ಸ್ಯಾಂಡಲ್ ವುಡ್ ನ ಸ್ಟಾರ್ ನಟನ ಜೊತೆ ಹಸೆಮಣೆಗೇರಲು ಸಜ್ಜಾದ ನಟಿ ಹರಿಪ್ರಿಯಾ – ಪಕ್ಕಾ ಲವ್ ಮ್ಯಾರೇಜ್ ಆಗ್ತೀರೋ ಹರಿಪ್ರಿಯಾ ಅವರ ಮನ ಕದ್ದವರ್ಯಾರು ಗೊತ್ತಾ..‌!?

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಅಂಗಳದಲ್ಲಿ ವಿವಾಹ ಕಲರವ ಜೋರಾಗಿದ್ದು, ಸಾಲು ಸಾಲು ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ‌. ಇದೀಗ ಮತ್ತೊಂದು ಸ್ಟಾರ್ ನಟ ನಟಿ ಜೋಡಿ ಮದುವೆಯಾಗಲು ಸಜ್ಜಾಗಿರೋ ಸೂಚನೆ‌ ಸಿಕ್ಕಿದೆ.

ಸ್ಯಾಂಡಲ್ ವುಡ್ ನ ಮುದ್ದು ಮುಖದ ಚೆಲುವೆ, ಪ್ರತಿಭಾನ್ವಿತ ನಟಿ ಹರಿಪ್ರಿಯಾ ಸ್ಯಾಂಡಲ್ ವುಡ್‌ನ ಖ್ಯಾತ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ‌ಲಭಿಸಿದೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್ ಎಂಬುದು ಈಗ ಪಕ್ಕಾ ಆಗಿದೆ.



ವಸಿಷ್ಠ ಮತ್ತು ಹರಿಪ್ರಿಯಾ ಇಬ್ಬರೂ ತುಂಬಾ ಆಪ್ತರಾಗಿದ್ದು, ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್‌ ಮಾಡಿದ್ದಾರೆ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.



ಅಂದಹಾಗೆ ಈ ವಿಚಾರ ರಿವೀಲ್ ಆಗಿದ್ದು ಹರಿಪ್ರಿಯಾ ಅವರ ಮೂಗು ಚುಚ್ಚುವ ವೇಳೆ. ಇತ್ತೀಚಿಗೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಅದರ ವೀಡಿಯೋವನ್ನು ಶೇರ್‌ ಮಾಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಜೊತೆಯಲ್ಲಿದ್ದರು. ಹರಿಪ್ರಿಯಾ ಮೂಗು ಚುಚ್ಚಿಸಿದ್ದೇ ವಸಿಷ್ಠ ಸಿಂಹ ಎಂದು ಹೇಳಲಾಗ್ತಿದೆ.



ಬ್ರೇಕಿಂಗ್ ಸುದ್ದಿ ಏನಂದ್ರೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜೋಡಿ ಹಕ್ಕಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಸ್ಯಾಂಡಲ್ ವುಡ್ ನ ಒಳಗೂ ಹೊರಗೂ ಗುಸುಗುಸು ಆರಂಭವಾಗಿದೆ.‌ ಅಷ್ಟಕ್ಕೂ ಬೆಂಕಿ ಇಲ್ದೆ ಹೊಗೆ ಬರಲ್ಲ ಅಲ್ವಾ… ಏನಂತೀರಾ? ಕಾದು ನೋಡೋಣ ಅಷ್ಟೇ…

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *