ಈ ಎಲೆಕ್ಟ್ರಿಕಲ್ ಸ್ಕೂಟರ್‌ಗೆ ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ – 55 ಸಾವಿರ ಬೆಲೆಯ ಈ ಅತ್ಯಾಧುನಿಕ ಇ-ಸ್ಕೂಟರ್ ಹೇಗಿದೆ ಗೊತ್ತಾ?

ಈ ಎಲೆಕ್ಟ್ರಿಕಲ್ ಸ್ಕೂಟರ್‌ಗೆ ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ – 55 ಸಾವಿರ ಬೆಲೆಯ ಈ ಅತ್ಯಾಧುನಿಕ ಇ-ಸ್ಕೂಟರ್ ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಭಾರತೀಯ ವಾಹನೋದ್ಯಮದಲ್ಲಿ ದಿನದಿಂದ ದಿನಕ್ಕೆ ಇ-ಸ್ಕೂಟರ್ ಗಳ ಜನಪ್ರಿಯತೆ ಹೆಚ್ಚುತ್ತಿದೆ. ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ವಾಹನ‌ ಪ್ರಿಯರು ಎಲೆಕ್ಟ್ರಿಕಲ್ ವಾಹನಗಳತ್ತ ತಿರುಗುತ್ತಿದ್ದಾರೆ. ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿದ್ದು, ಬೆಂಗಳೂರಿನ ‘ಯುಲು’ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಇ-ಸ್ಕೂಟರ್‌ವೊಂದನ್ನು ಬಿಡುಗಡೆಗೊಳಿಸಿದೆ. ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲದ ಈ ಅತ್ಯಾಧುನಿಕ ಎಲೆಕ್ಟ್ರಿಕಲ್ ವಾಹನದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ..!

ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿರುವ ಈ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ವೈಯಕ್ತಿಯ ಬಳಕೆಗಾಗಿ ‘ಬಜಾಜ್‌’ ಕಂಪನಿ ಮಾಲೀಕತ್ವದ ಚೇತಕ್ ಟೆಕ್ನಾಲಜೀಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಈ ಸ್ಕೂಟರ್ ಓಡಿಸಲು ಯಾವುದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲದ ಕಾರಣ ಇದು ಹೆಚ್ಚಿನ ಜನಪ್ರಿಯ ಗಳಿಸುವ ಸಾಧ್ಯತೆಗಳಿದೆ.

ಬ್ಯಾಟರಿ ಸಾಮರ್ಥ್ಯ ಹೇಗಿದೆ?

ಈ ಎಲೆಕ್ಟ್ರಿಕಲ್ ಸ್ಕೂಟರ್‌ನಲ್ಲಿ 984.3 Wh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು,, ಸಂಪೂರ್ಣ ಚಾರ್ಜಿನಲ್ಲಿ 68 km ರೇಂಜ್ ಮೈಲೇಜ್ ನೀಡಲಿದೆ. ಇದರಲ್ಲಿ ಬಳಕೆ ಮಾಡಿರುವ ಮೋಟರ್ ಹಬ್ ಮೌಂಟೆಡ್ ಯುನಿಟ್ ಆಗಿದ್ದು, 25km/h ಟಾಪ್ ಸ್ಪೀಡ್ ಹೊಂದಿದೆ. ಕಂಪನಿಯು ಮುಲ್ಟಿಪಲ್ ಮೊಬಿಲಿಟಿ ಪಾಕ್ ಅನ್ನು ಕೊಡುತ್ತಿದ್ದು, ಅದರ ಚಂದಾದಾರಿಕೆ ಶುಲ್ಕ ರೂ.499 ರಿಂದ 899 ಇದ್ದು, ಇದರಿಂದ ಪ್ರತಿ ಕಿ.ಮೀ ಕ್ರಮಿಸಲು 70 ವೆಚ್ಚವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಇನ್ನು‌, ಈ ಸ್ಕೂಟರ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಕಡೆಗೆ ಗಮನ ಹರಿಸುವುದಾದರೆ, ಇದು ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡ್ಯುಯಲ್ ಸ್ಪ್ರಿಂಗ್‌ ಸಸ್ಪೆಷನ್ ಸೆಟಪ್ ಹೊಂದಿದೆ. ಜೊತೆಗೆ ಫ್ರಂಟ್, ರೇರ್, 110ಎಂಎಂ ಡ್ರಮ್ ಬ್ರೇಕ್ ಪಡೆದಿದ್ದು, 12 ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 60/100, ರೇರ್ 80/80 ಅಳತೆಯ ಟೈಯರ್ಸ್ ಲಭ್ಯವಿದೆ.

ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 1,630 ಎಂಎಂ ಉದ್ದ, 670 ಎಂಎಂ ಅಗಲ ಹಾಗೂ 1,200 ಎಂಎಂ ಉದ್ದದ ವೀಲ್ ಬೇಸ್ ಇದರಲ್ಲಿದೆ. ಸಿಂಗಲ್ ಸೀಟ್ ಹೊಂದಿರುವ ಈ ಸ್ಕೂಟರ್ ನ ಸೀಟ್ ಹೈಟ್ 740 ಇದ್ದು, ಸರಿ ಸುಮಾರು 100 ಕಿಲೋಗ್ರಾಂ ಸಾಗಿಸುವಷ್ಟು ಸಾಮರ್ಥ್ಯವಿದೆ.

ಬೆಲೆ ಮತ್ತು‌ ಲಭ್ಯತೆ?

ಯುಲು ಕಂಪನಿ ಹೊರ ತಂದಿರುವ ವೈನ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.55,555 ಎಕ್ಸ್ ಶೋರೂಂ ಬೆಲೆಗೆ ಲಾಂಚ್ ಮಾಡಲಾಗಿದೆ. ರೂ.999 ಮುಂಗಡ ಹಣ ಪಾವತಿಸಿ, ಬುಕಿಂಗ್ ಮಾಡಬಹುದು. ಲಾಂಚ್ ಆಫರ್ ಕೆಲವೇ ದಿನಗಳವರೆಗೆ ಇರಲಿದ್ದು, ಆ ನಂತರ ಇದರ ಬೆಲೆ ರೂ.64,999 ಆಗಲಿದ್ದು, ಮೇ ಮಧ್ಯ ಭಾಗದಲ್ಲಿ ವಿತರಣೆ ಆರಂಭವಾಗಲಿದೆ. ಸದ್ಯ, ಯುಲು ವೈನ್ ಇ-ಸ್ಕೂಟರ್ ಬೆಂಗಳೂರಿನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ ಎಂದು‌ ಹೇಳಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *