83 ವರ್ಷದ ಸ್ಟಾರ್ ನಟನಿಗೆ 29ರ ಹರೆಯದ ಪ್ರೇಯಸಿ – ಇದೀಗ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ..!!

83 ವರ್ಷದ ಸ್ಟಾರ್ ನಟನಿಗೆ 29ರ ಹರೆಯದ ಪ್ರೇಯಸಿ – ಇದೀಗ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ..!!

ನ್ಯೂಸ್ ಆ್ಯರೋ‌ : ‘ಪ್ರೀತಿಗೆ ಕಣ್ಣಿಲ್ಲ’ ಎನ್ನುವ ಮಾತಿದೆ. ಈ ಜೋಡಿಯ ವಿಚಾರದಲ್ಲಿ ಅದು ನಿಜ ಆಗಿದೆ. ಹಾಲಿವುಡ್ ನ ಸ್ಟಾರ್ ನಟ 83 ವರ್ಷದ ಅಲ್ ಪಸಿನೋ ಮತ್ತು 29 ವರ್ಷದ ನೂರ್ ಅಲ್ ಫಲ್ಲಾಹ್ ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಸುದ್ದಿ ಪ್ರಕಾರ ಈ ಜೋಡಿ ತಮ್ಮ ಮಗುವಿನ ನಿರೀಕ್ಷೆಯಲ್ಲಿದೆಯಂತೆ…!!

ಕಳೆದ ವರ್ಷ ಇಬ್ಬರು ಒಟ್ಟಿಗೆ ಔತಣಕೂಟವೊಂದರಲ್ಲಿ ಕಾಣಿಸಿಕೊಂಡಿದ್ದರು. ಆಗ ಅಲ್ ಪಸಿನೋ ತನ್ನ ಹಿರಿಯ ಮಗಳಿಗಿಂತ ಕಿರಿಯ ವಯಸ್ಸಿನ ಯುವತಿ ಜತೆ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿಯೇ ವೈರಲ್ ಹಾಗೂ ಟ್ರೋಲ್ ಕೂಡ ಆಗಿತ್ತು. ಇದೀಗ ಇಬ್ಬರ ನಡುವಿನ ಈ ಡೇಟಿಂಗ್ ಸಂಬಂಧ ಇನ್ನೂ ದೊಡ್ಡ ಬೆಳವಣಿಗೆಯನ್ನು ಪಡೆದುಕೊಂಡಿದ್ದು, ಅಲ್ ಪಸಿನೋ ಹಾಗೂ ನೂರ್ ಫಲ್ಲಾಹ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಚಲನಚಿತ್ರ ನಿರ್ಮಾಪಕಿ ನೂರ್ ಫಲ್ಲಾಹ್ ಇನ್ನೊಂದು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಈ ಮಗು ಅಲ್ ಪಸಿನೋ ಅವರ ನಾಲ್ಕನೇ ಕುಡಿಯಾಗಲಿದ್ದು, ಅಲ್ ಪಸಿನೋ ಅವರ ಮಾಜಿ ಪ್ರೇಯಸಿ ಜಾನ್ ಟೆರ್ರೆಂಟ್ ಅವರಿಗೆ ಜನಿಸಿದ ಜೂಲಿ ಮೇರಿ ಮೊದಲ ಮಗಳಾಗಿದ್ದಾಳೆ. ಈಕೆಗೆ 33 ವರ್ಷ. ಸದ್ಯ ಈ ವಿಷಯ ಸಹ ಟ್ರೋಲ್ ಆಗುತ್ತಿದ್ದು, ಹಿರಿಯ ಮಗಳ ವಯಸ್ಸಿವಳಿಗಿಂತ ಕಿರಿಯ ವಯಸ್ಸಿನ ಪ್ರೇಯಸಿಯಿಂದ ಅಲ್ ಪಸಿನೋ ತನ್ನ ನಾಲ್ಕನೇ ಮಗುವನ್ನು ಪಡೆಯುತ್ತಿದ್ದಾರೆ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.

ಅಷ್ಟೇ ಅಲ್ಲದೇ ತನ್ನ ಮತ್ತೋರ್ವ ಮಾಜಿ ಪ್ರೇಯಸಿ ಬೆವೆರ್ಲಿ ಡಿ ಏಂಜೆಲೋ ಜತೆ 1997ರಿಂದ 2003ರವರೆಗೆ ಡೇಟಿಂಗ್ ಮಾಡುತ್ತಿದ್ದ ಅಲ್ ಪಸಿನೋ ಅವರಿಗೆ ಆಂಟನ್ ಹಾಗೂ ಒಲಿವಿಯಾ ಎಂಬ ಇಬ್ಬರು ಅವಳಿ ಮಕ್ಕಳಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *