7 ಕೋಟಿ ಬೆಲೆಯ ಐಶಾರಾಮಿ ರೋಲ್ಸ್ ರಾಯ್ಸ್ ಕಾರ್ ಮೈಲೇಜ್ ಎಷ್ಟು ಗೊತ್ತಾ? – ಬಹುನಿರೀಕ್ಷಿತ ಪ್ರಶ್ನೆಗೆ ಸಿಕ್ಕೇ ಬಿಡ್ತು ಉತ್ತರ..!

7 ಕೋಟಿ ಬೆಲೆಯ ಐಶಾರಾಮಿ ರೋಲ್ಸ್ ರಾಯ್ಸ್ ಕಾರ್ ಮೈಲೇಜ್ ಎಷ್ಟು ಗೊತ್ತಾ? – ಬಹುನಿರೀಕ್ಷಿತ ಪ್ರಶ್ನೆಗೆ ಸಿಕ್ಕೇ ಬಿಡ್ತು ಉತ್ತರ..!

ನ್ಯೂಸ್ ಆ್ಯರೋ : ಯಾರೇ ಆದರೂ ವಾಹನಗಳನ್ನು ಖರೀದಿಸುವಾಗ ಆ ವಾಹನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇಚ್ಚಿಸುತ್ತಾರೆ. ಲಕ್ಷ ಬೆಲೆಯ ಕಾರುಗಳನ್ನು ಖರೀದಿಸುವಾಗ ಅದರ ಮೈಲೇಜ್ ಎಷ್ಟು? ಎಂಜಿನ್ ಪವರ್ ಎಷ್ಟಿದೆ? ಅದರ ಕಾರ್ಯಕ್ಷಮತೆ ಹೇಗಿದೆ? ಎಂಬುದನ್ನೆಲ್ಲ ತಿಳಿದುಕೊಳ್ಳುತ್ತಾರೆ. ಹಾಗಿದ್ದಾಗ ಕೋಟ್ಯಾಂತರ ಬೆಲೆಯ ಐಶಾರಾಮಿ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರೋಲ್ಸ್ ರಾಯ್ಸ್ ಕಾರು (Rolls Roys) ಎಷ್ಟು ಮೈಲೇಜ್ (Mileage) ಕೊಡುತ್ತದೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದಿದ್ದರೆ ಹೇಗೆ ಅಲ್ವಾ? ರೋಲ್ಸ್ ರಾಯ್ಸ್ ಕೊಡುವ ಮೈಲೇಜ್ ಹಾಗೂ ಈ ಕಾರಿನ ವಿಷೇಶತೆ ತಿಳಿಯುವ ಕುತೂಹಲ ನಿಮ್ಮಲ್ಲಿದ್ರೆ ಈ ವರದಿ ಓದಿ.

ಶತಮಾನದ ಇತಿಹಾಸವಿರುವ ಐಶಾರಾಮಿ ಕಾರಿನ ಬೆಲೆ ಎಷ್ಟು?

ಜಗತ್ತಿನ ಐಶಾರಾಮಿ ಕಾರುಗಳಲ್ಲಿ ಒಂದಾಗಿರುವ ಈ ರೋಲ್ಸ್ ರಾಯ್ಸ್ ಕಾರಿಗೆ 116 ವರ್ಷಗಳ ಇತಿಹಾಸವಿದೆ‌. ಇದನ್ನು ಬ್ರಿಟಿಷ್ ಕಾರು ಎಂದೂ ಕೂಡ ಕರೆಯಲಾಗುತ್ತದೆ‌. 2021 ರಿಂದ ರೋಲ್ಸ್‌ ರಾಯ್ಸ್ ಸೆಡಾನ್ ಭಾರತದಲ್ಲೂ ಲಭ್ಯವಿದೆ. ಈ ಕಾರಿನ ಆರಂಭಿಕ ಬೆಲೆ 6.97ಕೋಟಿ ರೂ. ಈ ಕಾರನ್ನು ಸೂಪರ್ ಫ್ರೇಮ್ ಆರ್ಕಿಟೆಕ್ಚರ್ ನಲ್ಲಿ ನಿರ್ಮಿಸಲಾಗಿದೆ. ಇದರ ಆಲ್ ವೀಲ್ ಡ್ರೈವ್ ಹಾಗೂ ಆಲ್ವಿಲ್ ಸ್ಟೇರಿಂಗ್ ಉತ್ತಮವಾಗಿದ್ದು, ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಇದರಲ್ಲಿದೆ ಅತ್ಯಾಧುನಿಕ ಹೆಡ್ ಲ್ಯಾಂಪ್!

ಜಗತ್ತಿನಲ್ಲೇ ಮೊದಲ ಪ್ಯಾನರ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಕಾರಿನಲ್ಲಿ ಅಳವಡಿಸಿದ ಹಿರಿಮೆ ಈ ಕಾರಿಗೆ ಸಲ್ಲುತ್ತದೆ. ಜೊತೆಗೆ ಈ ಕಾರಿನ ಪ್ರತಿಯೊಂದು ವಿನ್ಯಾಸವನ್ನೂ ಕೂಡ ಅತ್ಯಂತ ಹೆಚ್ಚು ಮುತುವರ್ಜಿಯಿಂದ ಮಾಡಲಾಗಿದೆ‌. ಸದ್ಯ, ಮಾರುಕಟ್ಟೆಯಲ್ಲಿರುವ ರೋಲ್ಸ್ ರಾಯ್ಸ್ 30ಎಂಎಂ ಉದ್ದ ಹಾಗೂ 21ಎಂಎಂ ಅಗಲವಾಗಿದೆ. ಜೊತೆಗೆ ಈ ಕಾರಿನಲ್ಲಿ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ಇದರಲ್ಲಿರುವ ಲೇಸರ್ ಹೆಡ್ ಲ್ಯಾಂಪ್ ಅತ್ಯಂತ ಪವರ್ ಫುಲ್. ಇದರ ಸಹಾಯದಿಂದ 600 ಮೀಟರ್ ದೂರದ ವರೆಗೂ ಯಾವುದೇ ಅಡಚಣೆ ಇಲ್ಲದೆ ನೋಡಬಹುದಾಗಿದೆ.

ರೋಲ್ಸ್ ರಾಯ್ಸ್ ವಿಶೇಷಗಳು!

ಇದಿಷ್ಟೇ ಅಲ್ಲದೇ ಈ ಅತ್ಯಾಧುನಿಕ ಕಾರಿನಲ್ಲಿ ಅಳವಡಿಸಲಾಗಿರುವ ಎಸಿ ಎನ್ವಿರಾನ್ಮೆಂಟ್ ಪ್ಯೂರಿಫಿಕೇಶನ್ ಕೆಲಸವನ್ನು ಮಾಡುತ್ತದೆ. Base ನ 1300 ವ್ಯಾಟ್ 18 ಸ್ಪೀಕರ್ ಗಳನ್ನು ಕಾರಿನಲ್ಲಿ ಅಳವಡಿಸಲಾಗಿದ್ದು ಹಿಂದಿನ ಸೀಟಿನಲ್ಲಿ ಎಂಟರ್ಟೈನ್ಮೆಂಟ್ ಸ್ಕ್ರೀನ್ ಜೋಡಿಸಲಾಗಿದೆ. ಅಡಕ್ಟಿವ್ ಕ್ರೂಸ್ ಕಂಟ್ರೋಲ್, ಹೆಡ್ ಅಪ್ ಡಿಸ್ಪ್ಲೇ 360 ಡಿಗ್ರಿ ಕ್ಯಾಮೆರಾ ಸೆನ್ಸರ್ ಹಾಗೂ ವಾರ್ನಿಂಗ್ ಸಿಸ್ಟಮ್ ಗಳನ್ನು ಕೂಡ ಅಳವಡಿಸಲಾಗಿದ್ದು, ಅತ್ಯುತ್ತಮ ಲುಕ್, ಹೆಚ್ಚು ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ.

ಜೊತೆಗೆ ಈ ಕಾರಿನಲ್ಲಿ 6.75 ಲೀಟರ್ ಟ್ವಿನ್ ಟರ್ಬೋ V12 ಇಂಜಿನ್ ಅಳವಡಿಸಲಾಗಿದೆ. ಇದು 571 ಪಿಎಸ್ ಪವರ್ ಹಾಗೂ 850ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಇದರ ಗರಿಷ್ಠ ವೇಗ ಗಂಟೆಗೆ 250 ಕಿಲೋ ಮೀಟರ್. ಅಲ್ಲದೆ ಕೇವಲ 4.8 ಸೆಕೆಂಡ್ಗಳಲ್ಲಿ ಜೀರೋದಿಂದ ನೂರು ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಅಂದರೆ 6.33 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *