ಇಂದಿನಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ – ಮೆಟಾದಿಂದ ಬಂತು ಶಾಕಿಂಗ್ ಸುದ್ದಿ…!!

ಇಂದಿನಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ – ಮೆಟಾದಿಂದ ಬಂತು ಶಾಕಿಂಗ್ ಸುದ್ದಿ…!!

ನ್ಯೂಸ್ ಆ್ಯರೋ : ನಾವು ನೀವು ಸಾಮಾಜಿಕ ಜಾಲತಾಣಗಳಿಗೆ ಸ್ಮಾರ್ಟ್ಫೋನ್ ಗಳಿಗೆ ಮರುಳಾಗಿ ಹೋಗಿದ್ದೇವೆ. ಆದರೆ ಒಂದು ದಿನ ಅವುಗಳು ಇಲ್ಲವಾದರೆ ಹೇಗಿರಬಹುದು. ಅಂತಹದ್ದೊಂದು ಶಾಕಿಂಗ್ ನ್ಯೂಸ್ ವಾಟ್ಸಾಪ್ ಮೇಟಾ ಕಡೆಯಿಂದ ಇದೀಗ ಬಂದಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆ್ಯಪ್ ವಾಟ್ಸಾಪ್.‌ ವಿಶ್ವದಾದ್ಯಂತ 2 ಬಿಲಿಯನ್ ವಾಟ್ಸಾಪ್ ಬಳಕೆದಾರರಿದ್ದು, ಅವರಲ್ಲಿ 500 ಮಿಲಿಯನ್ ಭಾರತೀಯರೇ ಆಗಿದ್ದಾರೆ. ಇದೀಗ ಈ ವಾಟ್ಸಾಪ್ ಕೆಲ ಸ್ಮಾರ್ಟ್ಫೋನ್ ಗಳಲ್ಲಿ ಸ್ಥಗಿತಗೊಳ್ಳಲಿದೆ.

ವಾಟ್ಸಾಪ್ ತನ್ನ ಹೊಸ ಫೀಚರ್ ರಿಲೀಸ್ ಮಾಡುತ್ತಿರುವ ಕಾರಣ, ಫೆ.1 ರಿಂದ ಕೆಲವು ಐಫೋನ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಥಗಿತವಾಗಲಿದೆ. ಜನರು ಹೆಚ್ಚಾಗಿ ವಾಟ್ಸಾಪ್ ಬಳಸಲು‌ ಕಾರಣ ಇದರಲ್ಲಿರುವ ಹಲವಾರು ಫೀಚರ್ ಗಳು. ಕೆಲ ವರ್ಷಗಳ ಹಿಂದೆ ಕೇವಲ ಚಾಟಿಂಗ್ ಮಾಡಲು ಮಾತ್ರ ಸೀಮಿತವಾಗಿದ್ದ ಈ ಆ್ಯಪ್ ತದನಂತರದಲ್ಲಿ ಸ್ಟೇಟಸ್ ಹಾಕುವ, ಸ್ಟೇಟಸ್ ನೋಡುವ, ಸ್ಟಿಕ್ಕರ್, ಇಮೋಜಿಗಳನ್ನು‌ ಕಳುಹಿಸುವ ಫೀಚರ್ ಗಳನ್ನು‌ ಜಾರಿ ಮಾಡಿತು. ಇದೀಗ‌ ಅಂತಹದ್ದೇ ಹೊಸದೊಂದು ಫೀಚರ್ ವಾಟ್ಸಾಪ್ ನಲ್ಲಿ ಬರಲಿದೆ.

ವಾಟ್ಸಾಪ್ ಹೊಸ ಫೀಚರ್ ಗಳನ್ನು‌ ತರುತ್ತಿದೆಯಾದರೂ, ಇದೇ ಈಗ ಕೆಲ ಬಳಕೆದಾರರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಏಕೆಂದರೆ ಫೆ.1 ರಿಂದ ಕೆಲ ಸ್ಮಾರ್ಟ್ಫೋನ್ ಗಳಲ್ಲಿ ವಾಟ್ಸಾಪ್ ಲಭ್ಯವಿರುವುದಿಲ್ಲ. ಮುಂದಿನ‌ ದಿನಗಳಲ್ಲಿ ಐಫೋನ್‌ ಐಒಎಸ್ 12.0 ಹಾಗೂ ಅನಂತರದ‌ ವರ್ಷನ್‌ಗಳಲ್ಲಿ ಮಾತ್ರ ವಾಟ್ಸಾಪ್ ಕೆಲಸ ಮಾಡಲಿದೆ. ಆದ್ದರಿಂದ ವಾಟ್ಸಾಪ್ ಗೆ ಬೆಂಬಲ ನೀಡದ ಸ್ಮಾರ್ಟ್ಫೋನ್ ಗಳಿಂದ ಫೀಚರ್ ಗಳನ್ನು‌ ಹಂತ ಹಂತವಾಗಿ ತೆಗೆದು ಹಾಕಲಾಗುವುದು ಎಂದು ಕಂಪೆನಿ‌ ಹೇಳಿದೆ.

ತಕ್ಷಣದಿಂದಲೇ ಹಳೆ‌ ಡಿವೈಸ್ ಬಳಕೆ ಮಾಡಿತ್ತಿರುವ ಬಳಕೆದಾರರು ಅಪ್ಡೇಟ್ ಮಾಡಿಕೊಳ್ಳುವಂತೆ ವಾಟ್ಸಾಪ್ ಗ್ರೂಪ್ ಗಳ ಮೂಲಕ ಸಂದೇಶಗಳನ್ನು‌ ಕಳುಹಿಸಲಾಗುತ್ತಿದೆ. ಸ್ಕ್ಯಾಮ್ ಸೇರಿಂದತೆ ಬಳಕೆದಾರರು ಇತರೆ ಸಮಸ್ಯೆಗಳನ್ನು‌ ಎದುರಿಸುತ್ತಿರುವ ಕಾರಣ ಇವುಗಳಿಂದ ಬಳಕೆದಾರರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಾಟ್ಸಾಪ್ ಸ್ಥಗಿತಗೊಳ್ಳುವ ಸ್ಮಾರ್ಟ್ಫೋನ್ ಇವುಗಳು

iPhone 6S
iPhone 6S Plus
iPhone SE
Samsung Galaxy Core
Samsung Galaxy Trend Lite
Samsung Galaxy Ase 2
Samsung Galaxy S3 mini
Samsung Galaxy Treand li
Samsung Galaxy X Cover 2
Vinco Darknight
Archos 53 Platinum
Zte Grand S Flex
Zte Grand Memo
Huawei Ascend mate
Huawei Ascend G740
LG Optiums L3 Li Dual
LG Optiums L5 Li
LG Optiums F5
LG Optiums L3 Li
LG Optiums L7ii
LG Optiums L5 Dual
LG Optiums L7 Dual
LG Optiums F3
LG Optiums F3q
LG Optiums L2 Li
LG Optiums L4 Li
LG Optiums F6
LG act
Sony xperia M
Lenovo A820
Feya F1thl W8
Vico Sync Five

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *