60 ಸಾವಿರ ದಾಟಿದೆ ಬಂಗಾರದ ಬೆಲೆ, ಕೈಗೆಟುಕದಷ್ಟು ಮೇಲೇರಿದೆ ಆಭರಣ ದರ – ಈ ದಿಢೀರ್ ಬಂಗಾರದ ಬೆಲೆ ಏರಿಕೆಗೆ ಕಾರಣ ಗೊತ್ತಾ?

60 ಸಾವಿರ ದಾಟಿದೆ ಬಂಗಾರದ ಬೆಲೆ, ಕೈಗೆಟುಕದಷ್ಟು ಮೇಲೇರಿದೆ ಆಭರಣ ದರ – ಈ ದಿಢೀರ್ ಬಂಗಾರದ ಬೆಲೆ ಏರಿಕೆಗೆ ಕಾರಣ ಗೊತ್ತಾ?

ನ್ಯೂಸ್ ಆ್ಯರೋ : ಚಿನ್ನ ಅಥವಾ ಬಂಗಾರ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೆಣ್ಣುಮಕ್ಕಳಿಗಂತೂ ಬಂಗಾರದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅದಕ್ಕಾಗಿಯೇ ಹೇಗಾದರೂ ಮಾಡಿ ಚಿನ್ನ ಕೊಂಡುಕೊಳ್ಳಬೇಕು ಎಂದು ಹವಣಿಸುತ್ತಿದ್ದಾರೆ. ಆದರೆ ಈಗದ ಚಿನ್ನದ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ… ಒಮ್ಮಿಂದೊಮ್ಮೆಲೆ ಬಂಗಾರದ ಬೆಲೆ 60 ಸಾವಿರ ದಾಟಿದೆ. ಈ ದಿಢೀರ್ ಏರಿಕೆಗೆ ಕಾರಣವೇನು, ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ಓದಿ.

ಚಿನ್ನದ ಬೆಲೆ ಏರಿಕೆಗೆ ಕಾರಣವೇನು?

ಬಂಗಾರ ಒಮ್ಮಿಂದೊಮ್ಮೆಲೆ ಗಗನಕ್ಕೇರಲು ಕಾರಣವೇನು ಎಂಬುದು ಸದ್ಯ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಅಮೇರಿಕಾ ದೇಶದಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟು, ಆರ್ಥಿಕ ಕುಸಿತದಿಂದಾಗಿ ಸರಕುಗಳ ಬೆಲೆ ಹೆಚ್ಚುತ್ತಿದೆ. ಬಂಗಾರದ ಬೆಲೆ ಏರಿಕೆಗೆ ಅಮೇರಿಕಾದ ಈ ವಿದ್ಯಮಾನವೇ ಕಾರಣ ಎಂದು ಹಲವು ವಿಶ್ಲೇಷಕರು ಹಾಗೂ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಸೋಮವಾರದ ಚಿನ್ನದ ವಹಿವಾಟಿನಲ್ಲಿ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ ನಲ್ಲಿ ಹೂಡಿಕೆದಾರರಿಂದ ಬಂಗಾರಕ್ಕೆ ತೀವ್ರವಾಗಿ ಬೇಡಿಕೆ ವ್ಯಕ್ತವಾಗಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 976 ರೂಪಾಯಿ ಏರಿಕೆಯೊಂದಿಗೆ 60,359 ರೂಪಾಯಿಗೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಶೇ.1.64 ರಷ್ಟು ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲೂ ಬಂಗಾರದ ದುಬಾರಿಯಾಗಿದೆ. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,020.70 ಡಾಲರ್‌ಗೆ ತಲುಪಿದ್ದು, ಶೇ.1.53 ರಷ್ಟು ಹೆಚ್ಚಾಗಿರುವುದು ಗಮನಾರ್ಹ ವಿಚಾರ.

ಅಮೆರಿಕದ ಪ್ರಮುಖ ಎರಡು ಪ್ರಾದೇಶಿಕ ಬ್ಯಾಂಕ್‌ಗಳ ದಿಢೀರ್ ವೈಫಲ್ಯದೊಂದಿಗೆ ಯುರೋಪಿಯನ್ ಬ್ಯಾಂಕ್‌ನಲ್ಲಿನ ಪ್ರಕ್ಷುಬ್ಧತೆ ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕ್‌ಗಳ ವೈಫಲ್ಯ ಆರ್ಥಿಕ ವಲಯಕ್ಕೂ ಹೊಡೆತ ಕೊಡುವ ಸಾಧ್ಯತೆಗಳಿದ್ದು, ಅಮೆರಿಕನ್‌ ಡಾಲರ್‌ ವಿರುದ್ಧ ರೂಪಾಯಿ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗಳ ನಡುವೆ ಭಾರತದ ಸಾಕಷ್ಟು ವಿದೇಶಿ ವಿನಿಮಯ ಮೀಸಲುಗಳು ಚಂಚಲತೆಯನ್ನು ತಡೆಯಲು ಸಹಾಯ ಮಾಡಬಹುದು. ಮಧ್ಯಮ ಅವಧಿಯಲ್ಲಿ, ಸರಕುಗಳ ಬೆಲೆಗಳಲ್ಲಿ ತಿದ್ದುಪಡಿ ವಿಶೇಷವಾಗಿ ತೈಲ ಮತ್ತು ಸ್ಥಿತಿಸ್ಥಾಪಕ ಸೇವೆಗಳ ರಫ್ತನ್ನು ಉತ್ತೇಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *