ಮಾರುಕಟ್ಟೆಗೆ‌ ಬಂದಿಗೆ Noise Buds VS102 Pro ಇಯರ್ ಬಡ್ – ₹1,799ರೂ.ಗೆ ಅತ್ಯದ್ಭುತ ಇಯರ್ ಬಡ್..

ಮಾರುಕಟ್ಟೆಗೆ‌ ಬಂದಿಗೆ Noise Buds VS102 Pro ಇಯರ್ ಬಡ್ – ₹1,799ರೂ.ಗೆ ಅತ್ಯದ್ಭುತ ಇಯರ್ ಬಡ್..

ನ್ಯೂಸ್ ಆ್ಯರೋ : ಪ್ರಪಂಚದ ಬ್ರ್ಯಾಂಡ್ ಟೆಕ್ ವೆರಿಯೆಬಲ್ ಮಾರುಕಟ್ಟೆಗೆ ತನ್ನ ಹೊಸಾ Noise Buds VS102 ವಯರ್ ಲೆಸ್ ಇಯರ್ ಬಡ್ ಗಳನ್ನು‌ ಲಾಂಚ್ ಮಾಡಿದೆ. ಗ್ರಾಹಕಸ್ನೇಹಿ ಬೆಲೆಯಲ್ಲಿ ಇಯರ್ ಬಡ್ ಹುಡುಕುತ್ತಿರುವವರಿಗೆ ಸಕ್ರಿಯ ಶಬ್ದ ರದ್ದತಿ ಸಾಮರ್ಥ್ಯ ಹೊಂದಿರುವ ಈ ಸಾಧನವು 1,799 ರೂ.ಗೆ‌ ಲಭ್ಯವಿರಲಿದೆ. ಈ ಅತ್ಯದ್ಭುತ ಇಯಡ್ ಬಡ್ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

Noise Buds VS102 Pro ಇಯರ್ ಬಡ್ ವಿಶೇಷತೆಗಳೇನು?

ಈ ಇಯರ್‌ಬಡ್ ಗಳು 25db ಸಕ್ರಿಯ ಶಬ್ದ ರದ್ದತಿ ಸಾಮರ್ಥ್ಯ ಹೊಂದಿದೆ. ಕ್ವಾಡ್ ಮೈಕ್ಸ್ ಒಳಗೊಂಡಿರುವ ಇನ್-ಇಯರ್‌ ಫಾರ್ಮ್ ಫ್ಯಾಕ್ಚರ್ ಮತ್ತು ಆನ್-ಇಯರ್ ಟಚ್ ಕಂಟ್ರೋಲರ್ ಹೊಂದಿರಲಿದೆ. ಇದು ಬಳಕೆದಾರರಿಗೆ ಶಬ್ದ ಪಾರದರ್ಶಕತೆ, ಗೇಮಿಂಗ್ ಮೂಡ್, ವಾಲ್ಯೂಮ್‌ ಸರಿ ಹೊಂದಿಸಲು, ಸಿರಿ ಹಾಗೂ ಗೂಗಲ್ ಅಸಿಸ್ಟೆಂಟ್ ಪ್ರವೇಶಿಸಲು ಅನುವು ಮಾಡಿಕೊಡಲಿದೆ.‌ ಆಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಸ್ಮಾರ್ಟ್ಫೋನ್ ಗಳಿಗೆ ಹೊಂದಿಕೆಯಾಗುವ ಈ ಇಯರ್ ಬಡ್ ಗಳು ಹ್ಯಾಂಡ್ಸ್ ಫ್ರಿ ಕಾಲ್ ವೈಶಿಷ್ಟ್ಯಗಳನ್ನು ಸಹ ಹೊಂದಿರಲಿದೆ‌ ಎಂದು ಕಂಪೆನಿ‌ ತಿಳಿಸಿದೆ‌.

ಇಷ್ಟೇ ಅಲ್ಲದೆ, ಇದರಲ್ಲಿ 11mm ಸ್ಪೀಕರ್ ಡ್ರೈವ್ ಗಳನ್ನು ಅಳವಡಿಸಲಾಗಿದೆ. ಇವು 10 ಮೀಟರ್ ವಯರ್ ಲೆಸ್ ಶ್ರೇಣಿ ಹೊಂದಿದ್ದು, 5.3 ಬ್ಲೂಟೂತ್ ಬೆಂಬಲಿಸುತ್ತದೆ. IPX5 ರೇಟಿಂಗ್ ಹೊಂದಿರುವ ಇವುಗಳು ನೀರಿನಿಂದ ಸುರಕ್ಷಿತವಾಗಿದೆ‌ ಎನ್ನಲಾಗಿದೆ. ಜೊತೆಗೆ ಒಂದೇ ಚಾರ್ಜ್ ನಲ್ಲಿ ಆರು‌ ಗಂಟೆಗಳ ಪ್ಲೇ ಟೈಮ್ ಹಾಗೂ ಚಾರ್ಜಿಂಗ್ ಕೇಸ್ ನೊಂದಿಗೆ 34 ಗಂಟೆಗಳ ವರೆಗೆ‌ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಇದರ ಪ್ರಮುಖ ಆಕರ್ಷಣೆಯೆಂದರೆ ಕೇವಲ 10 ನಿಮಿಷಗಳ ಚಾರ್ಜ್ ನಿಂದ 150‌ನಿಮಿಷಗಳ ಪ್ಲೇ ಟೈಮ್‌ ದೊರೆಯಲಿದೆ.

Noise Buds VS102 Pro ಇಯರ್ ಬಡ್ ಬಲೆ ಎಷ್ಟು?

ಭಾರತದಲ್ಲಿ Noise Buds VS102 Pro ಇಯರ್ ಬಡ್ ಗಳನ್ನು1,799 ರೂ.ಗೆ ಪರಿಚಯಿಸಲಾಗಿದೆ. ಜೆಟ್ ಬ್ಲಾಕ್, ಕಾಮ್‌ ಬೀಜ್, ಅರೋರಾ ಗ್ರೀನ್ ಮತ್ತು‌ ಗ್ಲೇಸಿಯರ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್ ಬಡ್ ಗಳು Gonoise ಹಾಗೂ ಫ್ಲಿಫ್ ಕಾರ್ಟ್ ಆನ್ಲೈನ್ ಸ್ಟೋರ್ ಗಳಲ್ಲಿ ಸಿಗಲಿದೆ ಎಂದು‌ ಕಂಪೆನಿ‌ ಸ್ಪಷ್ಟನೆ ನೀಡಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *