500 ವಿಮಾನ ಖರೀದಿಗೆ ಆರ್ಡರ್: ವಾಯುಮಾನ ಕ್ಷೇತ್ರದಲ್ಲಿ ವಿಶ್ವ ದಾಖಲೆ ಮಾಡಿದ ಏರ್‌ ಇಂಡಿಯಾ

500 ವಿಮಾನ ಖರೀದಿಗೆ ಆರ್ಡರ್: ವಾಯುಮಾನ ಕ್ಷೇತ್ರದಲ್ಲಿ ವಿಶ್ವ ದಾಖಲೆ ಮಾಡಿದ ಏರ್‌ ಇಂಡಿಯಾ

ನ್ಯೂಸ್‌ಆ್ಯರೋ : ವಾಯುಮಾನ ಕ್ಷೇತ್ರದಲ್ಲಿ ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ 500 ವಿಮಾನಗಳನ್ನು ಆರ್ಡರ್ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಇನ್ನೂ ಈ ಖರೀದಿಯಲ್ಲಿ 430 ಸಣ್ಣ ಮತ್ತು 30 ದೊಡ್ಡ ಗಾತ್ರದ ವಿಮಾನಗಳಿವೆ. ಮುಂಬರುವ 8 ವರ್ಷಗಳ ಒಳಗೆ ಈ ಎಲ್ಲ ವಿಮಾನಗಳು ಏರ್‌ ಇಂಡಿಯಾ ಸಂಸ್ಥೆಯನ್ನು ಸೇರಲಿದ್ದು, ಇದು ಆಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಏರ್‌ಲೈನ್ಸ್ ಕಂಪನಿಯೊಂದು ಮಾಡಿದ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಿದೆ.

ಈ ಹಿಂದೆ ಅಮೆರಿಕನ್ ಏರ್‌ಲೈನ್ಸ್‌ 460 ವಿಮಾನಗಳನ್ನು ಆರ್ಡರ್‌ ಮಾಡುವ ಮೂಲಕ ದಾಖಲೆ ಮಾಡಿತ್ತು. 2019 ರಲ್ಲಿ ಇಂಡಿಗೋ 300 ವಿಮಾನ ಖರೀದಿಗೆ ಆರ್ಡರ್‌ ಮಾಡಿತ್ತು.

ಯುರೋಪ್‌ ಮೂಲದ ಏರ್‌ಬಸ್ ಕಂಪನಿ ಜೊತೆ A320 ನಿಯೋ 240 ವಿಮಾನಗಳು ಮತ್ತು A350 40 ವಿಮಾನ ಖರೀದಿಗೆ ಆರ್ಡರ್‌ ನೀಡಿದೆ. ಅಮೆರಿಕದ ಬೋಯಿಂಗ್ ಬಳಿ 737 ಮ್ಯಾಕ್ಸ್ 190 ವಿಮಾನಗಳು, 787 ಡ್ರೀಮ್‌ಲೈನರ್‌ 20 ಮತ್ತು 777x 10 ವಿಮಾನಗಳನ್ನು ಖರೀದಿ ಮಾಡಲಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

ಏರ್‌ಬಸ್ ಮತ್ತು ಏರ್ ಇಂಡಿಯಾ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಮತ್ತು ಏರ್‌ಬಸ್ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಶ್ಚಿಯನ್ ಸ್ಕೆರೆರ್ ಭಾಗಿಯಾಗಿ ಖರೀದಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ್ದಾರೆ. ಜನವರಿ 29 ರಂದು ಟಾಟಾ ಸನ್ಸ್‌ನ ಪ್ರಧಾನ ಕಛೇರಿಯಾದ ಬಾಂಬೆ ಹೌಸ್‌ನಲ್ಲಿ ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಮುಂದಿನ ಐದು ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಮಾರುಕಟ್ಟೆ ಪಾಲನ್ನು 30% ಗೆ ಹೆಚ್ಚಿಸುವ ಗುರಿಯನ್ನು ಏರ್‌ ಇಂಡಿಯಾ ಹಾಕಿಕೊಂಡಿದೆ. 2024ರ ಅಂತ್ಯದ ವೇಳೆಗೆ ಏರ್ ಇಂಡಿಯಾಗೆ 50 ಹೊಸ ವಿಮಾನಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *