ಎರಡನೇ ಮದುವೆಗೆ ರೆಡಿಯಾದ ನಟಿ ಪ್ರೇಮಾ: ಕೊರಗಜ್ಜನ ಬಳಿ ಮನದ ಬೇಡಿಕೆ ಮುಂದಿಟ್ಟು ಪ್ರಾರ್ಥಿಸಿದ ಕೊಡಗಿನ ಸುಂದರಿ

ಎರಡನೇ ಮದುವೆಗೆ ರೆಡಿಯಾದ ನಟಿ ಪ್ರೇಮಾ: ಕೊರಗಜ್ಜನ ಬಳಿ ಮನದ ಬೇಡಿಕೆ ಮುಂದಿಟ್ಟು ಪ್ರಾರ್ಥಿಸಿದ ಕೊಡಗಿನ ಸುಂದರಿ

ನ್ಯೂಸ್ ಆ್ಯರೋ: ಕಾಂತಾರ ಸಿನಿಮಾದ ಯಶಸ್ವಿನ ಬಳಿಕ ಕರಾವಳಿಯ ದೈವದ ಶಕ್ತಿಯೂ ಎಲ್ಲರಿಗೂ ತಿಳಿಯಿತು. ಅದಲ್ಲದೆ ತುಳುನಾಡಿನ ಕಾರ್ಣಿಕದ ದೈವವಾದ ಕೊರಗಜ್ಜನ ಜನಪ್ರಿಯತೆಯೂ ಮತ್ತಷ್ಟು ಹೆಚ್ಚಿತು.

ಇದೀಗ ಸಿನಿಮಾ ಮಂದಿಯೂ ತಮ್ಮ ಕೋರಿಕೆಯನ್ನು ಈಡೇರಸುವಂತೆ ಬೇಡಿಕೊಳ್ಳಲು ಕರಾವಳಿಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವಂತದ್ದು. ಈಚೆಗೆ ನಟ ಶಿವರಾಜ್‌ಕುಮಾರ್‌ ದಂಪತಿಯೂ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಅದಲ್ಲದೆ ಕನ್ನಡದ ಖ್ಯಾತ ನಟಿ ಶ್ರುತಿ ಕುಟುಂಬ ಕೂಡಾ ಕೊರಗಜ್ಜನಿಗೆ ಕೋಲ ನೀಡಿ ಪ್ರಾರ್ಥಿಸಿದ್ದರು. ಅದಲ್ಲದೆ ಈಚೆಗೆ ಕೊಡಗಿನ ನಟಿ ಪ್ರೇಮಾ ಸಹ ಉಡುಪಿಯ ಕಾಪುವಿಗೆ ತೆರಳಿ ಕೊರಗಜ್ಜ ಮತ್ತು ಮಾರಿಯಮ್ಮನ ದರ್ಶನ ಪಡೆದು ಬಂದಿದ್ದು ಸುದ್ದಿಯಾಗಿತ್ತು.

ಇನ್ನೂ ನಟಿ ಪ್ರೇಮಾ ಕುಟುಂಬ ಕಂಕಣ ಭಾಗ್ಯದ ಸಲುವಾಗಿ ದೈವಸ್ಥಾನಕ್ಕೆ ಭೇಟಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ ನಟಿ ಪ್ರೇಮ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರು.

ಆದರೆ ಕಳೆದ ಕೆಲ ವರ್ಷದಿಂದ ಆಗೊಂದು ಈಗೊಂದು ಸಿನಿಮಾ ಮಾಡುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ವೆಡ್ಡಿಂಗ್‌ ಗಿಫ್ಟ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರಾದರೂ, ಅದಾದ ಮೇಲೆ ಬೇರಾವ ಸಿನಿಮಾ ಒಪ್ಪಿಕೊಂಡಿಲ್ಲ. ಈ ನಡುವೆ ಕೌಟುಂಬಿಕ ಸಮಸ್ಯೆಯಲ್ಲಿಯೂ ಪ್ರೇಮ ಸಿಲುಕಿದ್ದಾರೆ. ಅದೆಲ್ಲದರ ಪರಿಹಾರಕ್ಕಾಗಿಯೇ ದೈವಸ್ಥಾನಗಳಿಗೆ ಕುಟುಂಬ ಸಮೇತ ತೆರಳಿ ಬಂದಿದ್ದಾರೆ. ಎರಡನೇ ಮದುವೆ ಆಗುತ್ತಿರುವ ವಿಚಾರವನ್ನೂ ದೇವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕಾಪುವಿನಲ್ಲಿರುವ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಹೋದರ ಅಯ್ಯಪ್ಪ ಪತ್ನಿ ಅನು ಅಯ್ಯಪ್ಪ, ರಾಧಿಕಾ ಭಟ್‌ ಸೇರಿದಂತೆ ಕುಟುಂಬದವರು ಇದ್ದರು. ಈ ವೇಳೆ ಹೊಸ ಮಾರಿಗುಡಿಯ ಚೇರ್‌ಮನ್‌ ಕೆ ವಾಸುದೇವ್‌ ಶೆಟ್ಟಿ ದೇವಸ್ಥಾನದ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಳಿಕ ಅಲ್ಲಿಂದ ನೇರವಾಗಿ ಕೊರಗಜ್ಜನ ಸನ್ನಿಧಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಶನದ ನಂತರ ಮಾತನಾಡಿದ ಪ್ರೇಮಾ, “ಇದೇ ಮೊದಲ ಸಲ ನಾನು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದೇನೆ. ಆತನ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದೇ ಆಗಲಿದೆ ಎಂದು ನಂಬಿದ್ದೇನೆ” ಎಂದಿದ್ದಾರೆ.

ನಟಿ ಪ್ರೇಮ ಅವರು ಹಲವು ವರ್ಷಗಳ ಹಿಂದೆ ಜೀವನ್ ಅಪ್ಪಚ್ಚು ಅವರನ್ನು ಮದುವೆಯಾಗಿದ್ದರು. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ 2016ರಲ್ಲಿವಿಚ್ಛೇಧನವನ್ನು ಪಡೆದು ಗಂಡನಿಂದ ದೂರವಾಗಿದ್ದರು. ಈ ಘಟನೆ ಬಳಿಕ ನಟಿ ಪ್ರೇಮಾ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈಚೆಗೆ ಮತ್ತೇ ಬಣ್ಣದ ಬದುಕಿನಲ್ಲಿ ಕಾಣಿಸಿಕೊಂಡಿರುವ ನಟಿ ಪ್ರೇಮಾ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಇದೀಗ ನಟಿ ಪ್ರೇಮಾ ಅವರು ಎರಡನೇ ಮದುವೆಯಾಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೈವಸ್ಥಾನಕ್ಕೆ ತೆರಳಿ ಮನದ ಬಯಕೆ ಈಡೇರಿಸುವಂತೆ ಕೋರಿಕೊಂಡಿದ್ದಾರೆ. ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *