2023ರಲ್ಲಿ ಈ ಕಾರುಗಳು ಇರುವುದಿಲ್ಲ: 2022ರಲ್ಲಿ ಮಾರುಕಟ್ಟೆಯಿಂದ ಹೊರ ನಡೆದ 5 ಕಾರುಗಳು

2023ರಲ್ಲಿ ಈ ಕಾರುಗಳು ಇರುವುದಿಲ್ಲ: 2022ರಲ್ಲಿ ಮಾರುಕಟ್ಟೆಯಿಂದ ಹೊರ ನಡೆದ 5 ಕಾರುಗಳು

ನ್ಯೂಸ್ ಆ್ಯರೋ : ಕಾರು ಮಾರಾಟ ಸಂಖ್ಯೆಯಲ್ಲಿ ಕುಸಿತ ಹಿನ್ನೆಲೆ ಹಾಗೂ ಬೇಡಿಕೆಯಿಲ್ಲದ ಕಾರಣ 2022ರಲ್ಲಿ ಕೆಲ ಕಾರು ಕಂಪನಿಗಳು ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ್ದು, ಆಯ್ದ 5 ಕಾರುಗಳ ವಿವರ ಇಲ್ಲಿದೆ.

ಫೋಕ್ಸ್‌ವ್ಯಾಗನ್‌ ಪೊಲೊ:

ಸುಮಾರು ಹನ್ನೆರಡು ವರ್ಷಗಳಿಂದ ದೇಶದ ರಸ್ತೆಯಲ್ಲಿ ಠೀವಿಯಿಂದ ಸಾಗಿದ ಫೋಕ್ಸ್‌ವ್ಯಾಗನ್‌ ಪೊಲೊ ಕಾರಿನ ಮಾರಾಟವನ್ನು ಭಾರತದಲ್ಲಿ ನಿಲ್ಲಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 25 ಲಕ್ಷ ಪೊಲೊ ಕಾರುಗಳು ಮಾರಾಟವಾಗಿದೆ. ಇದು ಫೋಕ್ಸ್‌ವ್ಯಾಗನ್‌ ಕಂಪನಿಯ ಅತ್ಯುತ್ತಮ ಮಾರಾಟದ ಕಾರುಗಳ ಪಟ್ಟಿಯಲ್ಲಿ ಒಂದಾಗಿತ್ತು.

ನ್ಯೂ ಹುಂಡೈ ಸ್ಯಾಂಟ್ರೊ ಕಾರು:

2018ರಲ್ಲಿ ಈ ಕಾರು ಭಾರತದ ಮಾರುಕಟ್ಟೆಗೆ ಬಂದಿತ್ತು. ಆದರೆ, ದೇಶದಲ್ಲಿ ಆರಂಭಿಕ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ತೀವ್ರ ಪ್ರತಿಸ್ಪರ್ಧೆ ಇದ್ದ ಕಾರಣ ಮಾರುಕಟ್ಟೆಯಲ್ಲಿ ವಿಫಲವಾಯಿತು. ಇದೀಗ ಈ ಕಾರಿನ ಮಾರಾಟವನ್ನು ಈ ವರ್ಷ ನಿಲ್ಲಿಸಲಾಗಿದೆ.

ಮಹೀಂದ್ರದ ಅಟ್ಲುರಸ್‌ ಜಿ4:

ಉತ್ತಮ ಸಂಖ್ಯೆಯಲ್ಲಿ ಕಾರು ಮಾರಾಟವಾಗದ ಹಿನ್ನೆಲೆ 2022ರಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಮಾರುತಿ ಸುಜುಕಿ ಎಸ್‌ ಕ್ರಾಸ್‌

ಮಾರುತಿ ಸುಜುಕಿ ನೆಕ್ಸಾ ನೆಟ್‌ವರ್ಕ್‌ನಲ್ಲಿ ಬಂದ ಎಸ್‌ ಕ್ರಾಸ್‌ ಕಾರು ಭಾರತದಲ್ಲಿ 2015ರಲ್ಲಿ ಲಾಂಚ್‌ ಆಗಿತ್ತು. ಆದರೆ, ಇದರ ಮಾರಾಟ ಉತ್ತಮವಾಗಿರಲಿಲ್ಲ. ಗ್ರಾಂಡ್‌ ವಿಟಾರಾ ಲಾಂಚ್‌ ಆದ ಬಳಿಕ ಎಸ್‌ ಕ್ರಾಸ್‌ ಮಾರಾಟ ನಿಲ್ಲಿಸಲಾಯಿತು.

ದಾಟ್ಸನ್‌ ರೆಡಿ ಗೋ

ದಾಟ್ಸನ್‌ ರೆಡಿ ಗೋ ಎನ್ನುವುದು ನಿಸ್ಸಾನ್‌ನ ಅತ್ಯುತ್ತಮ ಮಾರಾಟದ ಕಾರು. 2022ರಲ್ಲಿ ಈ ಕಾರಿನ ಮಾರಾಟವನ್ನು ಜಪಾನಿನ ಕಾರು ತಯಾರಿಕಾ ಕಂಪನಿ ನಿಸ್ಸಾನ್‌ ಸ್ಥಗಿತಗೊಳಿಸಿದೆ

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *