ಹುಟ್ಟುಹಬ್ಬಕ್ಕೂ ಮುನ್ನ ರಾಕಿಂಗ್ ಸ್ಟಾರ್ ಬಹಿರಂಗ ಕ್ಷಮೆ ಯಾಚನೆ – ಯಶ್ ಬರೆದಿರುವ ಸೀಕ್ರೆಟ್ ಪತ್ರದಲ್ಲಿ ಏನಿದೆ…!?

ಹುಟ್ಟುಹಬ್ಬಕ್ಕೂ ಮುನ್ನ ರಾಕಿಂಗ್ ಸ್ಟಾರ್ ಬಹಿರಂಗ ಕ್ಷಮೆ ಯಾಚನೆ – ಯಶ್ ಬರೆದಿರುವ ಸೀಕ್ರೆಟ್ ಪತ್ರದಲ್ಲಿ ಏನಿದೆ…!?

ನ್ಯೂಸ್ ಆ್ಯರೋ : ಕೆಜಿಎಫ್ ಅನ್ನುವ ಒಂದು ಬ್ರಾಂಡ್ ಮೂಲಕ ಸದ್ಯ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಕೊನೆಗೂ ತಮ್ಮ ಮುಂದಿನ ಸಿನಿಮಾ ವಿಚಾರದಲ್ಲಿ ತುಟಿ ಬಿಚ್ಚಿದ್ದು, ಸಿನಿಮಾ ಬಗ್ಗೆ ಆದಷ್ಟು ಬೇಗ ಮಾತನಾಡುತ್ತೇನೆ, ಆದರೆ ನನಗೊಂದಿಷ್ಟು ಸಮಯ ಕೊಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

‘ಕೆಜಿಎಫ್-1 ಹಾಗೂ ಕೆಜಿಎಫ್-2’ ಸಿನಿಮಾಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ. ಈ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಅವರ ಹುಟ್ಟುಹಬ್ಬದಂದು ಸಿನಿಮಾ ಅನೌನ್ಸ್ ಆಗಬಹುದು ಎಂಬುದು ಅವರ ಅಭಿಮಾನಿಗಳ ಮತ್ತು ಭಾರತೀಯ ಸಿನಿಮಾ ರಂಗದ ನಿರೀಕ್ಷೆಯಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನು‌ ಸುಳ್ಳಾಗಿಸಿದ ಯಶ್, ಈ ಬಗ್ಗೆ ಅಭಿಮಾನಿಗಳಿಗೊಂದು ಪತ್ರ ಬರೆದಿದ್ದಾರೆ.

ಆಪ್ತ ಮೂಲಗಳ ಪ್ರಕಾರ ಯಶ್ ಕೆಜಿಎಫ್ ಗೆಲುವಿನ‌ ನಂತರ ಯಾವುದೇ ಕಥೆಗಳನ್ನು ಮೆಚ್ಚಿಕೊಂಡಿಲ್ಲ. ಇದೇ ಕಾರಣದಿಂದಾಗಿ ಅವರ ಮುಂದಿನ ಸಿನಿಮಾದ ಘೋಷಣೆ ತಡವಾಗುತ್ತಿದೆ. ಇದೀಗ ತಮಿಳು ನಿರ್ದೇಶಕರೊಬ್ಬರ ಕಥೆಯನ್ನು ಯಶ್ ಇಷ್ಟಪಟ್ಟಿದ್ದು ಅದರ ಮೇಲೆ ಕೆಲಸಗಳು ನಡೆಯುತ್ತಿವೆ ಎನ್ನಲಾಗಿದೆ.

ಯಶ್ ಬರೆದ ಪ್ರೀತಿಯ ಪತ್ರ

ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು‌ ನೀವೆಲ್ಲ ಕಾಯುತ್ತಿದ್ದೀರಾ. ಹುಟ್ಟಿದ ದಿನ‌ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ. ನೀವು ನನ್ನ ದಿನವನ್ನು ನಿಮ್ಮ ದಿನವನ್ನಾಗಿ ವಿಜ್ರಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನೂ ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನು ನೋಡಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ.

ಆದರೆ ಜಗದಗಲ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದನ್ನೇನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ‌ ಉಡುಗೊರೆ.

ಕ್ಷಮಿಸಿ ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ‌ ಇರಲು ಸಾಧ್ಯವಾಗುತ್ತಿಲ್ಲ. ಆದರೆ‌ ಆದಷ್ಟು ಬೇಗ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣಗೊಳಿಸುತ್ತೇನೆ. ಎಂದು ರಾಕಿಂಗ್ ಸ್ಟಾರ್ ಪತ್ರದಲ್ಲಿ ತಮ್ಮ ಪ್ರೀತಿಯ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದರೊಂದಿಗೆ ಕೆಜಿಎಫ್ ಸುಲ್ತಾನ ದೊಡ್ಡದಾಗಿ ಏನನ್ನೋ ಮಾಡಲು ಹೊರಟ್ಟಿದ್ದಾರೆ ಅನ್ನುವುದಂತೂ ಸ್ಪಷ್ಟ..!!

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *