ಒಂದೇ ಓವರ್ ನಲ್ಲಿ ಏಳು ಸಿಕ್ಸರ್ ಬಾರಿಸಿದ ರುತುರಾಜ್ ಗಾಯಕ್ವಾಡ್ – ಓವರ್ ಗೆ 43 ರನ್ ಗಳಿಸಿ ವಿಶ್ವದಾಖಲೆ, ದ್ವಿಶತಕದೊಂದಿಗೆ ಮಿಂಚಿದ ಟೀಂ ಇಂಡಿಯಾ ಆಟಗಾರ

ನ್ಯೂಸ್ ಆ್ಯರೋ : ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಏಳು ಸಿಕ್ಸರ್ ಬಾರಿಸಿದ ಋತುರಾಜ್ ಗಾಯಕ್ವಾಡ್ ವಿಶ್ವದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆಟಗಾರರಾಗಿರುವ ರುತುರಾಜ್ ಗಾಯಕ್ವಾಡ್ ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಟಾಸ್ ಗೆದ್ದ ಉತ್ತರ ಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್​ಗೆ ಇಳಿದ ಮಹಾರಾಷ್ಟ್ರದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಸತ್ಯಜಿತ್ ಕೂಡ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಉತ್ತರ ಪ್ರದೇಶ ತಂಡದ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 159 ಎಸೆತಗಳನ್ನು ಎದುರಿಸಿದ ರುತುರಾಜ್ 10 ಬೌಂಡರಿ, ಬರೋಬ್ಬರಿ 16 ಸಿಕ್ಸರ್ ನೇರವಿನಿಂದ 220 ರನ್ ಬಾರಿಸಿದರು.

ಮಹಾರಾಷ್ಟ್ರ ಇನ್ನಿಂಗ್ಸ್​ನ 49ನೇ ಓವರ್​ನಲ್ಲಿ ಉಗ್ರರೂಪ ತಾಳಿದ ರುತುರಾಜ್ ಒಂದೇ ಓವರ್​ನಲ್ಲಿ ಬರೋಬ್ಬರಿ 7 ಸಿಕ್ಸರ್ ಸಿಡಿಸಿದರು. ಈ ಓವರ್​ನಲ್ಲಿ ಒಂದು ನೋ ಬಾಲ್ ಕೂಡ ಆಗಿದ್ದು, ಆ ಎಸೆತದಲ್ಲೂ ರುತುರಾಜ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 7 ಸಿಕ್ಸರ್ ಸಿಡಿಸಿದ ದಾಖಲೆಯನ್ನು ರುತುರಾಜ್ ಬರೆದಿದ್ದಾರೆ. ಉತ್ತರ ಪ್ರದೇಶ ಪರ 49ನೇ ಓವರ್ ಎಸೆಯಲು ಬಂದ ವೇಗಿ ಶಿವಂ ಸಿಂಗ್ ಅವರ ಮೊದಲೆರಡು ಎಸೆತಗಳನ್ನು ಮಿಡ್ ಆನ್​ನಲ್ಲಿ ಸಿಕ್ಸರ್​ಗಟ್ಟಿದರು.

3ನೇ ಎಸೆತವನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್ಗಟ್ಟಿದ ರುತುರಾಜ್ 4ನೇ ಎಸೆತವನ್ನು ಮಿಡ್ ಆಫ್ ಮೇಲೆ ಸಿಕ್ಸರ್ ಬಾರಿಸಿದರು. ಬಳಿಕ ಐದನೇ ಎಸೆತ ನೋ ಬಾಲ್ ಆಗಿದ್ದು, ಆ ಎಸೆತವನ್ನು ರುತುರಾಜ್ ಮಿಡ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು. ಬಳಿಕ ಸಿಕ್ಕ ಫ್ರಿ ಹಿಟ್ ಎಸೆತದಲ್ಲೂ ಸಿಕ್ಸರ್ ಸಿಡಿಸಿದ ಗಾಯಕ್ವಾಡ್, 6ನೇ ಎಸೆತವನ್ನು ಮಿಡ್ ಆಫ್ ಮೇಲೆ ಸಿಕ್ಸರ್ಗಟ್ಟಿದರು. ಹೀಗಾಗಿ 49ನೇ ಓವರ್ನಲ್ಲಿ ದಾಖಲೆಯ 43 ರನ್ಗಳು ಹರಿದುಬಂದವು.

ಈ ಪಂದ್ಯದಲ್ಲಿ ಬರೋಬ್ಬರಿ 10 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದ ರುತುರಾಜ್ ಕೇವಲ ಬೌಂಡರಿಗಳಿಂದಲೇ 136 ರನ್ ಕಲೆ ಹಾಕಿದರು. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ದಾಖಲೆಯನ್ನು ರುತುರಾಜ್ ಬರೆದರು. ಮತ್ತೊಂದೆಡೆ, ಒಂದು ಓವರ್‌ನಲ್ಲಿ 43 ರನ್ ನೀಡಿದ ದುಬಾರಿ ಬೌಲರ್ ಎನ್ನುವ ಕುಖ್ಯಾತಿಗೆ ಶಿವ ಸಿಂಗ್ ಭಾಜನರಾದರು. ಇದಕ್ಕೂ ಮುನ್ನ ಈ ದಾಖಲೆ ಒಂದೇ ಓವರ್‌ನಲ್ಲಿ 38 ರನ್ ನೀಡಿದ ವೇಗಿ ಜೇಮ್ಸ್ ಫುಲ್ಲರ್ ಹೆಸರಿನಲ್ಲಿತ್ತು

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *