ಮೊದಲ ಕಮರ್ಷಿಯಲ್ ವಿಮಾನ ತಯಾರಿಸಿದ ಚೀನಾ – 164 ಸೀಟ್ ಸಾಮರ್ಥ್ಯದ ಚೀನಾ ವಿಮಾನ ಯಶಸ್ವಿ ಹಾರಾಟ

ಮೊದಲ ಕಮರ್ಷಿಯಲ್ ವಿಮಾನ ತಯಾರಿಸಿದ ಚೀನಾ – 164 ಸೀಟ್ ಸಾಮರ್ಥ್ಯದ ಚೀನಾ ವಿಮಾನ ಯಶಸ್ವಿ ಹಾರಾಟ

ನ್ಯೂಸ್ ಆ್ಯರೋ‌ : ಚೀನಾ ಸದಾ ಏನಾದರೊಂದು ಸಂಶೋಧನೆಯಲ್ಲಿ ತೊಡಗಿರುತ್ತದೆ. ಬಾಹ್ಯಾಕಾಶದಿಂದ ಹಿಡಿದು ವಾಹನದವರೆಗೆ ಅನ್ವೇಷಣೆ ಮಾಡಿಕೊಂಡೇ ಇರುತ್ತದೆ. ಇದೀಗ ದೇಶೀಯವಾಗಿ ನಿರ್ಮಿಸಿದ ಚೀನಾದ ಪ್ರಯಾಣಿಕ ವಿಮಾನ ಸಿ919 ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

ಈ ವಿಮಾನ ಶಾಂಘೈ ಏರ್​ಪೋರ್ಟ್​ನಿಂದ ಬೆಳಗ್ಗೆ 10:32ಕ್ಕೆ ಹೊರಟು ಬೀಜಿಂಗ್ ಏರ್​ಪೋರ್ಟ್ ಅನ್ನು ಮಧ್ಯಾಹ್ನ 12:31ಕ್ಕೆ ತಲುಪಿತು. ಈ ಹಾರಾಟದಲ್ಲಿ ಯಾವ ತೊಂದರೆಯೂ ಎದುರಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದ ಕಮರ್ಷಿಯಲ್ ಏರ್​ಕ್ರಾಫ್ಟ್ ಕಾರ್ಪೊರೇಶನ್ (COMAC- Commercial Aircraft Corporation of China) ಈ ವಿಮಾನವನ್ನು ಅಭಿವೃದ್ಧಿಪಡಿಸಿದ್ದು, ಕಳೆದ ವರ್ಷದ ಸೆಪ್ಟಂಬರ್ ನಲ್ಲೇ ಆ ದೇಶದ ನಾಗರಿಕ ವಿಮಾನಯಾನ ಆಡಳಿತವು ಸರ್ಟಿಫಿಕೇಟ್ ಕೊಟ್ಟು ಅನುಮತಿ ನೀಡಿತ್ತು.

ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ಗೆ ಈ ವಿಮಾನ ಸೇರಿದ್ದಾಗಿದೆ. ಅವಳಿ ಎಂಜಿನ್‌ ಹೊಂದಿರುವ ಈ ವಿಮಾನ 164 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.

ಚೀನಾದ ಜೊತೆಗೆ ಹಲವು ದೇಶಗಳು ಸ್ವಂತವಾಗಿ ಮಿಲಿಟರಿ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತವೆ. ಆದರೆ ಕಮರ್ಷಿಯಲ್ ವಿಮಾನ ತಯಾರಿಯಲ್ಲಿ ಪ್ರಾಬಲ್ಯ ಇರುವುದು ಪಾಶ್ಚಿಮಾತ್ಯ ದೇಶದ ಬೆರಳೆಣಿಕೆಯ ಕಂಪೆನಿಗಳಿಗೆ. ಇವತ್ತು ಹಾರಾಡುತ್ತಿರುವ ಬಹುತೇಕ ಎಲ್ಲಾ ಪ್ಯಾಸೆಂಜರ್ ವಿಮಾನಗಳು ಬೋಯಿಂಗ್ ಮತ್ತು ಏರ್​ಬಸ್ ಕಂಪೆನಿಗಳಿಗೆ ಸೇರಿದ್ದಾಗಿದೆ. ಇಂಥ ಹೊತ್ತಿನಲ್ಲಿ ಚೀನಾದ ಕಂಪೆನಿಯು ಸ್ಪರ್ಧೆಗೆ ಇಳಿದಿದೆ.

ಬಹಳ ವರ್ಷಗಳ ಹಿಂದೆಯೇ ಸಿಒಎಂಎಸಿ ಪ್ಯಾಸೆಂಜರ್ ಏರ್​ಕ್ರಾಫ್ಟ್ ಅಭಿವೃದ್ಧಿಗೆ ಇಳಿದಿತ್ತಾದರೂ ವಿವಿಧ ಕಾರಣಗಳಿಂದ ತಡವಾಗಿತ್ತು. ಇದರ ಮೊದಲ ಪ್ರಾಯೋಗಿಕ ಹಾರಾಟ 2017ರಲ್ಲೇ ಆಗಿತ್ತು. ಅದಾದ ಬಳಿಕ ಎಲ್ಲಾ ರೀತಿಯ ಪ್ರತಿಕೂಲ ಹವಾಮಾನದಲ್ಲೂ ಇದರ ಹಾರಾಟ ಪ್ರಯೋಗ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳಲ್ಲೂ ಈ ವಿಮಾನ ತೇರ್ಗಡೆಯಾಗಿ ಬಂದು ಈಗ ಮೊದಲ ಕಮರ್ಷಿಯಲ್ ಫ್ಲೈಟ್ ಹಾರಾಟ ನಡೆದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *