ಇಂದು ವಿಶ್ವ ಪರಿಸರ ದಿನ – ಕಡಿಮೆ ಪ್ಲಾಸ್ಟಿಕ್ ಬಳಕೆಯ ಸಂಕಲ್ಪ ಮಾಡೋಣ

ಇಂದು ವಿಶ್ವ ಪರಿಸರ ದಿನ – ಕಡಿಮೆ ಪ್ಲಾಸ್ಟಿಕ್ ಬಳಕೆಯ ಸಂಕಲ್ಪ ಮಾಡೋಣ

ನ್ಯೂಸ್ ಆ್ಯರೋ‌ : ಇಂದು ವಿಶ್ವ ಪರಿಸರ ದಿನ. ಪರಿಸರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಜೂ. 5ರಂದು ಪರಿಸರ ದಿನ ಆಚರಿಸಲಾಗುತ್ತಿದೆ. ಪ್ರತೀ ವರ್ಷ ವಿಭಿನ್ನ ಧ್ಯೇಯದೊಂದಿಗೆ ಆಚರಿಸಲಾಗುತ್ತಿದ್ದು, ಈ ಬಾರಿಯ ವಿಷಯ ‘ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ’. ಪಶ್ಚಿಮ ಆಫ್ರಿಕಾದ ಕೋಟ್ ಡಿ ಐವರಿ ಈ ಸಾಲಿನ ವಿಶ್ವ ಪರಿಸರ ದಿನವನ್ನು ನೆದರ್ ಲ್ಯಾಂಡ್ ಸಹಭಾಗಿತ್ವದಲ್ಲಿ ಆಯೋಜಿಸುತ್ತಿದೆ.

ಜೀವ ವೈವಿಧ್ಯಕ್ಕೆ ಮಾರಕ

ಇಂದು ಪ್ಲಾಸ್ಟಿಕ್ ಬಳಕೆ ಮಿತಿ ಮೀರಿದೆ. ಪ್ಲಾಸ್ಟಿಕ್ ಬಳಕೆ ಇಲ್ಲದ ದಿನವನ್ನು ಊಹಿಸಲೂ ಸಾಧ್ಯವಿಲ್ಲ. ಆಹಾರದಿಂದ ಹಿಡಿದು ಬಟ್ಟೆಯ ಪ್ಯಾಕ್‍ವರೆಗೆ ಪ್ಲಾಸ್ಟಿಕ್ ಎಲ್ಲೆಡೆ ವ್ಯಾಪಿಸಿದೆ. ಸುಲಭವಾಗಿ ಕರಗದ ಇದು ಜೀವ ವೈವಿಧ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಹೊತ್ತಿಸಿದರೆ ವಾಯು ಕಲುಷಿತವಾಗಿ ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ, ವರ್ಷಕ್ಕೆ 43 ಕೋಟಿ ಟನ್​ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಈ ಪೈಕಿ ಶೇ. 46ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂಳಲಾಗುತ್ತದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಶೇ. 22ರಷ್ಟು ಕಸವಾಗಿ ಮಾರ್ಪಡುತ್ತದೆ. ಇತರ ವಸ್ತುಗಳ ರೀತಿಯಲ್ಲಿ ಇದು ಜೈವಿಕವಾಗಿ ವಿಘಟನೆಯಾಗುವುದಿಲ್ಲ. ಪರಿಣಾಮವಾಗಿ ಸಮುದ್ರ ಜೀವಿಗಳನ್ನು ಉಸಿರುಗಟ್ಟಿಸುತ್ತದೆ; ಮಣ್ಣನ್ನು ಹಾನಿಗೊಳಿಸುತ್ತದೆ; ಅಂತರ್ಜಲವನ್ನು ವಿಷಗೊಳಿಸುತ್ತದೆ. ಪ್ರತಿ ವರ್ಷ ಉತ್ಪಾದನೆಯಾಗುವ ಪ್ಲಾಸ್ಟಿಕ್​ನಲ್ಲಿ ಅರ್ಧದಷ್ಟು ಏಕಬಳಕೆಯ ಪ್ಲಾಸ್ಟಿಕ್ ಎನ್ನುವುದು ಕಳವಳಕಾರಿ ಅಂಶ.

ಅಪಾಯಕಾರಿ

ಮೈಕ್ರೋಪ್ಲಾಸ್ಟಿಕ್​ಗಳು (ಪ್ಲಾಸ್ಟಿಕ್​ನ ಚಿಕ್ಕ ಕಣಗಳು) ನಾವು ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿಯೊಳಗೆ ಪ್ರವೇಶಿಸುತ್ತವೆ. ಅನೇಕ ಪ್ಲಾಸ್ಟಿಕ್ ಉತ್ಪನ್ನಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಮಾರಕವಾಗಿವೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಅನೇಕ ರಾಸಾಯನಿಕಗಳು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ಕ್ಯಾನ್ಸರ್ ರೋಗಕ್ಕೂ ಕಾರಣವಾಗಬಹುದು. ನರಮಂಡಲ, ಮಿದುಳು, ಕಣ್ಣು, ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಪ್ಲಾಸ್ಟಿಕ್ ಅಂಶ ದೇಹಕ್ಕೆ ಸೇರಿಕೊಂಡಲ್ಲಿ ಉಸಿರಾಟದ ತೊಂದರೆ, ತಲೆನೋವು, ಆಯಾಸ, ಹಾರ್ಮೋನು ಬದಲಾವಣೆ, ವೀರ್ಯಾಣುಗಳ ಸಂಖ್ಯೆ ಕ್ಷೀಣ, ಬಂಜೆತನ ಮುಂತಾದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಕೊಳೆಯಲು ನೂರಾರು ವರ್ಷ ಬೇಕು

ಇತರ ತ್ಯಾಜ್ಯಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ಹೆಚ್ಚು ಅಪಾಯಕಾರಿ. ಇದು ಕೊಳೆಯಲು (ವಿಘಟನೆಯಾಗಲು) ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದೇ ಇದಕ್ಕೆ ಕಾರಣ. ಇದನ್ನು ಉರಿಸಿದಾಗ ಮುದ್ದೆಯಾಗುತ್ತದೆಯೇ ಹೊರತು ನಾಶವಾಗುವುದಿಲ್ಲ. ನೆಲಕ್ಕೆ ಎಸೆಯುವುದರಿಂದ ಎರೆಹುಳಗಳ ಜೀವಕ್ಕೆ ಮಾರಕವಾಗುತ್ತದೆ. ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ. ಅಲ್ಲದೆ ನೀರು ಇಂಗದಂತೆ ಪ್ಲಾಸ್ಟಿಕ್ ತಡೆಯುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯುತ್ತದೆ. ಪ್ಲಾಸ್ಟಿಕ್ ತಟ್ಟೆ -ಲೋಟಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತದೆ.

ಪ್ಲಾಸ್ಟಿಕ್ ನ ವಿವಿಧ ವಸ್ತುಗಳು ನಾಶವಾಗಲು ತೆಗೆದುಕೊಳ್ಳುವ ಅಂದಾಜು ಕಾಲಾವಧಿ
ಸಿಗರೇಟ್ ತುಂಡು 5 ವರ್ಷ, ಪ್ಲಾಸ್ಟಿಕ್ ಚೀಲ 20 ವರ್ಷ, ಪ್ಲಾಸ್ಟಿಕ್ ಲೇಪಿತ ಕಾಫಿ ಕಪ್ 30 ವರ್ಷ, ಸ್ಟ್ರಾ 200 ವರ್ಷ, ಬಾಟಲಿ 450 ವರ್ಷ, ಬ್ರಷ್ 500 ವರ್ಷ, ಮೀನು ಗಾಳ ದಾರ 600 ವರ್ಷ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *