ಬೀಳುತ್ತೆ ಅನ್ನೋ ಭಯವಿಲ್ಲ, ಸ್ಟಾಂಡ್ ಇಲ್ಲದೆಯೂ ನಿಲ್ಲುತ್ತೆ ಈ ಹೊಸಾ ಎಲೆಕ್ಟ್ರಿಕ್ ಸ್ಕೂಟರ್

ಬೀಳುತ್ತೆ ಅನ್ನೋ ಭಯವಿಲ್ಲ, ಸ್ಟಾಂಡ್ ಇಲ್ಲದೆಯೂ ನಿಲ್ಲುತ್ತೆ ಈ ಹೊಸಾ ಎಲೆಕ್ಟ್ರಿಕ್ ಸ್ಕೂಟರ್

ನ್ಯೂಸ್ ಆ್ಯರೋ : ವಾಹನ ಓಡಿಸಬೇಕೆಂಬ ಆಸೆ ಯಾರಿಗೆ ಇರೋದಿಲ್ಲ ಹೇಳಿ.‌ ಯುವಕರಿಗಂತು ದ್ವಿಚಕ್ರ ವಾಹನ ಓಡಿಸೋದು ಅಂದ್ರೆ ಬಹಳ ಇಷ್ಟ. ಯುವತಿಯರೂ ಕೂಡ ಇದರಿಂದ ಹೊರತಾಗಿಲ್ಲ. ಆದ್ರೆ ಎಷ್ಟೊ ಜನ ಬೈಕ್ ಅಥವಾ ಸ್ಕೂಟರ್ ಓಡಿಸಲು ಇಷ್ಟವಿರುವವರು ಆಕ್ಸಿಡೆಂಟ್ ಆಗಬಹುದು ಅಥವಾ ರಸ್ತೆಯಲ್ಲಿ ಬೈಕ್ ಬೀಳ ಬಹುದು ಅನ್ನುವ ಭಯದಿಂದ ದ್ವಿಚಕ್ರ ವಾಹನಗಳಿಂದ ದೂರವೇ ಇರುತ್ತಾರೆ. ಅಂತಹವರಿಗೆ ವಾಹನೋದ್ಯಮ ಸಿಹಿ ಸುದ್ದಿಯೊಂದನ್ನ ನೀಡುತ್ತಿದೆ. ಇದೀಗ ಮಾರುಕಟ್ಟೆಗೆ ಬಂದಿರೋ ಈ ಸ್ಕೂಟರ್ ಸ್ಟಾಂಡ್ ಇಲ್ಲದೆಯು ನಿಲ್ಲುವ ಸಾಮರ್ಥ್ಯ ಹೊಂದಿದೆ ಜೊತೆಗೆ ಇದರಲ್ಲಿ ಸುಲಭವಾಗಿ ಬೀಳದ ತಂತ್ರಜ್ಞಾನ ಅಳವಡಿಸಲಾಗಿದೆ.

ಇತರ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದು ಉತ್ತಮವಾಗಿದೆ ಮತ್ತು‌‌ ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಪೆಟ್ರೋಲ್ ಖರ್ಚು ಕೂಡ ಇರುವುದಿಲ್ಲ. ದ್ವಿಚಕ್ರ ವಾಹನ ಕಲಿಯುವ ಮಹಿಳೆಯರಿಗಂತು‌ ಇದು ತುಂಬಾ ಸಹಕಾರಿಯಾಗಿದೆ. ಈ ವಾಹನದಿಂದ ರಸ್ತೆ ಅಪಘಾತ ಕಡಿಮೆ ಇರುವ ಕಾರಣ ವಾಹನ ಓಡಿಸುವವರ ಸಂಖ್ಯೆಯೂ ಹೆಚ್ಚಾಗಲಿದೆ.

ಈ ಸ್ಕೂಟರ್‌ನಲ್ಲಿರುವ ‘ಫೀಟ್ ಆಲ್ವೇಸ್’ ಆನ್ ಬೋರ್ಡ್ ತಂತ್ರಜ್ಞಾನ ವಾಹನ ಪ್ರೀಯರಿಗೆ ಸಹಕಾರಿಯಾಗಲಿದ್ದು. ಯಾರಿಗೆ ಬೇಕಿದ್ದರೂ ಇದನ್ನು‌ ಓಡಿಸಬಹುದಾಗಿದೆ. ಜೊತೆಗೆ ರಸ್ತೆಯಲ್ಲಿ ಹೋಗುವ ವೇಳೆ ಸೆಲ್ಫ್ ಬ್ಯಾಲೆನ್ಸ್ ತಪ್ಪಿ ಬೀಳುವ ಅಪಾಯವೂ ಕಡಿಮೆ ಇರುತ್ತದೆ. ದ್ವಿಚಕ್ರ ವಾಹನವನ್ನು ಯಾವುದೆ ಭಯವಿಲ್ಲದೆ ಕಲಿಯಲು ಬಯಸುವವರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಹೇಳಿ ಮಾಡಿಸಿದಂತಿದೆ.

ಈ ಸ್ಕೂಟರ್ ಬಳಕೆಯಿಂದಾಗಿ ರಸ್ತೆ ಅಪಘಾತಗಳು ಕಡಿಮೆಯಾಗುತ್ತದೆ ಜೊತೆಗೆ ಯಾವುದೇ ಹಿಂಜರಿಕೆಯಿಲ್ಲದೆ ವಾಹನ‌ ಓಡಿಸಬಹುದಾಗಿದೆ. ಸದ್ಯದಲ್ಲೇ‌ ಈ ವಾಹನ ಮಾರುಕಟ್ಟೆಗೆ ಬರಲಿದ್ದು ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ತೈಲೋತ್ಪನ್ನಗಳ ಬೆಲೆ ಹೆಚ್ಚುತ್ತಿರುವ ಈ ಕಾಲದಲ್ಲಿ ಇಂತಹ ಸ್ಕೂಟರ್‌ಗಳಿಂದಾಗಿ ಪೆಟ್ರೋಲ್ ಖರ್ಚು ಕೂಡ ಕಡಿಮೆಯಾಗಲಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *