ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ – ಯಾವಾಗ ತೆರಗಪ್ಪಳಿಸುತ್ತೆ ಗೊತ್ತಾ ಉಪ್ಪಿ ಗ್ಯಾಂಗ್ ಸ್ಟರ್ ಮೂವಿ? ಮತ್ತೆ ಅಪ್ಪು ನೆನಪಾಗಿದ್ದೇಕೆ?

ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ – ಯಾವಾಗ ತೆರಗಪ್ಪಳಿಸುತ್ತೆ ಗೊತ್ತಾ ಉಪ್ಪಿ ಗ್ಯಾಂಗ್ ಸ್ಟರ್ ಮೂವಿ? ಮತ್ತೆ ಅಪ್ಪು ನೆನಪಾಗಿದ್ದೇಕೆ?

ನ್ಯೂಸ್ ಆ್ಯರೋ : ಸದ್ಯದ ಕಾಲಮಾನ ಕನ್ನಡ ಚಿತ್ರರಂಗದ ಸುವರ್ಣಯುಗ ಎಂದರೆ ತಪ್ಪಾಗಲಾರದು. ಹಿಂದೆಂದೂ ತೆರೆ ಕಾಣದಂತಹ ಸಿನಿಮಾಗಳು, ಹಿಂದೆಂದೂ ಮಾಡದ ಪ್ರಯತ್ನಗಳು ಈಗ ಕನ್ನಡ ಚಿತ್ರರಂಗದಲ್ಲಾಗುತ್ತಿದೆ. ಇಡೀ ಭಾರತೀಯ ಚಿತ್ರರಂಗ ಕನ್ನಡ‌ ಸಿನಿಮಾದೆಡೆಗೆ ದೃಷ್ಟಿ ನೆಟ್ಟಿದೆ. ಇದೇ ಹೊತ್ತಿಗೆ ಮೇಕಿಂಗ್, ಟೀಸರ್ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಕನ್ನಡದ ಮತ್ತೊಂದು ಬಿಗ್ ಬಜೆಟ್ ಸಿನಿಮಾ ‘ಕಬ್ಜ’ ಇದೇ ವರ್ಷ ಮಾ.17 ರಂದು, ನಟ ದಿವಂಗತ ಪುನಿತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಏಕಕಾಲಕ್ಕೆ ಒಟ್ಟು 10ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ‘ಕಬ್ಜ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಪುನೀತ್ ಜನ್ಮದಿನಕ್ಕೆ ಸಿನಿಮಾ‌ ರಿಲೀಸ್

‘ಕಬ್ಜ’ ಸಿನಿಮಾ ಮಾ.17ಕ್ಕೆ ಅಂದರೆ ಕನ್ನಡದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಆ ದಿನವೇ ಯಾಕೆ‌ ಸಿನಿಮಾ‌ ಬಿಡುಗಡೆ‌ ಮಾಡುತ್ತಿದ್ದೀರಿ, ಎಂಬ ಪ್ರಶ್ನೆಗೆ ನಿರ್ದೇಶಕ ಆರ್. ಚಂದ್ರು ಉತ್ತರಿಸಿದ್ದು, ‘ನಾವು ಕಬ್ಜ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದಾಗ ಅದನ್ನ ಪುನೀತ್ ರಾಜ್‍ಕುಮಾರ್ ಅವರು ನೋಡಿ ಮೆಚ್ಚಿಕೊಂಡಿದ್ದರು. ಜೊತೆಗೆ ಶೂಟಿಂಗ್ ಸೆಟ್‌ಗೆ ಬೇಟಿ ನೀಡಿ ಶುಭ ಹಾರೈಸಿದ್ದರು. ಈ ಎಲ್ಲಾ ಕಾರಣಗಳಿಂದ ಪುನೀತ್ ಅವರನ್ನು ಮತ್ತೆ ಮತ್ತೆ ಕನ್ನಡ ನೆಲದಲ್ಲಿ ಸಂಭ್ರಮಿಸುವ ಉದ್ದೇಶದಿಂದ ಅವರ ಜನ್ಮದಿನದಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

‘ಕಬ್ಜ’ ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದು ಮುಖ್ಯ ಭೂಮಿಕೆಯಲ್ಲಿ ಉಪೇಂದ್ರ, ಸುದೀಪ್ ಸೇರಿದಂತೆ ತೆಲುಗಿನ ಮುರಳಿ ಕೃಷ್ಣ ಹಾಗೂ ಇತರೆ ಸಿನಿಮಾ‌ ರಂಗದ ನಟರು ನಟಿಸಿದ್ದಾರೆ ಎನ್ನಲಾಗುತ್ತಿದೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ ಎಂಬ ಮಾತುಗಳಿವೆ. ಇತ್ತೀಚೆಗೆ, ಐಎಂಡಿಬಿ ಬಿಡುಗಡೆ ಮಾಡಿರುವ ಬಹುನಿರೀಕ್ಷಿತ ಸಿನಿಮಾಗಳ ಭಾರತೀಯ 20 ಚಿತ್ರಗಳ ಪೈಕಿ 7 ಸ್ಥಾನ‌ ಪಡೆದಿರುವ ಏಕೈಕ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಕಬ್ಜ’ ಪಾತ್ರವಾಗಿದೆ‌.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *