ಇನ್ನೊಂದು ವರ್ಷದಲ್ಲಿ ಶಾಲೆ ಬಿಡುವಂತೆ ಮಗ ವಿನೀಶ್‌ಗೆ ವಾರ್ನಿಂಗ್ ಕೊಟ್ಟ ಡಿ ಬಾಸ್ – ವರ್ಷದೊಳಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಆಗ್ತಾರಾ ಜೂನಿಯರ್ ದರ್ಶನ್…!?

ನ್ಯೂಸ್ ಆ್ಯರೋ : ಮಗ ವಿನೀಶ್‌ನನ್ನು ಇಂಡಸ್ಟ್ರಿಗೆ ಕರೆತರುವುದಾಗಿ ಈ ಹಿಂದೆ ಸುಳಿವು ನೀಡಿದ್ದ ಡಿ ಬಾಸ್ ದರ್ಶನ್ ಇದೀಗ ಮಗನಿಗೆ ಒಂದು ವರ್ಷದೊಳಗೆ ಈ ಬಗ್ಗೆ ನಿರ್ಧರಿಸುವ ಕಾಲಾವಕಾಶವನ್ನು ನೀಡಿದ್ದಾರೆ‌‌. ಯೂಟ್ಯೂಬ್ ಸಂದರ್ಶನವೊಂದರಲ್ಲಿ ದರ್ಶನ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಕಡೆ ಶ್ರಮ ಪಡಬೇಕು. ವಿದ್ಯಾಭ್ಯಾಸ ಅಥವಾ ಯಾವುದೇ ಕೆಲಸವನ್ನು ಗುರಿಯಿಲ್ಲದೆ ಮಾಡಿದರೆ ಅದು ವ್ಯರ್ಥ ಎಂದು ಹೇಳಿರುವ ಡಿಬಾಸ್ ಮಗನಿಗೆ ಈ ಸಂಬಂಧ ಬುದ್ಧಿ ಹೇಳಿದ್ದಾರೆ. ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ತೋರದಿರುವ ಕಾರಣ ಮಗನಿಗೆ ಈ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿನೀಶ್‌ಗೆ ತಂದೆ ದರ್ಶನ್ ಅವರು ಒಂದು ವರ್ಷಗಳ ಕಾಲ ಅವಕಾಶ ನೀಡಿದ್ದಾರೆ. ವಿದ್ಯಾಭ್ಯಾಸವಾ ಅಥವಾ ಚಿತ್ರರಂಗವಾ ಎಂದು ನಿರ್ಧರಿಸಬೇಕು. ಸಿನಿಮಾರಂಗಕ್ಕೆ ಬರುವುದಾದರೆ ವಿದ್ಯಾಭ್ಯಾಸವನ್ನು ಇಲ್ಲಿಗೆ ನಿಲ್ಲಿಸಬೇಕು. ಒಟ್ಟಿನಲ್ಲಿ ನಿನಗೆ ಒಂದು ವರ್ಷಗಳ ಅವಕಾಶ ಇದ್ದು, ಯಾವ ರಂಗಕ್ಕೆ ಬರಬೇಕು ಎನ್ನುವುದು ನಿನಗೆ ಬಿಟ್ಟಿದ್ದೇನೆ ಎಂದು ವಾರ್ನಿಂಗ್ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ದೊಡ್ಡ ಖಳನಾಯಕನ ಮಗನಾದರೂ ತುಂಬಾ ಕಷ್ಟ ಪಟ್ಟು ಬೆಳೆದಿದ್ದಾರೆ. ಲೈಟ್‌ ಬಾಯ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್ ಅವರು ಯಶಸ್ಸನ್ನು ಕಾಣಲು ತುಂಬಾನೇ ಶ್ರಮಪಟ್ಟಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿರುವ ದರ್ಶನ್ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *