ಅಬ್ಬಾ… ಒಂದು ರೈಲು ತಯಾರಿಸೋಕೆ ಎಷ್ಟು ಕೋಟಿ ಖರ್ಚಾಗುತ್ತೆ ಗೊತ್ತಾ? – ನಿಮಗೆ ಈ ಖರ್ಚಿನ ಬಗ್ಗೆ ಅಂದಾಜು ಕೂಡ ಇರ್ಲಿಕ್ಕಿಲ್ಲ..!!

ಅಬ್ಬಾ… ಒಂದು ರೈಲು ತಯಾರಿಸೋಕೆ ಎಷ್ಟು ಕೋಟಿ ಖರ್ಚಾಗುತ್ತೆ ಗೊತ್ತಾ? – ನಿಮಗೆ ಈ ಖರ್ಚಿನ ಬಗ್ಗೆ ಅಂದಾಜು ಕೂಡ ಇರ್ಲಿಕ್ಕಿಲ್ಲ..!!

ನ್ಯೂಸ್ ಆ್ಯರೋ‌ : ರೈಲು ಪ್ರಯಾಣ ಯಾರಿಗೆ ಇಷ್ಟ ಇಲ್ಲ ಹೇಳಿ? ಇದು ಆರಾಮದಾಯಕ ಮಾತ್ರವಲ್ಲ ಕಡಿಮೆ ಖರ್ಚನ್ನು ಹೊಂದಿದೆ. ಹೀಗಾಗಿ ಬಹುತೇಕರು ರೈಲು ಪ್ರಯಾಣವನ್ನು ನೆಚ್ಚಿಕೊಳ್ಳುತ್ತಾರೆ. ದೇಶದ ಜೀವನಾಡಿ ಎಂದು ಕರೆಯಲ್ಪಡುವ ರೈಲು ತಯಾರಿಸಲು ಎಷ್ಟು ವೆಚ್ಚವಾಗುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಅದರಲ್ಲೂ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ ಎಷ್ಟು ದುಬಾರಿ ಎನ್ನುವ ಮಾಹಿತಿ ನಾವು ನೀಡುತ್ತೇವೆ.

ಭಾರತದಲ್ಲಿ ಸಂಚರಿಸುವ ರೈಲುಗಳು ಸಾಮಾನ್ಯವಾಗಿ ಎಲೆಕ್ಟ್ರಿಕ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗಿವೆ. ಈ ಎಂಜಿನ್‌ಗಳನ್ನು ತಯಾರಿಸಲು 13ರಿಂದ 20 ಕೋಟಿ ರೂ. ವೆಚ್ಚವಾಗುತ್ತದೆ. ಗಮನಿಸಬೇಕಾದ ಅಂಶ ಎಂದರೆ ಎಂಜಿನ್‌ನ ಬೆಲೆಯು ಅದರ ಶಕ್ತಿ ಮತ್ತು ಅದು ಯಾವುದರಲ್ಲಿ ಚಲಿಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ರೈಲಿನ ಸಾಮಾನ್ಯ ಕೋಚ್ ತಯಾರಿಸಲು ಸರಾಸರಿ 2 ಕೋಟಿ ರೂಪಾಯಿ ಬೇಕಾಗುತ್ತದೆ. ಅದರಲ್ಲೂ ಎಸಿ ಕ್ಲಾಸ್ ಕೋಚ್ ತಯಾರಿಕೆಗೆ ತಗಲುವ ವೆಚ್ಚ ಇನ್ನೂ ಹೆಚ್ಚು. ರೈಲುಗಳು ಸರಾಸರಿ 24 ಕೋಚ್‌ಗಳನ್ನು ಹೊಂದಿರುತ್ತವೆ. ಈ ಪ್ರಕಾರ ಲೆಕ್ಕ ಹಾಕಿದರೆ ಎಂಜಿನ್‌ಗೆ ಸರಾಸರಿ 18 ಕೋಟಿ ರೂ. ಮತ್ತು 24 ಕೋಚ್‌ಗಳಿಗೆ 48 ಕೋಟಿ ರೂ. ರೈಲಿನ ಒಟ್ಟು ಸರಾಸರಿ ವೆಚ್ಚ 66 ಕೋಟಿ ರೂ.

ಇನ್ನು ವಂದೇ ಭಾರತ್ ಎಕ್ಸ್‌ಪ್ರೆಸ್‌ ನಿರ್ಮಾಣ ನೋಡುವುದಾದರೆ ಇದರ ತಯಾರಿ ದುಬಾರಿಯಾಗಿರುತ್ತದೆ. ಪಿಟಿಐ ಪ್ರಕಾರ, ಅಪ್​ಡೇಟ್​ ವರ್ಶನ್ ​ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿರ್ಮಾಣಕ್ಕೆ ಸುಮಾರು 115 ಕೋಟಿ ರೂ. ಬೇಕಾಗುತ್ತದೆ ಎನ್ನಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *