600 ಮಕ್ಕಳಿಗೆ ತಂದೆಯಾದ ವ್ಯಕ್ತಿಗೆ ನ್ಯಾಯಾಲಯ ಕೊಡ್ತು ತಡೆಯಾಜ್ಞೆ – ಅಷ್ಟಕ್ಕೂ ಕೋರ್ಟ್ ಹೊರಡಿಸಿದ ಆದೇಶವೇನು‌ ಗೊತ್ತಾ…!?

600 ಮಕ್ಕಳಿಗೆ ತಂದೆಯಾದ ವ್ಯಕ್ತಿಗೆ ನ್ಯಾಯಾಲಯ ಕೊಡ್ತು ತಡೆಯಾಜ್ಞೆ – ಅಷ್ಟಕ್ಕೂ ಕೋರ್ಟ್ ಹೊರಡಿಸಿದ ಆದೇಶವೇನು‌ ಗೊತ್ತಾ…!?

ನ್ಯೂಸ್ ಆ್ಯರೋ‌ : ವೀರ್ಯ ದಾನದ ಮೂಲಕ 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿರುವ ವ್ಯಕ್ತಿಗೆ ಇನ್ಮುಂದೆ ವೀರ್ಯ ದಾನ ಮಾಡದಂತೆ ನೆದರ್ಲ್ಯಾಂಡ್ಸ್‌ ಕೋರ್ಟ್‌ ನಿರ್ಬಂಧ ಹೇರಿದೆ. ಈ ವೀರ್ಯದಾನಿ ಇನ್ನು ಮುಂದೆ ವೀರ್ಯದಾನ ಮಾಡಬಾರದು ಎಂದು ಡಚ್ ನ ನ್ಯಾಯಾಲಯ ಆದೇಶ ಹೊರಡಿಸಿದೆ.

ಫಲವತ್ತತೆಯ ಹಗರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗೆ ನಿರ್ಬಂಧ ಹೇರಲಾಗಿದೆ. ವೀರ್ಯದಾನಿಯನ್ನು 41 ವರ್ಷ ವಯಸ್ಸಿನ ಜೋನಾಥನ್ ಜಾಕೋಬ್ ಮೈಜರ್ ಎಂದು ಗುರುತಿಸಲಾಗಿದೆ. ಮಗುವಿನ ತಾಯಿಯೊಬ್ಬರು ಫೌಂಡೇಶನ್‌ ಮೂಲಕ ಹೇಗ್‌ ನ ಕೋರ್ಟ್‌ ನಲ್ಲಿ ದಾವೆ ಹೂಡಿದ ನಂತರ ವ್ಯಕ್ತಿ ವೀರ್ಯ ದಾನ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

ಡಚ್‌ನ 41 ವರ್ಷದ ಈತನ ಹೆಸರು ಜೊನಾಥನ್‌ ಮೈಜರ್‌ ಎಂದು ಟೆಲಿಗ್ರಾಫ್‌ ಸುದ್ದಿಪತ್ರಿಕೆಯು ಗುರುತಿಸಿದೆ. ಇನ್ನು ಮುಂದೆ ಈತ ಕ್ಲಿನಿಕ್‌ಗಳಿಗೆ ವೀರ್ಯದಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ. ಎಲ್ಲಾದರೂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ವೀರ್ಯ ದಾನ ಮಾಡಿದರೆ ಪ್ರತಿ ಉಲ್ಲಂಘನೆಗೆ 100,000 ಯುರೋ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ಈಗಾಗಲೇ ಈತನ ದಾನಿ ವೀರ್ಯವನ್ನು ಬಳಸುತ್ತಿರುವ ಪೋಷಕರಿಗೆ ಮೀಸಲಾದ ಡೋಸ್‌ಗಳನ್ನು ಹೊರತುಪಡಿಸಿ, ಕ್ಲಿನಿಕ್‌ಗಳಲ್ಲಿ ಸಂಗ್ರಹದಲ್ಲಿರುವ ಈತನ ಎಲ್ಲಾ ವೀರ್ಯವನ್ನು ನಾಶ ಮಾಡಲು ವಿದೇಶದಲ್ಲಿರುವ ಕ್ಲಿನಿಕ್‌ಗಳಿಗೆ ಪತ್ರ ಬರೆಯುವಂತೆ ಕೋರ್ಟ್‌ ಆದೇಶಿಸಿದೆ.

ಮೈಜರ್‌ನ ವೀರ್ಯವನ್ನು ಬಳಸಲು ಮುಂದಾಗುತ್ತಿರುವ ಡಚ್‌ ಪೋಷಕರ ಹಿತಾಸಕ್ತಿಗಳನ್ನು ಮತ್ತು ದಾನಿ ಮಕ್ಕಳ ಭವಿಷ್ಯವನ್ನು ಉದ್ದೇಶದಲ್ಲಿಟ್ಟುಕೊಂಡು ನಾಗರಿಕ ಪ್ರತಿಷ್ಠಾನವೊಂದು ಈ ಕುರಿತು ಪ್ರಕರಣ ದಾಖಲಿಸಿತ್ತು. “ಮೈಜರ್‌ನ ಮುಂದುವರೆದ ವೀರ್ಯ ದಾನವು ದಾನಿ ಮಕ್ಕಳ ಖಾಸಗಿ ಜೀವನದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಆಕಸ್ಮಿಕ ಮಿಲನ ಮತ್ತು ಸಂತಾನೋತ್ಪತಿಯ ಭಯದಿಂದ ಪ್ರಣಯ ಸಂಬಂಧ ಹಾಳುಗೆಡಹುತ್ತದೆ ಎಂದು ಪ್ರತಿಷ್ಠಾನ ವಾದಿಸಿದೆ.

ಮೈಜರ್‌ ಈ ರೀತಿ ಸಾಮೂಹಿಕ ವೀರ್ಯ ದೇಣಿಗೆ ಮಾಡುವ ಪ್ರಕರಣ ಮೊದಲ ಬಾರಿಗೆ 2017ರಲ್ಲಿ ಬೆಳಕಿಗೆ ಬಂತು. ಡಚ್‌ನ ಫರ್ಟಿಲಿಟಿ ಕ್ಲಿನಿಕ್‌ಗಳಿಗೆ ಆಗಲೇ ಈತ ವೀರ್ಯ ದಾನ ಮಾಡುವುದನ್ನು ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಈತನ ವೀರ್ಯ ದಾನದ ಮೂಲಕ ನೂರಕ್ಕೂ ಹೆಚ್ಚು ಮಕ್ಕಳು ಜನಿಸಿದ್ದವು.

ಡಚ್‌ನಲ್ಲಿ ನಿಷೇಧ ಹೇರಿದರೂ ಆತ ತನ್ನ ಕೆಲಸ ನಿಲ್ಲಿಸಲಿಲ್ಲ. ಡ್ಯಾನಿಷ್‌ ಸ್ಪ್ರೆಮ್‌ ಬ್ಯಾಂಕ್‌ ಕ್ರಯೊಸ್‌ ಸೇರಿದಂತೆ ವಿದೇಶಿ ಕ್ಲಿನಿಕ್‌ಗಳಿಗೆ ಈತ ವೀರ್ಯದಾನ ಮಾಡಲು ಆರಂಭಿಸಿದ. ಇಷ್ಟು ಮಾತ್ರವಲ್ಲದೆ ವೀರ್ಯದಾನಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳ ಮೂಲಕವೂ ಡೊನೆಟ್‌ ಮಾಡುತ್ತಿದ್ದ. ಕೆಲವೊಮ್ಮೆ ಈತ ಬೇರೆಬೇರೆ ಹೆಸರುಗಳಲ್ಲಿ ವೀರ್ಯದಾನ ಮಾಡುತ್ತಿದ್ದ ಎಂದು ಆಲ್ಗಿಮೀನ್‌ ಡಾಗ್ಲಾಡ್‌ ಡೈಲಿ ವರದಿ ಮಾಡಿದೆ.

ವೀರ್ಯದಾನವನ್ನು ವ್ಯವಹಾರದಂತೆ ನಡೆಸಿ ಹಣ ಸಂಪಾದಿಸುತ್ತಿದ್ದ ಈತನ ಕೆಲಸಕ್ಕೆ ಇದೀಗ ಡಚ್‌ ಕೋರ್ಟ್‌ ತಡೆ ನೀಡಿದೆ. ಎಲ್ಲಾದರೂ ಕೋರ್ಟ್‌ ಆದೇಶ ಮೀರಿ ದಾನ ಮಾಡಿದರೆ ಪ್ರತಿ ಪ್ರಕರಣಕ್ಕೆ ಈತ ಒಂದು ಲಕ್ಷ ಯುರೋದಷ್ಟು ದಂಡ ತೆರಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *