ಫೋನ್ ಕಳೆದುಹೋದರೆ ಅದರಲ್ಲಿನ ಗೂಗಲ್, ಫೋನ್‌ ಪೇ ಡಿಲೀಟ್ ಸಾಧ್ಯವೇ? -ಇಲ್ಲಿದೆ ಉಪಯುಕ್ತ ಮಾಹಿತಿ…

ಫೋನ್ ಕಳೆದುಹೋದರೆ ಅದರಲ್ಲಿನ ಗೂಗಲ್, ಫೋನ್‌ ಪೇ ಡಿಲೀಟ್ ಸಾಧ್ಯವೇ? -ಇಲ್ಲಿದೆ ಉಪಯುಕ್ತ ಮಾಹಿತಿ…

ನ್ಯೂಸ್ ಆ್ಯರೋ‌ : ಇಂದಿನ ಸ್ಮಾರ್ಟ್​​ ಯುಗದಲ್ಲಿ ಹೆಚ್ಚಿನ ಜನರು ಸ್ಮಾರ್ಟ್​​ಫೋನ್ (Smartphone) ಮೂಲಕವೇ ಅರ್ಧ ಕೆಲಸ ಮುಗಿಸಿಬಿಡುತ್ತಾರೆ. ಅದರಲ್ಲೂ ಆನ್​ಲೈನ್ ಪೇಮೆಂಟ್ ವಿಚಾರಕ್ಕೆ ಬರುವುದಾದರೆ ಕ್ಯಾಶ್ ಕೊಟ್ಟು ಏನಾದರು ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಬಹುತೇಕರು ಮೊಬೈಲ್​ನಲ್ಲಿ ಫೋನ್ ಪೇ (PhonePe), ಗೂಗಲ್ ಪೇ, ಪೇಟಿಯಂ ಆ್ಯಪ್ ಇನ್​ಸ್ಟಾಲ್ ಮಾಡಿ ಅದರ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ, ಒಂದುವೇಳೆ ನಿಮ್ಮ ಸ್ಮಾರ್ಟ್​​ಫೋನ್ ಕಳೆದುಹೋದರೆ, ಎಲ್ಲಾದರು ಕಳ್ಳತನವಾದರೆ ಏನು ಗತಿ?, ಈ ಸಂದರ್ಭ ಮೊಬೈಲ್​ನಲ್ಲಿದ್ದ ಫೋನ್ ಪೇ, ಗೂಗಲ್ ಪೇ (Google Pay) ಅಕೌಂಟ್ ಅನ್ನು ಏನು ಮಾಡುವುದು. ಈ ರೀತಿಯ ಗೊಂದಲ ಅನೇಕರಿಗೆ ಇರಬಹುದು. ಹೀಗಾದಾಗ ನಿಮ್ಮ ಈ ಅಕೌಂಟ್ ಅನ್ನು ಯಾವರೀತಿ ಸುರಕ್ಷಿತವಾಗಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.

ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿರುವ ಯುಪಿಐ ಆ್ಯಪ್​ಗಳಲ್ಲಿ ನೀವು ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿರುತ್ತೀರಿ. ಇದರಲ್ಲಿ ಸಾಕಷ್ಟು ಹಣ ಕೂಡ ಇರಬಹುದು. ಒಂದುವೇಳೆ ನಿಮ್ಮ ಮೊಬೈಲ್ ಕಳೆದು ಹೋದಾಗ ಅಥವಾ ಕಳುವಾದಾಗ ಕೆಲ ಟ್ರಿಕ್ ಉಪಯೋಗಿಸಿ ಅವರು ಯುಪಿಐ ಆ್ಯಪ್ ಓಪನ್ ಮಾಡಿ ಹಣವನ್ನು ದೋಚುವ ಸಾಧ್ಯತೆಗಳಿರುತ್ತದೆ. ಇದಕ್ಕಾಗಿ ನಿಮ್ಮ ಫೋನ್ ಕಳೆದು ಹೋಯಿತು ಎಂದ ಕೂಡಲೇ ಮೊದಲು ನಿಮ್ಮ ಯುಪಿಐ ಅಕೌಂಟ್ ಅನ್ನು ಬ್ಲಾಕ್ ಮಾಡಿ.

ಪೇಟಿಯಂ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?

  • ಮೊದಲಿಗೆ Paytm ಪೇಮೆಂಟ್ಸ್ ಬ್ಯಾಂಕ್ ಸಹಾಯವಾಣಿ 01204456456 ಗೆ ಕರೆ ಮಾಡಿ.
    ಇದರಲ್ಲಿ “ಕಳೆದುಹೋದ ಫೋನ್” ಆಯ್ಕೆಯನ್ನು ಆರಿಸಿ.
  • ನಂತರ “ಬೇರೆ ಸಂಖ್ಯೆಯನ್ನು ನಮೂದಿಸಿ” ಆಯ್ಕೆಮಾಡಿ ಮತ್ತು ನಿಮ್ಮ ಕಳೆದುಹೋದ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ.
  • ಈಗ ಎಲ್ಲ ಡಿವೈಸ್ ಅನ್ನು ಲಾಗ್ ಔಟ್ ಮಾಡುವ ಆಯ್ಕೆ ಒತ್ತಿ.
  • ಹಾಗೆಯೆ Paytm ವೆಬ್‌ಸೈಟ್‌ಗೆ ಹೋಗಿ ಮತ್ತು 24×7 ಸಹಾಯವನ್ನು ಆಯ್ಕೆಮಾಡಿ.
  • ‘Report a Fraud’ ಆಯ್ಕೆಮಾಡಿ ಮತ್ತು ಅಲ್ಲಿ ಕಾಣಿಸುವ ಕ್ಯಾಟಗರಿಯನ್ನು ಸೆಲೆಕ್ಟ್ ಮಾಡಿರಿ.
  • ಈಗ ಪುಟದ ಕೆಳಭಾಗದಲ್ಲಿ ಲಭ್ಯವಿರುವ ‘Message Us’ ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
  • ಇಲ್ಲಿ ನೀವು, ಇದು ನನ್ನದೇ ಪೇಟಿಯಂ ಖಾತೆ ಎಂಬುದಕ್ಕೆ ಪುರಾವೆಯನ್ನು ನೀಡಬೇಕು. ಅದು Paytm ಖಾತೆಯ
  • ವಹಿವಾಟುಗಳೊಂದಿಗೆ ನಡೆದ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಆಗಿರಬಹುದು ಅಥವಾ Paytm ಖಾತೆಯ
  • ವಹಿವಾಟಿಗೆ ದೃಢೀಕರಣ ಇಮೇಲ್ ಅಥವಾ SMS ಆಗಿರಬಹುದು.
  • ಬಳಿಕ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಹಾಗೂ Paytm ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತದೆ.

ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?

  • ಗೂಗಲ್ ಪೇ ಬಳಕೆದಾರರು 18004190157ಗೆ ಕರೆ ಮಾಡಿ.
  • ಇದು ಕಸ್ಟಮರ್ ಸರ್ವಿಸ್ ನಂಬರ್ ಆಗಿದ್ದು ಅವರು ಸಲಹೆ ನೀಡಿದ ರೀತಿ ನಡೆದುಕೊಳ್ಳಬೇಕು.

ಫೋನ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?

  • ಫೋನ್ ಪೇ ಬಳಕೆದಾರರು 08068727374 ಅಥವಾ 02268727374 ನಂಬರ್​ಗೆ ಕರೆ ಮಾಡಿ.
    ಅಲ್ಲಿ ನಿಮಗೆ ಸಂಬಂಧಿಸಿದ ನಂಬರ್ ಅನ್ನು ಆಯ್ಕೆ ಮಾಡಿ.
  • ಬಳಿಕ ಖಚಿತ ಪಡಿಸಿಕೊಳ್ಳಲು ನಿಮ್ಮ ಫೋನ್ ನಂಬರ್​ಗೆ OTP ಸೆಂಡ್ ಆಗುತ್ತದೆ.
  • ಆಗ ನಾನು ಯಾವುದೇ OTP ಸ್ವೀಕರಿಸಿಲ್ಲ ಎಂಬ ಆಯ್ಕೆಯನ್ನು ಒತ್ತಿರಿ.
  • ಸಿಮ್ ಕಳೆದು ಹೋಗಿದೆ ಅಥವಾ ಮೊಬೈಲ್ ಕಳೆದು ಹೋಗಿದೆ ಎಂಬ ಆಯ್ಕೆ ಸೆಲೆಕ್ಟ್ ಮಾಡಿ.
  • ನಂತರ ನಿಮ್ಮ ಫೋನ್ ನಂಬರ್, ಇ–ಮೇಲ್, ವಿಳಾಸ, ಕೊನೆಯ ಪೇಮೆಂಟ್ ಕುರಿತ ಮಾಹಿತಿ ಸೇರಿದಂತೆ ಕೆಲ ದಾಖಲಾತಿ ನೀಡಿದ ಬಳಿಕ ಫೋನ್ ಪೇ ಅಕೌಂಟ್ ಬ್ಲಾಕ್ ಆಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *