ದುಬಾರಿ ಕಾರು ಖರೀದಿ ಮಾಡಿದ ನಟಿ ರಚಿತಾ ಮಹಾಲಕ್ಷ್ಮೀ – ಬಿಗ್‌ ಬಾಸ್ ಸ್ಪರ್ಧಿಯ ಕಾರ್ ಪೋಟೋಸ್ ವೈರಲ್…!!

ದುಬಾರಿ ಕಾರು ಖರೀದಿ ಮಾಡಿದ ನಟಿ ರಚಿತಾ ಮಹಾಲಕ್ಷ್ಮೀ – ಬಿಗ್‌ ಬಾಸ್ ಸ್ಪರ್ಧಿಯ ಕಾರ್ ಪೋಟೋಸ್ ವೈರಲ್…!!

ನ್ಯೂಸ್ ಆ್ಯರೋ : ಇತ್ತೀಚೆಗೆ ತಮಿಳು ಬಿಗ್‌ ಬಾಸ್‌ ಸೀಸನ್ 6ರಲ್ಲಿ ಭಾಗಿಯಾಗಿದ್ದ ಕನ್ನಡದ ನಟಿ ರಚಿತಾ ಮಹಾಲಕ್ಷ್ಮೀ ಅವರು ಹೊಸ ದುಬಾರಿ ಕಾರನ್ನು ಖರೀದಿಸಿದ್ದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸಂಭ್ರಮದಲ್ಲಿ ಅವರ ಸ್ನೇಹಿತರು ಭಾಗಿಯಾಗಿದ್ದರು. ಈಚೆಗೆ ಅವರು ಬಿಗ್ ಬಾಸ್ ತಮಿಳು ಸೀಸನ್ 6 ಶೋನಲ್ಲಿ ಭಾಗಿಯಾಗಿದ್ದರು. 91 ದಿನಗಳ ಕಾಲ ಅವರು ಈ ಶೋನಲ್ಲಿ ಕಾಲ ಕಳೆದಿದ್ದರು. ಆರಂಭದಲ್ಲಿ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ರಚಿತಾ ಲಕ್ಷ್ಮೀ ಅವರು ತಮಿಳು, ತೆಲುಗು ಭಾಷೆಯ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

‘ಸಾಗುತ ದೂರ ದೂರ’, ‘ಸೂರ್ಯಕಾಂತಿ’, ‘ಮೇಘ ಮಂದಾರ’, ‘ಸವಿಗನಸು’, ‘ಬಂದೆ ಬರತವ್ವ ಕಾಲ’, ‘ಪಿರಿವೊಮ್ ಸಂತಿಪ್ಪೊಮ್’, ‘ಸುಪ್ರಭಾತ’, ‘ಜ್ಯೂನಿಯರ್ ಸೀನಿಯರ್’, ‘ಜ್ಯೂನಿಯರ್ ಸೂಪರ್ ಸ್ಟಾರ್ 3.0’, ‘ಮನೆಯೊಂದು ಮೂರು ಬಾಗಿಲು’, ‘ಮಸಾಲ ಕುದುಂಬಮ್’, ‘ಗೀತಾಂಜಲಿ’, ‘ನಚಿವರಪುರಂ’, ‘ಇಲ್ಲವರಸಿ’, ‘ಉಪ್ಪು ಕರುವಾಡು’, ‘ಸ್ವಾತಿ ಚಿಂಕುಲು’, ‘ಮಾ ನನ್ನ’, ‘ಸರವಣ್ ಮೀನಾಚಿ ಸೀಸನ್ 2’, ‘ಮಿಸ್ಟರ್ & ಮಿಸ್‌ಸ್ ಕಿಲಾಡಿಸ್’, ‘ಸರವಣ್ ಮೀನಾಚಿ ಸೀಸನ್ 3’ ಮುಂತಾದ ಧಾರಾವಾಹಿಗಳಲ್ಲಿ ರಚಿತಾ ಮಹಾಲಕ್ಷ್ಮೀ ಅವರು ನಟಿಸಿದ್ದಾರೆ.

ಬಿಗ್‌ ಬಾಸ್‌ ಶೋನಲ್ಲಿ ಭಾಗಿಯಾಗಿದ್ದ ವೇಳೆ ರಚಿತಾ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪತಿಯಿಂದ ದೂರವಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಇದೀಗ ತಮ್ಮ ಮನೆಗೆ ಹೊಸ ಕಾರನ್ನು ಸ್ವಾಗತಿಸಿರುವ ನಟಿ ಸಂತೋಷದಲ್ಲಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಕೋರಿ, ಆರಾಮಾಗಿ ಗಾಡಿಯನ್ನು ಓಡಿಸಿ ಎಂದು ಬರೆದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *