
ಕ್ರಿಕೆಟಿಗ ಶುಬ್ಮನ್ ಗಿಲ್ ಗೆ ರಶ್ಮಿಕಾ ಮೇಲೆ ಕ್ರಶ್ – ಕಿರಿಕ್ ಹುಡ್ಗಿ ಪ್ರತಿಕ್ರಿಯೆ ಏನ್ ಗೊತ್ತಾ..!!
- ಮನರಂಜನೆ
- March 14, 2023
- No Comment
- 999
ನ್ಯೂಸ್ ಆ್ಯರೋ : ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ರಶ್ಮಿಕಾ ಏನೇ ಮಾಡಿದ್ದರೂ, ಅವರ ಬಗ್ಗೆ ಯಾರು ಏನೇ ಮಾತನಾಡಿದ್ದರೂ ಸಖತ್ ಸುದ್ದಿಯಾಗುತ್ತಿದೆ. ಇತ್ತೀಚಿಗೆ ಕ್ರಿಕೆಟರ್ ಶುಭಮನ್ ಗಿಲ್‌ಗೆ ರಶ್ಮಿಕಾ ಮೇಲೆ ಕ್ರಶ್ ಎಂದು ಹೇಳಿರುವ ವಿಚಾರ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈ ವಿಚಾರಕ್ಕೆ ನಟಿ ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ.
ರಶ್ಮಿಕಾ ಅವರು ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಬ್ರ್ಯಾಂಡ್ ಪ್ರಮೋಷನ್ ಕೂಡ ಮಾಡ್ತಿದ್ದಾರೆ. ಇತ್ತೀಚಿಗೆ ಬ್ರ್ಯಾಂಡ್ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದ ವೇಳೆ ಪಾಪರಾಜಿಗಳು ಅವರನ್ನು ಸಾಕಷ್ಟು ಪ್ರಶ್ನೆ ಕೇಳಿದ್ದು, ಶುಭಮನ್ ಗಿಲ್ ಬಗ್ಗೆ ನಟಿಗೆ ಕೇಳಿದ್ದಾರೆ.
ರಶ್ಮಿಕಾ ಅವರೇ ನೀವು ಎಲ್ಲರ ಕ್ರಶ್ ಆಗಿಬಿಟ್ಟಿದ್ದೀರಾ. ಕ್ರಿಕೆಟರ್ ಕ್ರಶ್ ಕೂಡ ಎಂದು ರಶ್ಮಿಕಾಗೆ ಕೇಳಿದ್ದಾರೆ. ಅದಕ್ಕೆ ನಟಿ ನಕ್ಕಿದ್ದಾರೆ ಅಷ್ಟೇ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಚೆಂದದ ನಗು ಬೀರಿ ಹೋಗಿದ್ದಾರೆ.
ಸದ್ಯ ರಶ್ಮಿಕಾ ರಣ್‌ಬೀರ್ ಕಪೂರ್ ಜೊತೆ `ಅನಿಮಲ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡ್ತಿದ್ದಾರೆ.
ಈ ಮೊದಲು ತಮ್ಮ ಮೊದಲ ಚಿತ್ರದ ನಟನೆಯ ಬಗ್ಗೆ ಕೈಸನ್ನೆ ಮೂಲಕ ಉತ್ತರಿಸಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ನಟಿ ಬಳಿಕ ಅದಕ್ಕಾಗಿ ಕ್ಷಮೆ ಯಾಚಿಸಿದ್ದರು. ಅದ್ಯಾಕೋ ರಕ್ಷಿತ್ ಶೆಟ್ಟಿ ಜೊತೆ ಸಂಬಂಧ ಕಡಿದುಕೊಂಡ ಬಳಿಕ ಕನ್ನಡ ಸಿನಿ ಅಭಿಮಾನಿಗಳು ಅವರನ್ನು ಅಷ್ಟಾಗಿ ಗಮನಹರಿಸುತ್ತಿಲ್ಲ ಎಂಬುದು ಮಾತ್ರ ಅಷ್ಟೇ ಸತ್ಯ.