ಕಾಂತಾರ ಸಿನಿಮಾ ನೋಡಿ ಟೀಂ ಗೆ ಮೆಸೇಜ್ ಮಾಡಿದ್ದೆ, ರಿಪ್ಲೈಯೂ ಬಂದಿತ್ತು – ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೇಳಿದ್ದೇನು..!?

ಕಾಂತಾರ ಸಿನಿಮಾ ನೋಡಿ ಟೀಂ ಗೆ ಮೆಸೇಜ್ ಮಾಡಿದ್ದೆ, ರಿಪ್ಲೈಯೂ ಬಂದಿತ್ತು – ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೇಳಿದ್ದೇನು..!?

ನ್ಯೂಸ್ ಆ್ಯರೋ : ಮಹಿಳಾ ನಿರೂಪಕಿಯೊಬ್ಬರ ಜೊತೆ ಸಂದರ್ಶನವೊಂದರಲ್ಲಿ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿದ್ದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗನ ದಿನಗಳಲ್ಲಿ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

ಈ ಸಂದರ್ಶನದಲ್ಲಿ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿದ್ದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಶ್ಮಿಕಾ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಆರಂಭಿಸಿದರು. ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ರಶ್ಮಿಕಾ ಅವರನ್ನು ಕೆಲದಿನಗಳ ಹಿಂದೆ ಕೇಳಿದಾಗ, ಸಿನಿಮಾ ವೀಕ್ಷಿಸಿಲ್ಲ ಎಂದು ಉತ್ತರಿಸಿದರು. ಕನ್ನಡದವರಾಗಿ ತಮಗೆ ವೃತ್ತಿಜೀವನ ಆರಂಭಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕನ ಸಿನಿಮಾ ನೋಡಿಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು.

ಸದ್ಯ ಕನ್ನಡ ಚಲನಚಿತ್ರೋದ್ಯಮವು ನಟಿಯ ಮೇಲೆ ಬ್ಯಾನ್ ಹೇರಲು ಯೋಜಿಸುತ್ತಿದೆ ಎಂಬ ಊಹಾಪೋಹಗಳು ಸಹ ಕೇಳಿಬಂದಿದ್ದವು. ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ರಶ್ಮಿಕಾ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.

“ಬಿಡುಗಡೆಯಾದ ಎರಡು ದಿನಗಳ ನಂತರ ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ನನ್ನನ್ನು ಕೇಳಿದರು ಮತ್ತು ನಾನು ಆಗ ನೋಡಿರಲಿಲ್ಲ. ಅದಕ್ಕೆ ನಾನು ಪ್ರಾಮಾಣಿಕವಾಗಿ ಉತ್ತರಿಸಿದೆ. ಆದರೆ, ನಾನು ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದೇನೆ. ಅಲ್ಲದೇ ಟೀಂಗೆ ಮೆಸೇಜ್ ಮಾಡಿ ಅಭಿನಂದಿಸಿದೆ” ಆ ಕಡೆಯಿಂದಲೂ ನನಗೆ ರಿಪ್ಲೈ ಬಂದಿತ್ತು ಎಂದು ರಶ್ಮಿಕಾ ಹೇಳಿದರು.

ಇದೇ ವೇಳೆ ಬ್ಯಾನ್ ವಿಚಾರವಾಗಿ ಕೇಳಿದಾಗ, ಒಳಗಡೆ ಏನಾಗ್ತಿದೆ ಎಂದು ಈ ಪ್ರಪಂಚಕ್ಕೆ ಗೊತ್ತಿಲ್ಲ. ಇಲ್ಲಿ ಏನಾಗಿದೆ ಎನ್ನುವುದು ದೇವರಿಗೆ ಗೊತ್ತು. ನಾನು ಎಲ್ಲಾ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಮುಂದೆ ಬಂದು ಹೇಳಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಜನ ಏನು ಹೇಳುತ್ತಾರೋ ಅದು ಮ್ಯಾಟರ್ ಆಗಲ್ಲ. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದ್ರೆ ನಾವು ಅದರ ಬಗ್ಗೆ ಗಮನ ಕೊಡಬಹುದು. ಬ್ಯಾನ್ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *