
ತನ್ನ 60ನೇ ವಯಸ್ಸಿನಲ್ಲಿ 2ನೇ ವಿವಾಹವಾದ ಆಶಿಶ್ ವಿದ್ಯಾರ್ಥಿ – ಅಸ್ಸಾಮೀ ಮೂಲದ ಯುವತಿಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್..!!
- ಮನರಂಜನೆ
- May 25, 2023
- No Comment
- 291
ನ್ಯೂಸ್ ಆ್ಯರೋ : ಕನ್ನಡ ಸೇರಿದಂತೆ ಸುಮಾರು 11 ಭಾಷೆಗಳ ಅಂದಾಜು 200 ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ 2ನೇ ವಿವಾಹವಾಗಿದ್ದಾರೆ.
ಇಂದು ಅಸ್ಸಾಮಿ ಮೂಲದ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುವ ರೂಪಾಲಿ ಬರುವ ಅವರನ್ನು ಕೊಲ್ಕತ್ತದಲ್ಲಿ ಸರಳವಾಗಿ ಆಶಿಷ್ ವಿದ್ಯಾರ್ಥಿ ವಿವಾಹವಾಗಿದ್ದಾರೆ. ಇಬ್ಬರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಹಿಂದೆ ಹಿರಿಯ ನಟಿ ಶಕುಂತಲಾ ಅವರ ಪುತ್ರಿ ರಜೋಶಿ ಜೊತೆಗೆ ಆಶಿಶ್ ವಿದ್ಯಾರ್ಥಿ ವಿವಾಹವಾಗಿದ್ದರು. ಹಲವು ವರ್ಷಗಳ ದಾಂಪತ್ಯದ ಬಳಿಕ ಇಬ್ಬರೂ ದೂರಾವಾಗಿದ್ದಾರೆ.
”ಜೀವನದ ಈ ಹಂತದಲ್ಲಿ ನಾನು ರೂಪಾಲಿಯೊಟ್ಟಿಗೆ ವಿವಾಹವಾಗಿರುವುದು ಅದ್ಭುತವಾದ ಅನುಭವ. ನಾವು ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದೇವೆ. ಇಂದು ಸಂಜೆ ಆಪ್ತೇಷ್ಟರಿಗೆ ರಿಸೆಪ್ಷನ್ ಹಮ್ಮಿಕೊಂಡಿದ್ದೇವೆ” ಎಂದು ಆಶಿಶ್ ವಿದ್ಯಾರ್ಥಿ ಹೇಳಿದ್ದಾರೆ.
”ನಾವು ಕೆಲವು ತಿಂಗಳ ಮುಂಚೆ ಭೇಟಿಯಾದೆವು. ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವ ಇಷ್ಟವಾಯಿತು. ಹಾಗಾಗಿ ನಮ್ಮ ಗೆಳೆತನವನ್ನು ಇನ್ನೊಂದು ಹಂತ ಮೇಲಕ್ಕೆ ಕೊಂಡೊಯ್ಯಲು ನಿಶ್ಚಿಯಿಸಿದೆವು. ನಮ್ಮ ಮದುವೆ ಸರಳವಾಗಿರಬೇಕೆಂದು ನಾವು ಮೊದಲೇ ನಿಶ್ಚಯ ಮಾಡಿದ್ದೆವು” ಎಂದು ರೂಪಾಲಿ ಹೇಳಿದ್ದಾರೆ.
ಫುಡ್ ವ್ಲಾಗಿಂಗ್
‘ದ್ರೋಕಾಲ್’ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಆಶಿಶ್ ವಿದ್ಯಾರ್ಥಿ ಪೋಷಕ ಪಾತ್ರ, ಖಳ ನಾಯಕನ ಪಾತ್ರಗಳಿಂದ ಜನಪ್ರಿಯ. ಕೋವಿಡ್ ಬಳಿಕ ವ್ಲಾಗಿಂಗ್ ಸಹ ಆರಂಭಿಸಿದರು. ಅವರು ಹಲವು ನಗರಗಳಿಗೆ ತೆರಳಿ ಅಲ್ಲಿನ ಜನಪ್ರಿಯ ಖಾದ್ಯಗಳನ್ನು ಸವಿಯುತ್ತಾ ಫುಡ್ ವ್ಲಾಗಿಂಗ್ ಮಾಡುತ್ತಿದ್ದಾರೆ.