AK47 ರೈಫಲ್ ಗೂ ಜಗ್ಗಲ್ಲ, ಬಾಂಬ್ ದಾಳಿಗೂ ಬಗ್ಗಲ್ಲ ಪ್ರಧಾನಿ ಮೋದಿ ಕಾರ್ – ಅತ್ಯಾಧುನಿಕ ಶಸ್ತ್ರಸಜ್ಜಿತ ಈ ವಾಹನ ಹೇಗಿದೆ ಗೊತ್ತಾ?

AK47 ರೈಫಲ್ ಗೂ ಜಗ್ಗಲ್ಲ, ಬಾಂಬ್ ದಾಳಿಗೂ ಬಗ್ಗಲ್ಲ ಪ್ರಧಾನಿ ಮೋದಿ ಕಾರ್ – ಅತ್ಯಾಧುನಿಕ ಶಸ್ತ್ರಸಜ್ಜಿತ ಈ ವಾಹನ ಹೇಗಿದೆ ಗೊತ್ತಾ?

ನ್ಯೂಸ್‌ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಮಾತ್ರವಲ್ಲ, ವಿಶ್ವದ ಪ್ರಭಾವಿ ನಾಯಕನೂ ಹೌದು. ಅವರೂ ಎಲ್ಲೇ ಹೋದರೂ ಅತ್ಯುನ್ನತ ದರ್ಜೆಯ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ. ಅವರು ವಾಹನಗಳಲ್ಲಿ ಪ್ರಯಾಣಿಸುವಾಗಲೂ ಉತ್ಕೃಷ್ಟ ದರ್ಜೆಯ, ಅತ್ಯುನ್ನತ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಕಾರುಗಳನ್ನೇ ಬಳಸಬೇಕಾಗುತ್ತದೆ. ಹಾಗಾದರೆ ಮೋದಿ ಅವರು ಪ್ರಸ್ತುತ ಯಾವ ವಾಹನವನ್ನು ಬಳಸುತ್ತಾರೆ ಎಂದು ನೋಡೊಣ.

ನರೇಂದ್ರ ಮೋದಿ ಅವರು ಗುಜರಾತ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಹೀಂದ್ರಾ ನಿರ್ಮಾಣದ ಸ್ಕಾರ್ಪಿಯೋದಿಂದ ಹಿಡಿದು ಪ್ರಧಾನ ಮಂತ್ರಿ ಸ್ಥಾನಕ್ಕೇರುವ ತನಕ ಹಲವಾರು ಕಾರುಗಳನ್ನು ತಮ್ಮ ಅಧಿಕೃತ ವಾಹನವಾಗಿ ಬಳಕೆ ಮಾಡಿದ್ದಾರೆ. ಆದರೆ, ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಹೆಚ್ಚಿನ ಭದ್ರತೆ ಹೊಂದಿರುವ ಕೆಲವೇ ಕೆಲವು ಕಾರು ಮಾದರಿಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ಭದ್ರತಾ ಸಂಸ್ಥೆ ಸೂಚಿಸಿದ ಕಾರುಗಳನ್ನು ಮಾತ್ರ ಪ್ರಧಾನಿ ಮೋದಿ ಅವರ ಪ್ರಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದ್ದು, ಇವು ಅತ್ಯುನ್ನತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ಭದ್ರತಾ ದೃಷ್ಟಿಯಿಂದ ಪ್ರಧಾನಿಯವರ ಕಾರಿನ ಕೆಲವು ಸುರಕ್ಷಾ ವೈಶಿಷ್ಟ್ಯತೆಗಳನ್ನು ಗೌಪ್ಯವಾಗಿಡಲಾಗಿದ್ದು, ವೈಯಕ್ತಿಕ ಭದ್ರತಾ ವಿಭಾಗವು ನಿಗದಿಪಡಿಸಿದ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಕಾರುಗಳು ಮಾತ್ರ ಪ್ರಧಾನಿಯವರ ಪ್ರಯಾಣಕ್ಕೆ ಅರ್ಹವಾಗಿರುತ್ತವೆ.

ನರೇಂದ್ರ ಮೋದಿಯವರು ಇತ್ತೀಚೆಗೆ ಮರ್ಸಿಡಿಸ್ ಮೇಬ್ಯಾಕ್ ಎಸ್ 650 ಕಾರಿನಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದು, ಇದು ಈ ಹಿಂದಿನ ಕಾರು ಮಾದರಿಗಿಂತಲೂ ಹೆಚ್ಚಿನ ಭದ್ರತೆಯೊಂದಿಗೆ ಅರಾಮದಾಯಕವಾದ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಈ ಕಾರು ಅಲ್ಟ್ರಾ ಲಗ್ಷುರಿ ಸೆಡಾನ್ ಕಾರು ಮಾದರಿಯಾಗಿದ್ದು, ಇದು ಭಾರತದಲ್ಲಿ ಸಾಮಾನ್ಯ ಫೀಚರ್ಸ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.12 ಕೋಟಿ ಬೆಲೆ ಹೊಂದಿದೆ.

ಆದರೆ, ನರೇಂದ್ರ ಮೋದಿಯವರ ಭದ್ರತೆಗಾಗಿ ಒದಗಿಸಲಾಗಿರುವ ಮರ್ಸಿಡಿಸ್ ಮೇಬ್ಯಾಚ್ ಎಸ್ 650 ಕಾರು ಮಾದರಿಯು ಇನ್ನು ಕೆಲವು ಆಂತರಿಕ ಭದ್ರತಾ ವೈಶಿಷ್ಟ್ಯತೆಗಳೊಂದಿಗೆ ಮತ್ತಷ್ಟು ದುಬಾರಿ ಬೆಲೆ ಹೊಂದಿದ್ದು, ಯಾವುದೇ ಮಾದರಿಯ ದಾಳಿಗಳನ್ನು ಇವು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರು ಸಂಪೂರ್ಣವಾಗಿ ಬುಲೆಟ್‌ ಪ್ರೂಫ್‌ ವೈಶಿಷ್ಟ್ಯತೆ ಹೊಂದಿದ್ದು, ಉತ್ಕೃಷ್ಟ ಗುಣಮಟ್ಟದ ಬಾಡಿಯೊಂದಿಗೆ ಬುಲೆಟ್‌ಗಳನ್ನು ಎದುರಿಸುವಷ್ಟು ಸಾಮರ್ಥ್ಯ ಹೊಂದಿದೆ. ಈ ಮೂಲಕ ಪ್ರಬಲವಾದ ಬಾಂಬ್ ಸ್ಪೋಟಗಳನ್ನು ಎದರಿಸುವ ಶಕ್ತಿ ಹೊಂದಿರುವ ಹೊಸ ಕಾರು ಎಕೆ-47 ರೈಫಲ್‌ಗಳ ದಾಳಿಯನ್ನು ಕೂಡಾ ತಡೆದುಕೊಳ್ಳಬಹುದಾಗಿದ್ದು, ಎರಡು ಮೀಟರ್‌ ಅಂತರದಲ್ಲಿ ಸುಮಾರು 15 ಕೆಜಿಯಷ್ಟು ಟಿಎನ್‌ಟಿ ಸ್ಫೋಟಗೊಂಡರೂ ಕೂಡಾ ಅದರಿಂದ ಈ ಕಾರಿಗೆ ಯಾವುದೇ ಹಾನಿಯಾಗದಂತೆ ರಕ್ಷಣೆ ನೀಡುವ ಕಚವವನ್ನು ಹೊಂದಿದೆ.

ಈ ಕಾರಿನ ಕಿಟಕಿಗಳ ಒಳಭಾಗದಲ್ಲಿ ಪಾಲಿಕಾರ್ಬೊನೇಟ್ ಲೇಪನವನ್ನು ನೀಡಿರುವುದರಿಂದ ಒಳಭಾಗದಲ್ಲಿರುವರಿಗೆ ನೇರ ಸ್ಫೋಟದಿಂದ ರಕ್ಷಿಸಲು ಹೆಚ್ಚು ಶಸ್ತ್ರಸಜ್ಜಿತವಾಗಿದ್ದು, ಐಷಾರಾಮಿ ಆದ ಒಳಾಂಗಣ ವಿನ್ಯಾಸ ಕೂಡಾ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಹೊಸ ಕಾರು 6 ಲೀಟರ್ ಟ್ವಿನ್ ಟರ್ಬೊ V12 ಎಂಜಿನ್ ನೊಂದಿಗೆ ಇಂಧನ ಟ್ಯಾಂಕ್‌ ಕೂಡಾ ವಿಶೇಷ ವಸ್ತುಗಳಿಂದ ನಿರ್ಮಾಣಗೊಂಡಿದೆ. ಸ್ಪೋಟದಿಂದ ಕಾರನ್ನು ರಕ್ಷಿಸಲು ಸಹಕಾರಿಯಾಗಿದೆ. ಬಾಂಬ್ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ಈ ವಾಹನವು ಕೂಡಲೇ ಮುಚ್ಚವುದಲ್ಲದೆ ಗರಿಷ್ಠ ಭದ್ರತೆ ಖಚಿತಪಡಿಸಲಿದೆ. ಟೈಯರ್‌ಗಳಿಗೆ ಹಾನಿ ಉಂಟಾದರೂ ನೂರಾರು ಕಿ.ಮೀ ನಷ್ಟು ಫ್ಲಾಟ್‌ ಟೈರ್‌ಗಳಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *