ಬಾಲಿವುಡ್ ನಟಿ ಸಾರಾ ಬಾತ್ ರೂಂ ವಿಡಿಯೋ ವೈರಲ್ – ವಿಡಿಯೋ ವೈರಲ್ ಮಾಡಿದ್ದು ಸಾರಾ ಸಹೋದರಿಯಂತೆ..!!

ಬಾಲಿವುಡ್ ನಟಿ ಸಾರಾ ಬಾತ್ ರೂಂ ವಿಡಿಯೋ ವೈರಲ್ – ವಿಡಿಯೋ ವೈರಲ್ ಮಾಡಿದ್ದು ಸಾರಾ ಸಹೋದರಿಯಂತೆ..!!

ನ್ಯೂಸ್ ಆ್ಯರೋ : ಸದಾ ಒಂದಿಲ್ಲೊಂದು ವಿವಾದಗಳಿಂದ, ಹೇಳಿಕೆಗಳಿಂದ ಚರ್ಚಾ ವಿಷಯವಾಗುವ ಬಾಲಿವುಡ್ ನಟಿ ಸಾರಾ ಖಾನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ವಿಚಾರದಿಂದ ಮುನ್ನೆಲೆಗೆ ಬಂದಿದ್ದಾರೆ. ಹಿಂದಿ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಈ ನಟಿ, ರಿಯಾಲಿಟಿ ಶೋ ಒಂದರಲ್ಲಿ ಈ ಹಿಂದೊಮ್ಮ ತನ್ನ ಬಾತ್ ರೂಂ ಖಾಸಗಿ ವಿಡಿಯೋ ಒಂದನ್ನು ಸಹೋದರಿಯೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಬಗ್ಗೆ ಹೇಳಿಕೊಂಡಿದ್ದಾರೆ.

2007 ರಲ್ಲಿ ಟಿವಿ ಧಾರಾವಾಹಿ ‘ಸಪ್ನಾ ಬಾಬುಲ್ ಕಾ ಬಿದಾಯಿ’ ಮೂಲಕ ಸಾರಾ ಖಾನ್ ತಮ್ಮ ನಟನಾ ಜೀವನ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಸಾರಾ ಮಾಡಿದ ಪಾತ್ರ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಅನಂತರ 2015 ರಲ್ಲಿ, ಸಾರಾ ಖಾನ್ ‘ಹಮಾರಿ ಅಧೂರಿ; ಕಹಾನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ರಾಜ್‌ಕುಮಾರ್ ರಾವ್ ಮತ್ತು ವಿದ್ಯಾ ಬಾಲನ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಸಿನಿಮಾದಲ್ಲಿ ಸಾರಾ, ನೈಲಾ ಎಂಬ ಪಾತ್ರ ಮಾಡಿದ್ದರು. ಇದು ಜನರಿಗೆ ಇಷ್ಟವಾಗಿತ್ತು. ಕಳೆದ ವರ್ಷ, ಕಂಗನಾ ರಣಾವತ್ ಅವರ ಹಿಟ್ ರಿಯಾಲಿಟಿ ಶೋ ‘ಲಾಕ್ ಅಪ್’ ನಲ್ಲಿ ಕೂಡ ಸಾರಾ ಕಾಣಿಸಿಕೊಂಡಿದ್ದರು.

ಈ ರಿಯಾಲಿಟಿ ಶೋನಲ್ಲಿ ತಮ್ಮ ವೈಕ್ತಿಕ ಬದುಕಿನ ಬಗ್ಗೆಯೂ ಮಾತನಾಡಿದ್ದ ಸಾರಾ, ತನ್ನ ಮಾಜಿ ಪತಿ ಅಲಿ ಮರ್ಚೆಂಟ್ ಬಗ್ಗೆ “ಮದುವೆಯ ಸಮಯದಲ್ಲಿ ನನಗೆ ಅಷ್ಟು ಮನಸ್ಸು ಇರಲಿಲ್ಲ. ನಾನು ತುಂಬಾ ಚಿಕ್ಕವಳು. ಆದರೆ ಅವರಿಗೆ ಪ್ರಚಾರದ ಹಸಿವಿತ್ತು. ಜೊತೆಗೆ ವಿವಾದಗಳು ಬೇಕಾಗಿತ್ತು” ಎಂದಿದ್ದರು. 2015 ರಲ್ಲಿ ಸಾರಾ ಹಾಗೂ ಅಲಿ ವಿವಾಹವಾಗಿದ್ದರು. ಆದರೆ ಇವರಿಬ್ಬರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ವಿಚ್ಚೇದನದೊಂದಿಗೆ ಸಂಬಂಧ ಮುರಿದುಬಿತ್ತು.

ಸಾರಾ ಎಷ್ಟು ಜನಪ್ರಿಯರೋ ಅಷ್ಟೇ ವಿವಾದಗಳಿಗೆ ಒಳಗಾದ ನಟಿ. ಈ‌ ಹಿಂದೊಮ್ಮೆ ಸಾರಾಳ ಬಾತ್ ರೂಂ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ‌ ಇದರಿಂದಾಗಿ ಸಾರಾ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ‘ನನ್ನ ಸಹೋದರಿಯೇ ನನ್ನ ಬಾತ್ ರೂಂ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಆದರೆ ತಕ್ಷಣ ಈ ವಿಡಿಯೋವನ್ನೂ ಡಿಲೀಟ್ ಮಾಡಿದ್ದಳು. ಆದರೂ ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್ ಆಗಿದೆ” ಎಂದಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *