ಒಟಿಟಿ ವೇದಿಕೆಯಲ್ಲಿ ಕಾಂತಾರ ಪ್ರಸಾರ – ಕಿಕ್‌ ನೀಡುತ್ತಿಲ್ಲ ಹೊಸ ರಾಗದ ವರಾಹ ರೂಪಂ ಹಾಡು, ಕೊನೆಗೂ ಸೋಲೊಪ್ಪಿಕೊಂಡ್ರಾ ಅಜನೀಶ್ ಲೋಕನಾಥ್, ಹೊಂಬಾಳೆ?

ನ್ಯೂಸ್‌ ಆ್ಯರೋ : ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಾ, ಗಲ್ಲಾಪೆಟ್ಟಿಗೆಯಲ್ಲಿ ₹ 400 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಈ ಮಧ್ಯೆ ಕಾಂತಾರ ಸಿನಿಮಾ ಗುರುವಾರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ.

ಕಾಂತಾರವನ್ನು ವೀಕ್ಷಿಸಿದ್ದ ಪ್ರೇಕ್ಷಕರು ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಮೆಚ್ಚಿಕೊಂಡಿದ್ದರು. ಅದರಲ್ಲಿಯೂ ಚಿತ್ರದ ಅಂತಿಮದಲ್ಲಿ ಬರುವ ‘ವರಾಹ ರೂಪಂ’ ಹಾಡು ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು.

ಕಾಂತಾರ ಅಮೆಜಾನ್ ಪ್ರೈಮ್ ವಿಡಿಯೊ ಓಟಿಟಿಯಲ್ಲಿ ನಿನ್ನೆಯಿಂದ ಪ್ರಸಾರವಾಗುತ್ತಿದ್ದು, ಮತ್ತೊಮ್ಮೆ ಕಾಂತಾರ ಚಿತ್ರವನ್ನು ನೋಡಲು ಮುಂದಾದ ಪ್ರೇಕ್ಷಕನಿಗೆ ನಿರಾಸೆಯಾಗಿದೆ. ಚಿತ್ರದ ಕೊನೆಯಲ್ಲಿ ಇದ್ದ ವರಾಹ ರೂಪಂ ಹಾಡಿನ ರಾಗ ಸಂಪೂರ್ಣ ಬದಲಾಗಿ ಹೋಗಿದೆ.

ಹಾಡಿನ ಸಾಹಿತ್ಯ ಹಾಗೇ ಉಳಿದಿದ್ದು ಹಾಡಿಗೆ ಬಳಸಲಾಗಿದ್ದ ರೋಮಾಂಚನಕಾರಿ ಸಂಗೀತವನ್ನೂ ಸಹ ಬದಲಾವಣೆ ಮಾಡಲಾಗಿದೆ. ಈ ಹಿಂದಿನ ಹಾಡಿನಲ್ಲಿ ಇದ್ದಷ್ಟು ಗಮ್ಮತ್ತು ಈ ಹಾಡಿನಲ್ಲಿ ಇಲ್ಲ ಹಾಗೂ ಹಳೆಯ ಹಾಡನ್ನು ಕೇಳಿದ್ದ ಕೇಳುಗರಿಗೆ ಈ ಹಾಡು ಕೊಂಚವೂ ಕಿಕ್ ನೀಡುವುದಿಲ್ಲ ಎಂಬ ಮಾತುಗಳು ಪ್ರೇಕ್ಷಕರಿಂದ ವ್ಯಕ್ತವಾಗಿದೆ.

ಹಿನ್ನೆಲೆ:

ಕಾಂತಾರ ಸಿನಿಮಾ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಂತೆ ಹೊಸ ಹೊಸ ವಿವಾದಗಳು ಸೃಷ್ಟಿಯಾದವು. ವರಾಹ ರೂಪಂ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದವೂ ತಲೆದೂರಿತು. ಈ ಹಾಡು ಮಲಯಾಳಂನ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪೋಸ್ ಮಾಡಿದ್ದ ‘ನವರಸಮ್’ ಹಾಡಿನ ಕಾಪಿ ಎಂದು ಟ್ರೋಲ್ಸ್ ಶುರುವಾದವು. ಇನ್ನು ಕೆಲವರು ಇದು ಅದೇ ಹಾಡಿನ ಕಾಪಿ ಎಂದರೆ, ಇನ್ನೂ ಕೆಲವರು ಎರಡೂ ಹಾಡುಗಳಿಗೂ ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟಿದ್ದರು.

ವರಾಹ ರೂಪಂ ಹಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ಥೈಕ್ಕುಡಂ ಬ್ರಿಡ್ಜ್‌ನ ವಿಯಾನ್ ಫೆರ್ನಾಂಡಿಸ್ ಕೇರಳದ ಸ್ಥಳೀಯ ನ್ಯಾಯಾಲಯದಲ್ಲಿದೂರು ಕೂಡ ದಾಖಲು ಮಾಡಿದರು. ಅದರಂತೆ ಹಾಡನ್ನು ಉಪಯೋಗಿಸದಂತೆ ನ್ಯಾಯಾಲಯ ತೀರ್ಪನ್ನೂ ಸಹ ನೀಡಿತ್ತು. ಆದರೆ ಇದಕ್ಕೆಲ್ಲಾ ಸ್ಪಂದಿಸದ ಕಾಂತಾರ ಚಿತ್ರತಂಡ ಚಿತ್ರಮಂದಿರದಲ್ಲಿ ಹಾಡಿಗೆ ಕತ್ತರಿ ಹಾಕದೆಯೇ ಪ್ರದರ್ಶನ ಮಾಡಿತ್ತು. ಆದರೆ, ಇದೀಗ ಒಟಿಟಿಗೆ ಕಾಂತಾರ ಲಗ್ಗೆ ಇಟ್ಟಿದ್ದು ವರಾಹ ರೂಪಂ ಹಾಡೇ ಬದಲಾಗಿಬಿಟ್ಟಿದೆ..!!

ಥೈಕ್ಕುಡಂ ಬ್ರಿಡ್ಜ್ ಎರಡೆರಡು ಕೇಸ್ ಹಾಕಿದ್ದರೂ ಪ್ರತಿಕ್ರಿಯಿಸದೇ ಇದ್ದ ಹೊಂಬಾಳೆ ಸಂಸ್ಥೆ ಈಗ ಒಟಿಟಿಯಲ್ಲಿ ಹಾಡನ್ನು ಬದಲಾಯಿಸಿ ಬಿಡುಗಡೆ ಮಾಡುವ ಮೂಲಕ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಂಡಂತಿದೆ. ಅತ್ತ ತಾನು ಯಾವ ಹಾಡನ್ನೂ ಕದ್ದಿಲ್ಲ ಎಂದು ಖಡಕ್ ಆಗಿ ಹೇಳಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೂ ಇದು ದೊಡ್ಡ ಹಿನ್ನಡೆಯಾಗಿದೆ.

ಇದಕ್ಕೂ ಮುನ್ನವೇ ಯುಟ್ಯೂಬ್‌ನಿಂದ ವರಾಹ ರೂಪಂ ಹಾಡು ಡಿಲಿಟ್ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಆಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಂದಲೂ ಹಾಡನ್ನು ತೆಗೆದು ಹಾಕಲಾಗಿತ್ತು

ಒಟಿಟಿಯಲ್ಲಿ ಚಿತ್ರ ನೋಡಿ

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *