‘ವೀಕೆಂಡ್ ವಿತ್ ರಮೇಶ್’ ರಿಯಾಲಿಟಿ ಶೋಗೆ ದಿನಗಣನೆ: ಈ ಆವೃತ್ತಿಯ ಮೊದಲ ಸಾಧಕ ಯಾರು ಗೊತ್ತಾ? ಸಾಧಕರ ಲಿಸ್ಟ್‌ನಲ್ಲಿ ಮೋಹಕ ತಾರೆ ರಮ್ಯಾ

‘ವೀಕೆಂಡ್ ವಿತ್ ರಮೇಶ್’ ರಿಯಾಲಿಟಿ ಶೋಗೆ ದಿನಗಣನೆ: ಈ ಆವೃತ್ತಿಯ ಮೊದಲ ಸಾಧಕ ಯಾರು ಗೊತ್ತಾ? ಸಾಧಕರ ಲಿಸ್ಟ್‌ನಲ್ಲಿ ಮೋಹಕ ತಾರೆ ರಮ್ಯಾ

ನ್ಯೂಸ್‌ ಆ್ಯರೋ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕನ್ನಡಿಗರ ಜೀವನದ ಸಿಹಿ-ಕಹಿಯನ್ನು ಜನರಿಗೆ ತೋರಿಸುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಎಲ್ಲಾ ಸೀಸನ್ಸ್ ಹಿಟ್ ಆಗಿವೆ. ಇದೀಗ ಮತ್ತೊಂದು ಸೀಸನ್‌ಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಸಾಧಕರ ಕುರ್ಚಿಯಲ್ಲಿ ಮೊದಲು ಕೂರೋದು ಯಾರು ಎಂಬುದು ಕುತೂಹಲ ಕೆರಳಿಸಿದೆ.

ಮಾರ್ಚ್ 25ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಪ್ರತಿ ಸೀಸನ್‌ನಂತೆ ಈ ಬಾರಿಯೂ ರಮೇಶ್ ಅರವಿಂದ್ ಹೋಸ್ಟ್ ಮಾಡುತ್ತಿದ್ದು, ಅತಿಥಿಗಳು ಯಾರಾಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮೋಹಕ ತಾರೆ ರಮ್ಯಾ, ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೀಗೆ ಸಾಕಷ್ಟು ಜನರ ಹೆಸರು ಕೇಳಿ ಬರುತ್ತಿದ್ದು, ಗ್ರ್ಯಾಂಡ್ ಎಂಟ್ರಿಗಾಗಿ ಕಾಂತಾರ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಗ್ರ್ಯಾಂಡ್ ಆಗಿಸಿದ ರಿಷಭ್ ಮೊದಲನೇ ಸಾಧಕ ಎನ್ನಲಾಗಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋನ 4 ಸೀಸನ್‍ಗಳು ಮುಗಿದಿವೆ. 2014 ಆಗಸ್ಟ್ 2 ರಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿತ್ತು. ಈವರೆಗೆ 104 ಎಪಿಸೋಡ್ ಗಳನ್ನು ಮಾಡಲಾಗಿದೆ.

ಬೆಂಗಳೂರಿನ ಚಿಕ್ಕಲಸಂದ್ರ ಪ್ರದೇಶದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತಿದೆ. ಮೊದಲ ಆವೃತ್ತಿ ಆಗಸ್ಟ್ 2, 2014 ರಂದು ಪ್ರಸಾರವಾಯಿತು, ನಟ ಪುನೀತ್ ರಾಜ್ ಕುಮಾರ್ ಮೊದಲ ಆಹ್ವಾನಿತರಾಗಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *