನ್ಸ್ ತೆಗೆದುಕೊಂಡ ಎರಡೇ ದಿನಗಳಲ್ಲಿ ಮ್ಯಾನೇಜರ್ ಅಥವಾ ಡೈರೆಕ್ಟರ್ ಕಾಲ್ ಮಾಡಿ ಬೀಚ್ ಗೆ ಬನ್ನಿ ಎಂದು ಕರೆಯುತ್ತಿದ್ದರು. ಇಂತಹ ನೂರಾರು ಅವಮಾನಗಳನ್ನು, ಕರಾಳ ದಿನಗಳನ್ನು ಸಿನಿಮಾ ರಂಗದಲ್ಲಿ ಕಂಡಿದ್ದೇನೆ. ಇಂತಹ ಕಾಸ್ಟಿಂಗ್ ಕೌಚ್ ತಮಿಳು, ತೆಲುಗು ಸಿನಿಮಾರಂಗದಲ್ಲಿ ಮಾತ್ರವಲ್ಲ ಎಲ್ಲಾ ಚಿತ್ರರಂಗದಲ್ಲೂ ಇದೆ’ ಎಂಬ ಶಾಕಿಂಗ್ ಹೇಳಿಯನ್ನು ಅಮಾನಿ‌ ನೀಡಿದ್ದಾರೆ.