ARMAN MALIK : ಏಕಕಾಲದಲ್ಲಿ ಇಬ್ಬರೂ ಪತ್ನಿಯರು ಗರ್ಭಿಣಿ – ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಗೆ ನೆಟ್ಟಿಗರು ಹೇಳಿದ್ದೇನು?

ARMAN MALIK : ಏಕಕಾಲದಲ್ಲಿ ಇಬ್ಬರೂ ಪತ್ನಿಯರು ಗರ್ಭಿಣಿ – ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಗೆ ನೆಟ್ಟಿಗರು ಹೇಳಿದ್ದೇನು?

ನ್ಯೂಸ್ ಆ್ಯರೋ‌ : ಖ್ಯಾತ ಯುಟ್ಯೂಬ‌ರ್ ಅರ್ಮಾನ್ ಮಲಿಕ್ ಅವರು ಯುಟ್ಯೂಬ್ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ. ಆದರೆ, ಈಗ ಅರ್ಮಾನ್ ಮಲಿಕ್ ಅವರೇ ಸುದ್ದಿಯಾಗಿದ್ದಾರೆ. ಅರ್ಮಾನ್ ಮಲಿಕ್ ಅವರ ಇಬ್ಬರೂ ಪತ್ನಿಯರು (Armaan Malik Wives) ಏಕಕಾಲಕ್ಕೆ ಗರ್ಭ ಧರಿಸಿದ್ದು, ಇಂಟರ್‌ನೆಟ್‌ನಲ್ಲಿ ಅರ್ಮಾನ್ ಮಲಿಕ್ ಟ್ರೋಲ್ ಆಗುತ್ತಿದ್ದಾರೆ.

ಇಬ್ಬರೂ ಇರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅವರು ಗರ್ಭಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪತ್ನಿಯರಾದ ಪಾಯಲ್ ಹಾಗೂ ಕೃತಿಕಾ ಅವರ ಫೋಟೊಗಳನ್ನೂ ಪ್ರತ್ಯೇಕವಾಗಿ ಶೇರ್ ಮಾಡಿದ್ದಾರೆ. ಆದರೆ, ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿನಗೆ ನಾಚಿಕೆಯಾಗಬೇಕು” ಎಂದಿದ್ದಾರೆ.

“ಮೂವರು ಹೇಗೆ ಒಟ್ಟಿಗೆ ವಾಸಿಸುತ್ತೀರೋ, ನಾಚಿಕೆಯಾಗುವುದಿಲ್ಲ”, “ಇದು ವಿಶೇಷ ಟ್ಯಾಲೆಂಟ್” ಎಂದೆಲ್ಲ ಕಾಲೆಳೆದಿದ್ದಾರೆ.

ವಿಡಿಯೋ ನೋಡಿ

ಅಲ್ಲದೆ, “ಇಬ್ಬರೂ ಏಕಕಾಲಕ್ಕೆ ಹೇಗೆ ಪ್ರೆಗ್ನೆಂಟ್ ಆಗಲು ಸಾಧ್ಯ” ಎಂಬ ಪ್ರಶ್ನೆಯನ್ನೂ ತೂರಿಬಿಟ್ಟಿದ್ದಾರೆ. ಅರ್ಮಾನ್ ಮಲಿಕ್ ಖ್ಯಾತ ಯುಟ್ಯೂಬರ್ ಆಗಿದ್ದು, ಯುಟ್ಯೂಬ್‌ನಲ್ಲಿ ಅವರಿಗೆ 20 ಲಕ್ಷ ಫಾಲೋವರ್ಸ್ ಇದ್ದಾರೆ. ಅರ್ಮಾನ್ ಅವರಿಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ.

ಇನ್ನೂ ಇನ್​ಸ್ಟಾಗ್ರಾಮ್ ಹಾಗೂ ಯೂಟ್ಯೂಬ್​ನಿಂದಲೇ ಸೋಷಿಯಲ್​ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆಂಧ್ರ ಪ್ರದೇಶ ಮೂಲದ ಅರ್ಮಾನ್ ಮಲಿಕ್, ಇನ್ಸ್ಟಾಗ್ರಾಮ್​ನಲ್ಲಿ 1.5 ಮಿಲಿಯನ್ ಹಾಗು ಯೂಟ್ಯೂಬ್​ನಲ್ಲಿ 2 ಮಿಲಿಯನ್​ ಫಾಲೋರ್ಸ್ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಒಂದು ಪೋಸ್ಟ್ ಹಾಕಿದ್ದರೆ ಸಾಕು ಲಕ್ಷಾನುಗಟ್ಟಲೇ ಜನರು ವಿವ್ಸ್, ಲೈಕ್ಸ್ ಬರ್ತವೆ. ಆದ್ರೆ, ಇದೀಗ ಅವರೇ ಸಖತ್ ಟ್ರೋಲ್​ ಆಗುತ್ತಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *