ನಿಮ್ಮ ದ್ವಿಚಕ್ರ ವಾಹನ‌ ಖರೀದಿ ಕನಸು ಈಗ ಇನ್ನಷ್ಟು ಸುಲಭ – ಬಂದಿದೆ ಕೇವಲ 34 ಸಾವಿರ ರೂಪಾಯಿ ಬೆಲೆಯ ಸೂಪರ್ ಸ್ಕೂಟಿ..

ನಿಮ್ಮ ದ್ವಿಚಕ್ರ ವಾಹನ‌ ಖರೀದಿ ಕನಸು ಈಗ ಇನ್ನಷ್ಟು ಸುಲಭ – ಬಂದಿದೆ ಕೇವಲ 34 ಸಾವಿರ ರೂಪಾಯಿ ಬೆಲೆಯ ಸೂಪರ್ ಸ್ಕೂಟಿ..

ನ್ಯೂಸ್ ಆ್ಯರೋ : ಏರುತ್ತಿರುವ ಇಂಧನ ಬೆಲೆ, ಹೆಚ್ಚುತ್ತಿರುವ ವಾಯು ಮಾಲಿನ್ಯ ಇದರೊಂದಿಗೆ ದ್ವಿಚಕ್ರ ವಾಹನ ಕೊಳ್ಳಬೇಕು ಎಂಬ ಕನಸು ನನಸಾಗಬೇಕಿದ್ದರೆ ಅದು ತುಸು ತ್ರಾಸದಾಯಕವೇ ಆಗಿದೆ. ಆದರೆ ನೀವೇನಾದರೂ ಇ-ಸ್ಕೂಟರ್ ಹುಡುಕುತ್ತಿದ್ದರೆ ಅದು ಸುಲಭವಾಗಿ ಕೈಗೆಟುಕಲಿದೆ. ಹೌದು, ಕೇವಲ 34ಸಾವಿರ ರೂಪಾಯಿ ಬೆಲೆಯ ಸೂಪರ್ ಸ್ಕೂಟಿಯೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ‌. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನ ಕೊಳ್ಳುವ ಯೋಚನೆಯಲ್ಲಿರುವವರಿಗೆ ಇದೊಂದು ಸಿಹಿ ಸುದ್ದಿಯಾಗಿದೆ. ಉಜಾಸ್ ಇವೆ ಎಂಬ ವಾಹನ ತಯಾರಿಕಾ ಕಂಪೆನಿಯು ವಿವಿಧ ಮಾದರಿಯ ಮಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಇದೀಗ ಅಹಂ ಎಂಬ ಸ್ಕೂಟಿಯನ್ನು ಈ ಕಂಪೆನಿ ಪರಿಚಯಿಸಿದ್ದು, ಕೈಗೆಟಕುವ ಬೆಲೆ ಹಾಗೂ ಇದರ ವೈಶಿಷ್ಟ್ಯತೆಗಳು ಕೂಡ ಉತ್ತಮವಾಗಿದೆ.

ಹೇಗಿದೆ ಈ ಸ್ಕೂಟರ್?

ಮಾರುಕಟ್ಟೆಗೆ ಬಂದಿರುವ ಈ ಉಜಾಸ್ ಇಗೋ LA ಎಲೆಕ್ಟ್ರಿಕಲ್ ಸ್ಕೂಟಿಯ ಬೆಲೆ ರೂಪಾಯಿ 34 ಸಾವಿರದಿಂದ ಆರಂಭವಾಗುತ್ತದೆ. ಆರಾಮ ಹಾಗೂ ಗುಣಮಟ್ಟದ ಯಾತ್ರೆಗಾಗಿ ಇದನ್ನು ಕೊಳ್ಳುವುದು ಉತ್ತಮ. ಈ ದ್ವಿಚಕ್ರ ವಾಹನವು ರಿವರ್ಸ್ ಡ್ರೈವ್ ಹಾಗೂ ಕೀ ಲೆಸ್ ರೈಡಿಂಗ್ ನಂತಹ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ವಾಹನವು ಕೆಂಪು, ನೀಲಿ, ಗಾಢ ಬೂದು ಮತ್ತು ತಿಳಿ‌ಬೂದು ಬಣ್ಣಗಳಲ್ಲಿ ಲಭ್ಯವಿದೆ. ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಾಹನವನ್ನು ಖರೀದಿಸಬಹುದಾಗಿದೆ.

ಚಾರ್ಜಿಂಗ್ ಸಿಸ್ಟಮ್ ಹೀಗಿದೆ ನೋಡಿ..

ಎಲೆಕ್ಟ್ರಿಕಲ್ ವಾಹನ‌ ಅಂದರೆ ಅದಕ್ಕೆ ತೈಲೋತ್ಪನ್ನಗಳ ಅಗತ್ಯವಿಲ್ಲ ಎಂಬುದು ನಿಮಗೆ ಗೊತ್ತೇ ಇದೆ. ಈ ಸ್ಕೂಟರ್ ನಲ್ಲಿ ವಿಶೇಷವಾದ ಲೆಡ್ ಆಸಿಡ್ ಬ್ಯಾಟರಿ ಸೌಲಭ್ಯವಿದೆ‌. ಈ ಬ್ಯಾಟರಿಯನ್ನು 6ರಿಂದ 7 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ. 46V ನಿಂದ 68V ವರೆಗಿನ ಚಾರ್ಜಿಂಗ್ ವೋಲ್ಟೇಜ್ ಇದರಲ್ಲಿದ್ದು, ಪವರ್ 250 ವ್ಯಾಟ್ ಆಗಿದೆ. ಒಟ್ಟು 8 ಲೀಟರ್ ಶೇಕರಣಾ ಸಾಮರ್ಥ್ಯ ಇದರಲ್ಲಿದ್ದು, ಇದು ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಇನ್ನುಳಿದಂತೆ ಟ್ಯೂಬ್ ಲೆಸ್ ಟೈರ್ ಇದರಲ್ಲಿದ್ದು, ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 75 ಕಿ.ಮೀ ಸುಗಮವಾಗಿ ಸಾಗಬಹುದು. ಈ ಸ್ಕೂಟರ್ ಬೆಲೆ ಜಾಸ್ತಿಯಾಗಿದೆ ಅನಿಸಿದರೆ ನಿಮಗೆ ಇ- ವಾಹನ ಮಾರುಕಟ್ಟೆಯಲ್ಲಿ ಬೇಕಾದಷ್ಟು ಆಯ್ಕೆಗಳಿವೆ. ಓಲಾ, ಹಿರೋ ಎಲೆಕ್ಟ್ರಿಕ್, ಈಥರ್, ಚೇತಕ್, ಟಿವಿಎಸ್ ಮುಂತಾದ ಕಂಪೆನಿಗಳು ವಿವಿಧ ಬೆಲೆಯ ಈ-ವಾಹನಗಳನ್ನು ಮಾರುಕಟ್ಟೆಗೆ‌ಬಿಡುತ್ತಿವೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *