ಬಿಗ್ ಬಾಸ್ ಮನೆಯಲ್ಲಿ ಸೀರೆ ಎತ್ತಿ ಸೊಂಟಕ್ಕೆ ಮುತ್ತಿಟ್ಟ ಸ್ಪರ್ಧಿ – ವೈರಲ್ ಆಯ್ತು ರೋಮ್ಯಾನ್ಸ್ ವಿಡಿಯೋ..!!

ಬಿಗ್ ಬಾಸ್ ಮನೆಯಲ್ಲಿ ಸೀರೆ ಎತ್ತಿ ಸೊಂಟಕ್ಕೆ ಮುತ್ತಿಟ್ಟ ಸ್ಪರ್ಧಿ – ವೈರಲ್ ಆಯ್ತು ರೋಮ್ಯಾನ್ಸ್ ವಿಡಿಯೋ..!!

ನ್ಯೂಸ್ ಆ್ಯರೋ : ಬಿಗ್ ಬಾಸ್ ಮನೆಯೊಳಗೆ ನಡೆಯುವ ಸ್ಪರ್ಧಿಗಳ ಕಸರತ್ತು ಒಂದೆರಡಲ್ಲ. ಲವ್ ಸ್ಟೋರಿ, ಬ್ರೇಕಪ್, ಫ್ರೆಂಡ್ಶಿಪ್, ಗಲಾಟೆ, ಕಣ್ಣೀರು ಇದೆಲ್ಲಾ ಸರ್ವೇಸಾಮಾನ್ಯ ಎಂಬಂತಾಗಿದೆ. ಈ ನಡುವೆ ದೊಡ್ಮನೆಯಲ್ಲಿ ಕೆಲವೊಮ್ಮೆ ಕಪಲ್ಸ್ ನಡುವೆ ನಡೆಯೋ ರೊಮ್ಯಾನ್ಸ್ ವೀಕ್ಷಕರನ್ನು ತಬ್ಬಿಬ್ಬು ಮಾಡುತ್ತದೆ.

ಸದ್ಯ, ಬಿಗ್ ಬಾಸ್ ಮನೆಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವೈರಲ್ ವಿಡಿಯೋದಲ್ಲಿ ಸ್ಪರ್ಧಿಯೊಬ್ಬ ಮಹಿಳಾ ಸ್ಪರ್ಧಿಯೊಬ್ಬರ ಸೀರೆ ಎತ್ತಿ ಸೊಂಟಕ್ಕೆ ಮತ್ತಿಟ್ಟಿದ್ದಾನೆ. ಇಷ್ಟೇ ಅಲ್ಲದೇ ಆಕೆಗೆ ಮುತ್ತಿಕ್ಕುತ್ತಾ ಮುದ್ದಾಡಿದ್ದು, ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಹಿಂದಿ ಬಿಗ್ ಬಾಸ್ ನಲ್ಲಿ ಘಟನೆ!

ಈ ಘಟನೆ ನಡೆದಿರುವುದು ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ. ಹಿಂದಿ ಬಿಗ್ ಬಾಸ್ ನ ಸಮರ್ಥ್‌ ಜುರೆಲ್ ಹಾಗೂ ಇಶಾ ಮಾಳವಿಯಾ ವಿಷಯ ಸುದ್ದಿಯಾಗಿತ್ತು. ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಇಶಾ ತಮ್ಮ ಹಳೆಯ ಬಾಯ್‌ಫ್ರೆಂಡ್ ಅಭಿಷೇಕ್ ಜೊತೆ ಹೆಚ್ಚು ಕ್ಲೋಸ್ ಆಗಿದ್ದರು. ಈ ಸಂದರ್ಭದಲ್ಲೇ ಮನೆಗೆ ವೈಲ್ಡ್‌ ಕಾರ್ಡ್‌ನಲ್ಲಿ ಸಮರ್ಥ್ ಎಂಟ್ರಿಯಾಗಿತ್ತು.

ನಾನು ಇಶಾ, ಬಾಯ್‌ಫ್ರೆಂಡ್ ಎಂದು ಸಮರ್ಥ್‌ ಪರಿಚಯಿಸಿಕೊಂಡಿದ್ದರು. ಆದರೆ ಇಶಾ ಇದನ್ನು ಅಲ್ಲಗಳೆದಿದ್ದರು. ಸಾಕಷ್ಟು ಹೈಡ್ರಾಮಾದ ನಂತರ ಇಶಾ, ಅಭಿಷೇಕ್‌ ನನ್ನ ಎಕ್ಸ್‌ ಬಾಯ್‌ಫ್ರೆಂಡ್ ಮತ್ತು ಸಮರ್ಥ್‌ ನನ್ನ ಪ್ರಸೆಂಟ್ ಬಾಯ್‌ಫ್ರೆಂಡ್ ಎಂದು ಒಪ್ಪಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರ ವರ್ತನೆಗಳು ದೊಡ್ಮನೆಯಲ್ಲಿ ಮಿತಿ ಮೀರಲು ಆರಂಭಿಸಿತು.

ಸೊಂಟಕ್ಕೆ ಮುತ್ತಿಟ್ಟ ರಸಿಕ ಸ್ಪರ್ಧಿ!

ವೈರಲ್ ಆಗಿರುವ ವಿಡಿಯೋದಲ್ಲಿ ಸಮರ್ಥ್‌ ಹಾಗೂ ಇಶಾ ಇಬ್ಬರೂ ಬೆಡ್ ಮೇಲೆ ಕುಳಿತಿರುತ್ತಾರೆ. ಈ ವೇಳೆ ಸಮರ್ಥ್‌, ಇಶಾಗೆ ಯಾವುದೋ ವಿಚಾರಕ್ಕಾಗಿ ಸಮಾಧಾನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆಕೆಯ ಮುಖ, ಭುಜವನ್ನು ಚುಂಬಿಸುತ್ತಾನೆ. ಸೀರೆಯನ್ನು ಸರಿಸಿ ಸೊಂಟಕ್ಕೆ ಕಿಸ್ ಮಾಡುತ್ತಾನೆ. ಈ ವಿಡಿಯೋ ಸದ್ಯ, ವೈರಲ್ ಆಗಿದೆ.

ಈ ಹಿಂದೆಯೂ ಈ ಜೋಡಿ ಬಿಗ್ ಬಾಸ್ ಮನೆಯ ಬೆಡ್ ರೂಮ್ ನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೈರಲ್ ರೊಮ್ಯಾನ್ಸ್ ಕಂಡಿರುವ ನೆಟ್ಟಿಗರು ಗರಂ ಆಗಿದ್ದಾರೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *