2036 ಒಲಿಂಪಿಕ್ಸ್‌ ಭಾರತದಲ್ಲಿ ನಡೆಸಲು ನಡೆದಿದೆ ಗಂಭೀರ ಚರ್ಚೆ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್

2036 ಒಲಿಂಪಿಕ್ಸ್‌ ಭಾರತದಲ್ಲಿ ನಡೆಸಲು ನಡೆದಿದೆ ಗಂಭೀರ ಚರ್ಚೆ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್

ನ್ಯೂಸ್ ಆ್ಯರೋ : 2036 ಒಲಿಂಪಿಕ್ಸ್‌ ಅನ್ನು ಭಾರತದಲ್ಲಿ ನಡೆಸುವ ಬಗ್ಗೆ ಚಿಂತಿಸಲಾಗಿದ್ದು, ಈ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.

ಪ್ರಪಂಚದಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಹಿಂದಿನ ಏಷ್ಯಾ, ಕಾಮನ್ವೆಲ್ತ್ ಕ್ರೀಡಾಕೂಟಗಳನ್ನು ಆಯೋಜಿಸಿದೆ. ಭಾರತ ತಯಾರಿಕೆಯಿಂದ ಸೇವಾ ಕ್ಷೇತ್ರವರೆಗೆ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿರುವಾಗ ಕ್ರೀಡೆಯಲ್ಲಿ ಯಾಕೆ ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆ 2036 ಒಲಿಂಪಿಕ್ಸ್ ಆತಿಥ್ಯ ವಹಿಸಲು ಬಿಡ್ ಸಲ್ಲಿಸಲು ಗಂಭೀರ ಚರ್ಚೆಯಾಗಿದೆ ಎಂದು ಅವರು ಹೇಳಿದರು.

ಈಗಾಗಲೇ 2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳ ಕುರಿತ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮೊದಲ ಹಂತದ ಚರ್ಚೆಗಳನ್ನು ನಡೆಯುತ್ತಿವೆ. 10 ನಗರಗಳು ಇದಕ್ಕಾಗಿ ಪೈಪೋಟಿ ನೀಡುತ್ತಿವೆ. ಮುಂಬರುವ ಮೂರು ಆವೃತ್ತಿಗಳು ಕ್ರಮವಾಗಿ ಪ್ಯಾರಿಸ್, ಲಾಸ್ ಏಂಜೆಲ್ಸ್, ಬ್ರಿಸ್ಬೆನ್‌ ನಲ್ಲಿ ನಡೆಯಲಿವೆ.

2036 ಸೀಸನ್‌ಗಾಗಿ ಇಂಡೋನೇಷಿಯಾ, ಸೌತ್ ಕೊರಿಯಾ, ಈ ವರ್ಷ ಫಿಫಾ ವರ್ಲ್ಡ್ ಕಪ್ ನಡೆಸಿದ ಕತಾರ್, ಜರ್ಮನಿ ಮುಂತಾದ ದೇಶಗಳು ತೀವ್ರವಾಗಿ ಸ್ಪರ್ಧಿಸುತ್ತಿವೆ. ಆದಾಗ್ಯೂ ಭಾರತದಲ್ಲಿ ಒಲಿಂಪಿಕ್ಸ್ ನಡೆಸುವ ಸಂಬಂಧ ಇಲ್ಲಿನ ಒಲಿಂಪಿಕ್ಸ್‌ ಸಂಸ್ಥೆಯೊಂದಿಗೆ ಭಾರತ ಸರ್ಕಾರವು ಮುಂಬರುವ ವರ್ಷ ಚರ್ಚೆ ನಡೆಸಲಾಗುತ್ತದೆ ಎಂದು ಅನುರಾಗ್ ಠಾಕೂರ್ ಅವರು ಹೇಳಿದರು.

ವಿಶೇಷವಾಗಿ ಒಲಿಂಪಿಕ್ಸ್ ರೂಟ್ ಮ್ಯಾಪ್‌ಗೆ ಸಂಬಂಧಿಸಿದಂತೆ ಚರ್ಚೆಗಳಿಗೆ ಮುಂಬೈನಲ್ಲಿ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಇಂಡಿಯನ್ ಒಲಿಂಪಿಕ್ ಸಂಘಕ್ಕೆ ಭಾರತ ಸರ್ಕಾರದ ಬೆಂಬಲವಿದೆ ಎಂದು ಹೇಳಿದ್ದಾರೆ.

ಒಲಿಂಪಿಕ್ಸ್‌ಗೆ ಕಾದಿದೆ ಗುಜರಾತ್ ವೇದಿಕೆ:

ನವದೆಹಲಿಯಲ್ಲಿ 1951, 1982 ರಲ್ಲಿ ಏಷ್ಯಾ ಕ್ರೀಡೆಗಳು ನಡೆದಿದ್ದವು. ಇದೇ ವೇದಿಕೆಯಲ್ಲಿ 2010ರಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಕೂಡ ನಡೆದಿವೆ. 2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ ಹಕ್ಕುಗಳು ಬಂದರೆ ಗುಜರಾತ್ ವೇದಿಕೆ ಕಾದಿದೆ ಎಂದು ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *