‘ಶ್ರೀರಾಮಚಂದ್ರ’ ಬೆಡಗಿಗೆ ಖ್ಯಾತ ನಟರ ಜೊತೆ ಅಫೇರ್ …!? – ಅವರ ಗಂಡ ಏನ್ ಹೇಳ್ತಾರೆ ಗೊತ್ತಾ…?

ನ್ಯೂಸ್ ಆ್ಯರೋ : ಸಿನಿಮಾ ನಟ- ನಟಿಯರ ಬಗ್ಗೆ ಏನೇನೋ ಕಾಂಟ್ರವರ್ಸಿ, ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತದೆ. ಅದರಲ್ಲಿ ಸತ್ಯನೂ ಇರಬಹುದು. ಸುಳ್ಳಿನ ಲೇಪವೂ ಇರಬಹುದು. ಚಿತ್ರರಂಗ ಅಂದ ಮೇಲೆ ಈ ಟೀಕೆಗಳಿಗೆ ಯಾರೂ ಹೊರತಲ್ಲ ಬಿಡಿ‌.‌ಆದರೆ ಇದೀಗ ‘ ಶ್ರೀರಾಮಚಂದ್ರ’ ಖ್ಯಾತಿಯ ನಟಿ ಮೋಹಿನಿ ಅವರ ವೈಯಕ್ತಿಕ ಬದುಕಿನ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ.

ಕ್ರೇಜಿಸ್ಟಾರ್ ರವಿಚಂದ್ರ ಅಭಿನಯದ ಈ ಸಿನಿಮಾ ಬಗ್ಗೆ ಕೇಳಿದ್ರೆ ಮೊದ್ಲು ನೆನಪಾಗೋದೆ ‘ಸುಂದರಿ ಸುಂದರಿ ಸುರ ಸುಂದರಿ’ ಎನ್ನುವ ಎಸ್.ಬಿ ಬಾಲಸುಬ್ರಹ್ಮಣ್ಯಂ ಅವರು ವಿಭಿನ್ನವಾಗಿ ಹಾಡಿದ ಹಾಡು. ಇದೀಗ ಈ ‘ಶ್ರೀರಾಮಚಂದ್ರ’ ಸಿನಿಮಾ ನಟಿಯ ಬಗ್ಗೆ ಗಾಸಿಪ್ ಗಳು ಹರಡುತ್ತಿದೆ.

ನಟಿ ಮೋಹಿನಿ ಅವರ ಹಿನ್ನೆಲೆ:

ಕಲ್ಯಾಣ ಮಂಟಪ, ರೌಡಿ, ಲಾಲಿ, ನಿಶ್ಯಬ್ಧ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಮೋಹಿನಿ ಕನ್ನಡಿಗರ ಮನೆ ಮಾತಾದ ಅದ್ಭುತ ಪ್ರತಿಭಾವಂತ ನಟಿ. ಚೆನ್ನೈನಲ್ಲಿ ಜನಿಸಿದ ನಟಿ 90ರ ದಶಕದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದಾರೆ.

ಈ ಬಹುಭಾಷಾ ನಟಿ ವೃತ್ತಿ ಜೀವನದ ಯಶಸ್ಸಿನಲ್ಲಿರುವಾಗಲೇ 1999ರಲ್ಲಿ ಭರತ್ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಲಕ್ರಮೇಣ ಅವರು ನಟಿಸೋದನ್ನು ಕಡಿಮೆ ಮಾಡಿದ್ರು. ಅವರಿಗೆ ಇದೀಗ ಇಬ್ಬರು ಮಕ್ಕಳಿದ್ದು ಸಂಪೂರ್ಣವಾಗಿ ತಮ್ಮ ಗಮನ ಕುಟುಂಬದ ಮೇಲೆ ವಹಿಸುತ್ತಿದ್ದಾರೆ.

ಅವರ ಬಗ್ಗೆಯೂ ಹರಡಿರುವ ಗಾಸಿಪ್ ಬಗ್ಗೆ ಏನ್ ಹೇಳ್ತಾರೆ ಗೊತ್ತಾ..?

ಮೋಹಿನಿ ಅವರ ಹಳೆಯ ಸಂದರ್ಶನ ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಕೆಲವು ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ‘ನನ್ನ ಮತ್ತು ಅರವಿಂದ್ ಸ್ವಾಮಿ ನಡುವೆ ಗಾಸಿಪ್ ಶುರು ಮಾಡಿದ್ದರು. ಅದೇ ರೀತಿ ಅಕ್ಷಯ್ ಮತ್ತು ನನ್ನ ನಡುವೆ ಕೆಲವೊಂದಿಷ್ಟು ಬೇಡದ ಸುದ್ದಿಗಳನ್ನು ಪ್ರಚಾರ ಮಾಡಿದ್ದರು. ನಟರ ಜೊತೆ ನನ್ನ ಹೆಸರನ್ನು ತಳುಕು ಹಾಕಿದ್ದರಿಂದ ತುಂಬಾ ಬೇಸರಗೊಂಡಿದ್ದೆ. ಆತ್ಮಹತ್ಯೆಗೂ ಯತ್ನಿಸಿದ್ದೆ. ಆದರೆ ಸೆಲೆಬ್ರೆಟಿಗಳ ಜೀವನದಲ್ಲಿ ಇದೆಲ್ಲ ಕಾಮನ್ ಎಂದೆನಿಸಿತು. ಮದ್ವೆ ಆದ ನಂತರವೂ ಗಾಸಿಪ್ ಗಳು ಆಗಾಗ ಕೇಳಿಬರುತ್ತಿರುತ್ತದೆ.

ಇವರ ಬಗೆಗಿನ ಗಾಸಿಪ್ ಬಗ್ಗೆ ಅವರ ಗಂಡ ಏನಂತಾರಂತೆ ಗೊತ್ತಾ..?

ತನ್ನ ಗಂಡ ಮತ್ತು ಅವರ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ‘ ಯಾರಾದರೂ ಹೋಗಿ ನನ್ನ ಗಂಡನ ಬಳಿ ನಿಮ್ಮ ಹೆಂಡತಿ ಆ ನಟರ ಜೊತೆ ಹರಟೆ ಹೊಡೆಯುತ್ತಿದ್ರು ಅಂತ ಹೇಳಿದ್ರೆ ‘ಓಹ್ ಹೌದಾ’ ಎಂದು ನನ್ನ ಪತಿ ಉತ್ತರಿಸುತ್ತಾರೆ. ಗಾಸಿಪ್ ಬಗ್ಗೆ ಹೇಳಿದ್ರು ಕೂಡಾ ತೆಪ್ಪಗೆ ಹೋಗಬೇಕಷ್ಟೆ’ ಎಂದು ನಟಿ ಮುಕ್ತವಾಗಿ ಮಾತಾಡಿದ್ದಾರೆ.