ಉದ್ರೇಕದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗಲು ಒತ್ತಾಯ – ನಿರ್ದೇಶಕನ ಕರಾಳ ಮುಖ ಬಹಿರಂಗಪಡಿಸಿದ ಹಿರಿಯ ನಟಿ…!!

ಉದ್ರೇಕದ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗಲು ಒತ್ತಾಯ – ನಿರ್ದೇಶಕನ ಕರಾಳ ಮುಖ ಬಹಿರಂಗಪಡಿಸಿದ ಹಿರಿಯ ನಟಿ…!!

ನ್ಯೂಸ್ ಆ್ಯರೋ‌ : ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಫ್ರೆಂಚ್ ನಟಿ 85 ವರ್ಷದ ಜೇನ್‌ ಫೋಂಡಾ, ಫ್ರೆಂಚ್‌ ನಿರ್ದೇಶಕ ರೆನೆ ಕ್ಲೆಮೆಂಟ್‌ ಬಗ್ಗೆ ಸ್ಫೋಟಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

58 ವರ್ಷಗಳ ಹಿಂದಿನ ಕರಾಳ ನೆನಪನ್ನು ಬಿಚ್ಚಿಟ್ಟ ನಟಿ, 1964ರಲ್ಲಿ ರೆನೆ ಕ್ಲೆಮೆಂಟ್‌ ಥ್ರಿಲ್ಲರ್‌ ʻಜಾಯ್‌ ಹೌಸ್‌ʼ ಸಿನಿಮಾ ಚಿತ್ರೀಕರಣ ಮಾಡುವಾಗ, ನನ್ನನ್ನು ತನ್ನೊಂದಿಗೆ ಮಲಗುವಂತೆ ಕೇಳಿದ್ದ ಎಂದು ಹೇಳಿದ್ದಾರೆ. ‘ವಾಚ್‌ ವಾಟ್‌ ಹ್ಯಾಪನ್ಸ್‌’ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಅಂದು ಕ್ಲೆಮೆಂಟ್‌ಗೆ 51 ವರ್ಷ ವಯಸ್ಸಾಗಿತ್ತು, ನನಗೆ 27 ವರ್ಷ. ಕ್ಲೆಮೆಂಟ್‌ ನನ್ನೊಂದಿಗೆ ಮಲಗಲು ಬಯಸಿದ್ದ. ಏಕೆಂದರೆ ಅವನು ತನ್ನ ಉದ್ರೇಕದ ಸಾಮರ್ಥ್ಯ ತಿಳಿದುಕೊಳ್ಳಬೇಕಿತ್ತು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಜೇನ್‌ ಫೋಂಡಾ ಹೇಳಿಕೊಂಡಿದ್ದಾರೆ.

1950-60 ದಶಕಗಳಲ್ಲಿ ಅತ್ಯಂತ ಪ್ರಭಾವಿ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಕ್ಲೆಮೆಂಟ್‌ ಕೇನ್ಸ್‌ ಚಿತ್ರೋತ್ಸವದಲ್ಲಿ ಐದು ಬಹುಮಾನಗಳನ್ನೂ ಬಾಚಿಕೊಂಡಿದ್ದರು. ಫೋಂಡಾ ʻಜಾಯ್‌ ಹೌಸ್‌ʼ ಸಿನಿಮಾದಲ್ಲಿ ವಿಧವೆ ಸೊಸೆ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ʻಬುಕ್‌ ಕ್ಲಬ್‌: ದಿ ನೆಕ್ಸ್ಟ್‌ ಚಾಪ್ಟರ್‌ʼ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಇದು 2018ರಲ್ಲಿ ಬಿಡುಗಡೆಯಾದ ಚಿತ್ರದ ಮುಂದುವರಿದ ಭಾಗ ಇದಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *