ಏರ್ ಬ್ಯಾಗ್ ಕಂಟ್ರೋಲರ್ ಗಳಲ್ಲಿ ದೋಷ ಹಿನ್ನೆಲೆ – ಅಲ್ಟೊ, ಇಕೊ, ಬ್ರೆಝಾ ಸೇರಿದಂತೆ ಹಲವು ಕಾರ್ ಗಳನ್ನು ವಾಪಾಸ್ ಪಡೆದ ಸುಜುಕಿ ಕಂಪನಿ

ಏರ್ ಬ್ಯಾಗ್ ಕಂಟ್ರೋಲರ್ ಗಳಲ್ಲಿ ದೋಷ ಹಿನ್ನೆಲೆ – ಅಲ್ಟೊ, ಇಕೊ, ಬ್ರೆಝಾ ಸೇರಿದಂತೆ ಹಲವು ಕಾರ್ ಗಳನ್ನು ವಾಪಾಸ್ ಪಡೆದ ಸುಜುಕಿ ಕಂಪನಿ

ನ್ಯೂಸ್ ಆ್ಯರೋ : ಏರ್‌ಬ್ಯಾಗ್ ಕಂಟ್ರೋಲರ್‌ಗಳಲ್ಲಿನ ಸಂಭವನೀಯ ದೋಷದ ಕಾರಣದಿಂದಾಗಿ ತನ್ನ 17 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯುತ್ತಿರುವುದಾಗಿ ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಹೇಳಿದೆ.

ಡಿಸೆಂಬರ್ 8, 2022 ಮತ್ತು ಜನವರಿ 12, 2023ರ ನಡುವೆ ತಯಾರಿಸಲಾದ 17,362 ವಾಹನಗಳನ್ನು ಹಿಂಪಡೆಯುತ್ತಿರುವುದಾಗಿ ಮಾರುತಿ ಸುಜುಕಿ ಬುಧವಾರ ವಿವರ ನೀಡಿದೆ. ಕಾರುಗಳನ್ನು ಹಿಂಪಡೆಯುವ ಮೂಲಕ ಏರ್‌ಬ್ಯಾಗ್ ಕಂಟ್ರೋಲರ್‌ನ ಸಮಸ್ಯೆ ಇರುವ ಭಾಗವನ್ನು ಪರಿಶೀಲನೆ ನಡೆಸಿ ಈ ಭಾಗವನ್ನು ಬದಲಾಯಿಸಲಾಗುವುದು ಎಂದು ಮಾರುತಿ ಸುಜುಕಿ ಮಾಹಿತಿ ನೀಡಿದೆ.

ಅಪರೂಪದ ಸಂದರ್ಭಗಳಲ್ಲಿ ವಾಹನ ಅಪಘಾತವಾದಾಗ ಏರ್‌ಬ್ಯಾಗ್‌ಗಳು ಮತ್ತು ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳನ್ನು ಸೆನ್ಸಾರ್‌ಗಳು ನಿಯೋಜಿಸುವುದಿಲ್ಲ ಎಂದು ಮಾರುತಿ ಸುಜುಕಿ ಕಾರಿನಲ್ಲಿರುವ ಸಮಸ್ಯೆಯನ್ನು ವಿವರಿಸಿದೆ.

ಕಂಪನಿಯು ಹಿಂತೆಗೆದುಕೊಳ್ಳುತ್ತಿರುವ ಕಾರುಗಳು ಜನಪ್ರಿಯ ಮಾದರಿಯ ಕಾರುಗಳಾಗಿದ್ದು, ಮಾರುತಿ ಸುಜುಕಿ ಆಲ್ಟೊ ಕೆ10, ಎಸ್ – ಪ್ರೆಸ್ಸೊ, ಇಕೊ, ಬ್ರೆಝಾ, ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾ ಮಾದರಿಗಳನ್ನು ಹಿಂಪಡೆಯುತ್ತಿರುವುದಾಗಿ ಕಂಪನಿಯು ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ಈಗಾಗಲೇ ಜನವರಿ 16ರಿಂದ ಜಾರಿಗೆ ಬರುವಂತೆ ತನ್ನ ಎಲ್ಲಾ ಮಾದರಿಗಳ ಕಾರುಗಳ ಬೆಲೆಗಳನ್ನು ಸುಮಾರು ಶೇ. 1.1ರಷ್ಟು ಏರಿಕೆ ಮಾಡಿದೆ. ಹಣದುಬ್ಬರ ಮತ್ತು ಇತ್ತೀಚಿನ ನಿಯಂತ್ರಕ ಕ್ರಮಗಳಿಂದಾಗಿ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ಇದರಿಂದ ವಾಹನಗಳ ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ಸಮಜಾಯಿಷಿ ನೀಡಿದೆ.

ಸದ್ಯ ದೇಶೀಯ ಕಾರು ಉದ್ಯಮವು ಚೇತರಿಸಿಕೊಂಡಿದ್ದು, ಸೆಮಿಕಂಡಕ್ಟರ್ ಕೊರತೆಯು 2023ರಲ್ಲಿ ಕಡಿಮೆಯಾಗಲಿದೆ ಎಂದೂ ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್.ಸಿ. ಭಾರ್ಗವ ಹೇಳಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *