
ನಟಿ ಮಲೈಕಾ ಅರೋರಾಗೆ ನಾಚಿಕೆ ಆಗ್ಬೇಕು, ಇದು ಅಸಹ್ಯ..!! – ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ?
- ಮನರಂಜನೆ
- May 29, 2023
- No Comment
- 160
ನ್ಯೂಸ್ ಆ್ಯರೋ : ಬಾಲಿವುಡ್ ನ ಬೋಲ್ಡ್ ನಟಿ ಮಲೈಕಾ ಆರೋರಾ ಮತ್ತು ಅರ್ಜುನ್ ಕಪೂರ್ ಜೊತೆಯಲ್ಲಿ ಸುತ್ತಾಡುತ್ತ ಆಗಾಗ ಕ್ಯಾಮರಾ ಕಣ್ಣಿಗೆ ಬೀಳುತ್ತಾರೆ. ಇದೀಗ ಮಲೈಕಾ ತನ್ನ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಫೋಟೋ ಹಂಚಿಕೊಂಡು ಟ್ರೋಲ್ ಗೆ ಆಹಾರವಾಗಿದ್ದಾರೆ.
ಅರ್ಜುನ್ ಕಪೂರ್ ಮೈ ಮೇಲೆ ಏನು ಹಾಕದೆ, ಸೋಫದಲ್ಲಿ ಕೂತು ತನ್ನ ಖಾಸಗಿ ಅಂಗಕ್ಕೆ ದಿಂಬುವೊಂದನ್ನು ಅಡ್ಡಯಿಟ್ಟು ಮೈಮುರಿಯುವ ಫೋಟೋವನ್ನು “My very own lazy boy” ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಲೈಕಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೆಗೆಟಿವ್ ಕಮೆಂಟ್ ಗಳ ಸುರಿಮಳೆಯೇ ಆಗಿದ್ದು, ನೆಟ್ಟಿಗರು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಅವಳು ಇದನ್ನು ನಮಗೆ ಏಕೆ ತೋರಿಸುತ್ತಿದ್ದಾಳೆ? ಈ ನಗ್ನ ಅರ್ಜುನನನ್ನು ನೋಡಲು ನಮಗೆ ಇಷ್ಟವಿಲ್ಲ” ಎಂದು ಒಬ್ಬರು ಬರೆದಿದ್ದಾರೆ. “ಈ ಫೋಟೋವನ್ನು ಪಬ್ಲಿಕ್ ಅಕೌಂಟ್ ನಲ್ಲಿ ಹಂಚಿಕೊಳ್ಳುವಾಗ ನಟಿ ಮದ್ಯ ಕುಡಿದಿದ್ದಳು ಇರಬೇಕು” ಎಂದು ಮತ್ತೊಬ್ಬರು ಬರೆದಿದ್ದಾರೆ. “ಇದು ಅಸಹ್ಯವೆಂದು” ಇನ್ನೊಬ್ಬರು ಹೇಳಿದ್ದಾರೆ. ”ನಾಚಿಕೆ ಆಗ್ಬೇಕು” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಮಲೈಕಾ ಮತ್ತು ಅರ್ಜುನ್ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಪ್ರೀತಿಸುತ್ತಿದ್ದು ಸದ್ಯದಲ್ಲೇ ಮದುವೆ ಕೂಡ ಆಗುತ್ತಾರೆ ಎನ್ನುವ ಸುದ್ದಿ ಅನೇಕ ಸಮಯದಿಂದ ಕೇಳಿ ಬರುತ್ತಲೇ ಇದೆ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ಕಾರಣಕ್ಕಾಗಿಯೇ ಇಬ್ಬರು ಈ ಹಿಂದೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.