ರೂಪೇಶ್ ಮತ್ತು ಸಾನ್ಯಾ ಗುಟ್ಟಾಗಿ ಮದುವೆ ಆಗಿದ್ದಾರಾ? – ಸಾನ್ಯಾ ಕೈಯಲ್ಲಿದೆ ಶೆಟ್ಟಿ ವಧು ಧರಿಸುವ ಉಂಗುರ..!!
- ಮನರಂಜನೆ
- January 23, 2023
- No Comment
- 152
ನ್ಯೂಸ್ ಆ್ಯರೋ : ‘ಬಿಗ್ ಬಾಸ್’ ಅನ್ನುವ ಕಾರ್ಯಕ್ರಮದಲ್ಲಿ ಸದಾ ಒಂದಿಲ್ಲೊಂದು ಪ್ರೇಮ ಕಹಾನಿ ಮುನ್ನೆಲೆಗೆ ಬರುತ್ತದೆ. ಅಲ್ಲಿಗೆ ಹೋದವರಲ್ಲಿ ಕೆಲವೊಬ್ಬರು ಅಲ್ಲೇ ಪ್ರೀತಿಸಿ ಹೊರಬಂದ ಮೇಲೆ ವಿವಾಹವಾಗಿದ್ದಾರೆ. ಈ ಬಾರಿಯ ‘ಬಿಗ್ ಬಾಸ್’ ನಲ್ಲಿ ನಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಪ್ರಣಯ ಜೋಡಿಗಳಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ, ವಿವಾಹವಾಗಲಿದ್ದಾರೆ ಎಂಬೆಲ್ಲ ಮಾತುಗಳು ಹರಿದಾಡುತ್ತಿತ್ತು. ಆದರೆ ಈಗ ಸಾನ್ಯ ಕೈಯಲ್ಲಿರುವ ಶೆಟ್ಟಿ ಮಧು ಧರಿಸುವ ಒಡ್ಡುಂಗರ ಕಂಡವರೆಲ್ಲ ಇವರಿಬ್ಬರೂ ಗುಟ್ಟಾಗಿ ಮದುವೆ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೆಚ್ಚಾಗಿರುವ ಶೆಟ್ಟಿ ಸಮುದಾಯದವರ ಮದುವೆಯಾದ ಮಹಿಳೆಯರು ತಾಳಿಯಷ್ಟೇ ಪವಿತ್ರವೆಂದು ಬೆರಳಿಗೆ ತೊಡುವ ಒಡ್ಡುಂಗರವೊಂದನ್ನು ಆರಾಧಿಸುತ್ತಾರೆ. ಸದ್ಯ ಇದೇ ಉಂಗುರ ಧರಿಸಿ ಸಾನ್ಯ ಅಯ್ಯರ್ ಫೊಟೋ ಶೂಟ್ ನಡೆಸಿದ್ದಾರೆ. ಇದನ್ನ ಕಂಡು ನೆಟ್ಟಿಗರೆಲ್ಲ ಸಾನ್ಯ ಮತ್ತು ರೂಪೇಶ್ ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುತ್ತಿದ್ದಾರೆ.
ಈ ಒಡ್ಡುಂಗುರ ಎನ್ನುವಂತಹದ್ದು ಶೆಟ್ಟಿ ಸಮುದಾಯದ ಮಹಿಳೆಯರಿಗೆ ಅತ್ಯಂತ ಪವಿತ್ರವಾದುದು. ವಿವಾಹಿತ ಮಹಿಳೆಯರು ಮಾತ್ರ ಈ ಉಂಗುರ ಧರಿಸುತ್ತಾರೆ. ತಾಳಿಯಷ್ಟೇ ಮಹತ್ವ ಪಡೆದಿರುವ ಈ ಉಂಗುರ ವಿವಾಹವಾಗಿದೆ ಎಂಬುದನ್ನು ಸೂಚಿಸುತ್ತದೆ. ಇದೀಗ ಈ ಒಡ್ಡುಂಗುರ ಸಾನ್ಯ ಕೈಯಲ್ಲೂ ರಾರಾಜಿಸುತ್ತಿದೆ.
ಮದುವೆಯ ದಿಬ್ಬಣ ಹೊರಡುವ ಸಂಧರ್ಭದಲ್ಲಿ ವಧುವಿನ ಅತ್ತಿಗೆ ಈ ಒಡ್ಡುಂಗರವನ್ನು ವಧುವಿಗೆ ತೊಡಿಸುತ್ತಾಳೆ. ಹೆಣ್ಣು ಮಗಳು ವಿವಾಹವಾಗಿ ಮತ್ತೊಂದು ಮನೆಗೆ ಹೋದರೂ ಕೂಡ ತವರಿನ ಸಂಬಂಧ ಶಾಶ್ವತವಾಗಿರುತ್ತದೆ ಎಂಬುದನ್ನು ಈ ಉಂಗುರ ಸೂಚಿಸುತ್ತದೆ. ಇದೀಗ ಇದೇ ಉಂಗುರದಿಂದ ಸುದ್ದಿಯಲ್ಲಿರುವ ಸಾನ್ಯ ಅಯ್ಯರ್ ಆಗಲಿ ಅಥವಾ ರೂಪೇಶ್ ಆಗಲಿ ಈ ವಿಚಾರದ ಬಗ್ಗೆ ಯಾವುದೇ ಹೇಳಿಕೆಯನ್ನ ನೀಡಿಲ್ಲ.