ಅಂಬಾನಿಯ ಆಂಟಿಲಿಯಾ ಮನೆ ನಿರ್ವಹಣೆಗೆ 600 ಮಂದಿ ಸಿಬ್ಬಂದಿ: ಮನೆ ಕೆಲಸದವರಿಗೆ ₹2ಲಕ್ಷ ಸಂಬಳ

ಅಂಬಾನಿಯ ಆಂಟಿಲಿಯಾ ಮನೆ ನಿರ್ವಹಣೆಗೆ 600 ಮಂದಿ ಸಿಬ್ಬಂದಿ: ಮನೆ ಕೆಲಸದವರಿಗೆ ₹2ಲಕ್ಷ ಸಂಬಳ

ನ್ಯೂಸ್ ಆ್ಯರೋ : ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಆಂಟಿಲಿಯಾ 27 ಅಂತಸ್ತಿನ ಐಷಾರಾಮಿ ಮನೆಯಲ್ಲಿ, ಮುಖೇಶ್ ಅಂಬಾನಿ ಅವರ ತಾಯಿ ಕೋಕಿಲಾ ಬೆನ್, ಪತ್ನಿ ನೀತಾ, ಇಬ್ಬರು ಪುತ್ರರಾದ ಆಕಾಶ್-ಅನಂತ್, ಸೊಸೆ ಶ್ಲೋಕಾ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ವಾಸವಾಗಿದ್ದಾರೆ.

ಆಂಟಿಲಿಯಾ 27 ಅಂತಸ್ತಿನ ಐಷಾರಾಮಿ ಬಂಗಲೆ ಬಗ್ಗೆ ನೀತಾ ಅಂಬಾನಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.  

ಬಿಸಿನೆಸ್ ಇನ್‌ಸೈಡರ್‌ ವರದಿಯ ಪ್ರಕಾರ, ನೀತಾ ಅಂಬಾನಿ ಎಲ್ಲಾ ಕೊಠಡಿಗಳಲ್ಲಿಯೂ ಸಾಕಷ್ಟು ಸೂರ್ಯನ ಬೆಳಕು ಧಾರಳವಾಗಿ ಬೀಳಬೇಕೆಂದು ಆಶಿಸಿದ್ದರು. ಆದ್ದರಿಂದ ಅವರು ಮೇಲಿನ ಭಾಗದಲ್ಲಿ ಉಳಿಯಲು ನಿರ್ಧರಿಸಿದ್ದಾರಂತೆ. ವಿಶೇಷ ವ್ಯಕ್ತಿಗಳಿಗೆ ಮಾತ್ರ ಈ ಮಹಡಿಗೆ ಹೋಗಲು ಅನುಮತಿ ಇದೆ. 

ಮಾಹಿತಿ ಪ್ರಕಾರ, ಆಂಟಿಲಿಯಾದಲ್ಲಿ 600 ಜನರ ಸಿಬ್ಬಂದಿ ಇದ್ದಾರೆ. ತೋಟಗಾರರು, ಎಲೆಕ್ಟ್ರಿಷಿಯನ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು, ಪ್ಲಂಬರ್‌ಗಳು, ಚಾಲಕರು ಮತ್ತು ಸೇವಕರಿಗೆ ಅಡುಗೆ ಮಾಡುವವರು ಒಳಗೊಂಡಿರುತ್ತದೆ. ನೀತಾ ಅಂಬಾನಿ ಪ್ರಕಾರ, ಅವರ ಮನೆಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯೂ ಕುಟುಂಬದ ಸದಸ್ಯರಂತೆಯೇ ಇರುತ್ತಾರೆ.

ಸುಮಾರು 4 ಲಕ್ಷ ಚದರ ಅಡಿಗಳಲ್ಲಿ ‘ಆಂಟಿಲಿಯಾ’ ನಿರ್ಮಿಸಲಾಗಿದೆ. ಮುಖೇಶ್ ಅಂಬಾನಿ ಅವರ ಮನೆಯನ್ನು 200 ಮಿಲಿಯನ್ ಡಾಲರ್ ಅಂದರೆ ಸುಮಾರು 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಂಟಿಲಿಯಾ ತೆರೆದ ಆಕಾಶ ಮತ್ತು ಅರೇಬಿಯನ್ ಸಮುದ್ರದ ಅತ್ಯಂತ ಸುಂದರವಾದ ನೋಟವನ್ನು ಹೊಂದಿದೆ.

ಕೆಲವರ ಸಿಬ್ಬಂದಿ ಸಬಂಳ ₹2 ಲಕ್ಷ: ಎಲ್ಲ ಸಿಬ್ಬಂದಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸಂಬಳ ನೀಡಲಾಗುತ್ತದೆ ಎಂದು ನೀತಾ ಅಂಬಾನಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಇಲ್ಲಿನ ಹಲವರ ಸಂಬಳ ತಿಂಗಳಿಗೆ 2 ಲಕ್ಷ ರೂ.ವರೆಗೆ ಇದೆ.

ಇದಲ್ಲದೇ ಆಂಟಿಲಿಯ 6ನೇ ಮಹಡಿಯಲ್ಲಿ ಗ್ಯಾರೇಜ್ ಇದ್ದು, ಇದರಲ್ಲಿ ಸುಮಾರು 168 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಈ ಕಾರುಗಳನ್ನು ಸರ್ವೀಸ್ ಮಾಡಲು 7ನೇ ಮಹಡಿಯಲ್ಲಿ ಸರ್ವೀಸ್ ಸ್ಟೇಷನ್ ಕೂಡ ಸ್ಥಾಪಿಸಲಾಗಿದೆ. ಮುಖೇಶ್ ಅಂಬಾನಿ ಮನೆಯಲ್ಲಿ 9 ಲಿಫ್ಟ್‌ಗಳನ್ನು ಹೊಂದಿದೆ. ಅಂಬಾನಿ ಕುಟುಂಬದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಈ ಮನೆಯಲ್ಲಿಯೇ ಆಯೋಜಿಸಲಾಗುತ್ತದೆ.

ಮನೆಯೊಳಗೆ ಭವ್ಯವಾದ ದೇವಾಲಯವಿದೆ: ಅಂಬಾನಿ ಅವರ ಐಷಾರಾಮಿ ಮನೆ ಆಂಟಿಲಿಯಾ ಒಳಗೆ ಭವ್ಯವಾದ ದೇವಾಲಯವಿದೆ. ಈ ದೇವಾಲಯವನ್ನು ಆಂಟಿಲಿಯಾದ ಸಂಪೂರ್ಣ ಮಹಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ದೊಡ್ಡ ಜಾಗವನ್ನು ನೀಡಲಾಗಿದೆ.

ಚಿನ್ನ, ವಜ್ರಗಳಿಂದ ದೇವರ ಅಲಂಕಾರ: ವಜ್ರಗಳನ್ನು ಇಷ್ಟಪಡುವ ನೀತಾ ಅಂಬಾನಿ ದೇವಾಲಯವನ್ನು ವಿಶೇಷವಾಗಿಸಲು ಅಮೂಲ್ಯ ರತ್ನಗಳಿಂದ ಅಲಂಕರಿಸಿದ್ದಾರೆ. ನೀತಾ ಅಂಬಾನಿಯವರ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಟ್ರೋಫಿಯನ್ನು ಗೆದ್ದಾಗ, ನೀತಾ ಮೊದಲು ಅದನ್ನು ಮನೆಯ ದೇವಾಲಯದಲ್ಲಿ ದೇವರ ಪಾದಕ್ಕೆ ಅರ್ಪಿಸುತ್ತಾರೆ.

ಮೂರು ಹೆಲಿಪ್ಯಾಡ್‌ಗಳಿವೆ: ಥಿಯೇಟರ್, ಬಾರ್, ಮೂರು ಹೆಲಿಪ್ಯಾಡ್‌ಗಳಿವೆ. ಮುಖೇಶ್ ಅಂಬಾನಿಗೆ ಸಿನಿಮಾ ಎಂದರೆ ತುಂಬಾ ಇಷ್ಟ. ಮಧ್ಯರಾತ್ರಿ ಕಛೇರಿಯಿಂದ ಬಂದ ನಂತರವೂ ಮುಖೇಶ್ ಸಿನಿಮಾ ನೋಡದೆ ನಿದ್ದೆ ಮಾಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ಹೇಳಿದ್ದರು.

ಇದೇ ಕಾರಣಕ್ಕೆ ಮನೆಯ 8ನೇ ಮಹಡಿಯಲ್ಲಿ 50 ಸೀಟುಗಳ ಮಿನಿ ಹೋಮ್ ಥಿಯೇಟರ್ ನಿರ್ಮಿಸಿದ್ದಾರೆ.

‘ಆಂಟಿಲಿಯಾ’ ಅನ್ನು ಚಿಕಾಗೋ ಮೂಲದ ವಾಸ್ತುಶಿಲ್ಪಿ ‘ಪರ್ಕಿನ್ಸ್’ ವಿನ್ಯಾಸಗೊಳಿಸಿದ್ದಾರೆ ಮತ್ತು ಇದನ್ನು ಆಸ್ಟ್ರೇಲಿಯಾದ ನಿರ್ಮಾಣ ಕಂಪನಿ ‘ಲ್ಯಾಗ್ಟನ್ ಹೋಲ್ಡಿಂಗ್’ ನಿರ್ಮಿಸಿದೆ .8 ರಿಕ್ಟರ್ ಮಾಪಕ ಭೂಕಂಪವನ್ನು ಆಂಟಿಲಿಯಾ ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *