ಮಾರುಕಟ್ಟೆಗೆ ಬರಲಿದೆ DL ರಹಿತ ಹೊಂಡಾ ಬೈಕ್ ಗಳು; 10ಕ್ಕೂ ಹೆಚ್ಚು ಎಲೆಕ್ಟ್ರಿಕಲ್ ವಾಹನಗಳು ಬಿಡುಗಡೆಗೆ‌ ಸಜ್ಜು

ಮಾರುಕಟ್ಟೆಗೆ ಬರಲಿದೆ DL ರಹಿತ ಹೊಂಡಾ ಬೈಕ್ ಗಳು; 10ಕ್ಕೂ ಹೆಚ್ಚು ಎಲೆಕ್ಟ್ರಿಕಲ್ ವಾಹನಗಳು ಬಿಡುಗಡೆಗೆ‌ ಸಜ್ಜು

ನ್ಯೂಸ್ ಆ್ಯರೋ : ವಾಹನ ಮಾರುಕಟ್ಟೆಯನ್ನ‌ ನಿದಾನವಾಗಿ ಇಲೆಕ್ಟ್ರಾನಿಕ್ ವಾಹನಗಳು ಆಕ್ರಮಿಸಿಕೊಳ್ಳುತ್ತಿವೆ. ದಿನದಿಂದ ದಿನಕ್ಕೆ ನೂತನ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿವೆ. ಇದೀಗ ಜಪಾನ್ ಮೂಲದ ವಾಹನ‌ ತಯಾರಿಕಾ ಕಂಪೆನಿ ಹೊಂಡಾ, ಎಲೆಕ್ಟ್ರಿಕ್ ವಾಹನ‌ ವಿಭಾಗವನ್ನು ಬಲ‌ಪಡಿಸಲು ಮುಂದಾಗಿದೆ.

ಹೊಸದಾಗಿ ಮಾರುಕಟ್ಟೆಗೆ ಬರಲಿರುವ ವಾಹನಗಳೆಂದರೆ, ಕಬ್ ಇ, ಡಾಕ್ಸ್ ಇ, ಜೂಮರ್ ಇ. ಇವುಗಳ ತಯಾರಿಗೆ ಯಾವ ತಂತ್ರಜ್ಞಾನ ಬಳಸಲಾಗುತ್ತಿದೆ ಎಂಬುದನ್ನು‌ ಕಂಪೆನಿ ಬಹಿರಂಗ ಪಡಿಸಿಲ್ಲ. ವೆಚ್ಚವನ್ನು ಉಳಿತಾಯ ಮಾಡಲು ಹಾಗೂ ಬೇಗ ಮಾರುಕಟ್ಟೆಗೆ ವಾಹನಗಳನ್ನು ಲಾಂಚ್ ಮಾಡಲು ಪೆಟ್ರೋಲ್ ಚಾಲಿತ ಬೈಕ್‌ಗಳಿಗೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದರ ವಿನ್ಯಾಸ ಅತ್ಯಾಕರ್ಷಕವಾಗಿದ್ದು, ಗ್ರಾಹಕರಿಗೆ ಇಷ್ಟವಾಗಲಿದೆ. ಚಿಕ್ಕ ರಸ್ತೆಗಳಲ್ಲು ಆರಾಮದಾಯಕವಾಗಿ ಹೋಗಬಹುದು. ಅಲ್ಲದೆ, ಮುಂಬರುವ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೋಂಡಾದ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಬೈಕ್‌ಗಳಿಗೆ ಯಾವುದೇ ಪರವಾನಗಿ (ಡಿಎಲ್) ಅಗತ್ಯವಿಲ್ಲ. ಏಕೆಂದರೆ, ಇವು 15 mph (24 kmph) ಟಾಪ್ ಸ್ವೀಡ್ ಹೊಂದಿದ್ದು, ರೇಂಜ್ ಕೂಡ ಕಡಿಮೆಯಿರಲಿದೆ‌ ಎಂದು‌ ಕಂಪೆನಿ ತಿಳಿಸಿದೆ.

ಈ ವಾಹನಗಳ ಮತ್ತೊಂದು ವಿಶೇಷತೆಯೆಂದರೆ, ಇವುಗಳು ಪೆಡಲ್‌ಗಳನ್ನು ಹೊಂದಿವೆ. ಬ್ಯಾಟರಿ ಖಾಲಿಯಾದ ಸಂದರ್ಭದಲ್ಲಿ ಈ ಬೈಕ್‌ಗಳನ್ನು ಬೈಸಿಕಲ್ ರೀತಿಯು ಬಳಕೆ ಮಾಡಬಹುದು. ಇವುಗಳ ತೂಕವು ಕಡಿಮೆ ಇರಲಿದ್ದು, ಓಡಿಸಲು ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಇದು ಕೈನೆಟಿಕ್ ಲೂನಾಗೆ ಹೋಲುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಸಾಧ್ಯತೆಯಿದ್ದು, ಬೆಲೆಯು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಂಪೆನಿಯು 2025ರೊಳಗೆ 10 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ. 2027 ರೊಳಗೆ 10 ಲಕ್ಷ ಯುನಿಟ್ ಮಾರಾಟ ಗುರಿಯನ್ನು ತಲುಪಲು ಚಿಂತನೆ ನಡೆಸಿದ್ದು, 2030ರ ಅಂತ್ಯಕ್ಕೆ 35 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟದಲಿದೆಯಂತೆ. ಆದರೆ, ಕಂಪನಿಯ ಮಾರಾಟ ವಿಭಾಗದಲ್ಲಿ ಬಹುತೇಕ ICE ಚಾಲಿತ ವಾಹನಗಳೇ ಇರಲಿದ್ದು, ಅದರಲ್ಲಿ 15% ಎಲೆಕ್ಟ್ರಿಕ್ ವಾಹನಗಳ ಪಾಲನ್ನು ಹೊಂದಲು ಕಂಪನಿ ಬಯಸುತ್ತಿದೆ ಎನ್ನಲಾಗಿದೆ.

ಬಲ್ಲ ಮೂಲಗಳ ಪ್ರಕಾರ, ಈ ಸ್ಕೂಟರ್ 50 kmph ಟಾಪ್ ಸ್ವೀಡ್ ಹೊಂದಿದ್ದು, ಈಗಿರುವ ಸ್ಕೂಟರ್ ಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಅಲ್ಲದೆ, ರೇಂಜ್ ಕೂಡ ಹೇಳಿಕೊಳ್ಳುವ ಹಾಗಿರುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ವಿಚಾರಗಳು ಸ್ಪಷ್ಟವಾಗಬೇಕಿದ್ದರೆ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರಬೇಕಿದೆ.

ಇತ್ತೀಚೆಗೆ, ಹೋಂಡಾ ದೇಶೀಯ ಮಾರುಕಟ್ಟೆಯಲ್ಲಿ ಆಕ್ಟಿವಾ 6G ಸ್ಮಾರ್ಟ್ ಕೀ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ರೂ. 80,537 ಆರಂಭಿಕ ಬೆಲೆಯನ್ನು ಹೊಂದಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 109.51 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7.7 bhp ಪವರ್ ಮತ್ತು 8.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಮಾರ್ಟ್ ಅನ್ ಲಾಕ್ ಹಾಗೂ ಸ್ಮಾರ್ಟ್ ಸೇಫ್ ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಗ್ರಾಹಕ ಸ್ನೇಹಿಯಾಗಿದೆ‌ ಎಂದು‌ ಕಂಪೆನಿ ತಿಳಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *