42 ವರ್ಷದ ಶಿಕ್ಷಕನೊಂದಿಗೆ ಹಸೆಮಣೆಯೇರಿದ 20ರ ವಿದ್ಯಾರ್ಥಿನಿ: ಕೋಚಿಂಗ್ ಕ್ಲಾಸ್‌ನಲ್ಲಿ ಲವ್‌ ಪಾಠ ಮಾಡಿದ ಇಂಗ್ಲಿಷ್‌ ಮೇಷ್ಟ್ರು

42 ವರ್ಷದ ಶಿಕ್ಷಕನೊಂದಿಗೆ ಹಸೆಮಣೆಯೇರಿದ 20ರ ವಿದ್ಯಾರ್ಥಿನಿ: ಕೋಚಿಂಗ್ ಕ್ಲಾಸ್‌ನಲ್ಲಿ ಲವ್‌ ಪಾಠ ಮಾಡಿದ ಇಂಗ್ಲಿಷ್‌ ಮೇಷ್ಟ್ರು

ನ್ಯೂಸ್‌ ಆ್ಯರೋ : ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಅಂತಾ ಮಾತಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಅದಕ್ಕೆ ಮತ್ತೊಂದು ಸೇರ್ಪಡೆ ಬಿಹಾರದ ಈ ಜೋಡಿ. 42 ವರ್ಷದ ಶಿಕ್ಷಕರೊಬ್ಬರು ತನ್ನ 20 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ದೇಗುಲದಲ್ಲಿ ವಿವಾಹವಾಗಿ ಸುದ್ದಿಯಾಗಿದ್ದಾರೆ.

ಬಿಹಾರ ರಾಜ್ಯದ ಸಮಸ್ಟಿಪುರದಲ್ಲಿ ಈ ವಿವಾಹ ನಡೆದಿದೆ. 42 ವರ್ಷದ ಸಂಗೀತಾ ಕುಮಾರ್ ಅದೇ ಊರಿನಲ್ಲಿ ರೊಸ್ದ ಬಜಾರ್ ಎಂಬಲ್ಲಿ ಇಂಗ್ಲಿಷ್ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಅಲ್ಲಿಗೆ 20 ವರ್ಷದ ವಿದ್ಯಾರ್ಥಿನಿ ಶ್ವೇತಕುಮಾರಿ ಕೋಚಿಂಗ್‌ಗಾಗಿ ಬಂದಿದ್ದು, ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ.

ಬಳಿಕ ಇಬ್ಬರೂ ಮದ್ವೆಯಾಗಲೂ ನಿರ್ಧರಿಸಿದ್ದು, ಸಮೀಪದ ದೇವಸ್ಥಾನಕ್ಕೆ ತೆರಳಿ ಸಪ್ತಪದಿ ತುಳಿದಿದ್ದಾರೆ. ಇಬ್ಬರು ದೇಗುಲವೊಂದರಲ್ಲಿ ಸಪ್ತಪದಿ ತುಳಿಯುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪ್ರೇಮ ಪ್ರಕರಣವು ಈ ಹಿಂದೆ ಬಿಹಾರದಲ್ಲಿ ಸಮಸ್ಟಿಪುರದಲ್ಲೇ ನಡೆದಿದ್ದ ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯನ್ನು ನೆನಪಿಸುವಂತೆ ಮಾಡಿದೆ. ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯೂ ಇದೇ ರೀತಿ ಇದ್ದು, ಆದರೆ ಅದು ದುರಂತ ಅಂತ್ಯಗೊಂಡಿತ್ತು.

ಬಿಹಾರದ ನಿವಾಸಿಯಾಗಿದ್ದ ಮತುಕನಾಥ್ ಪಾಟ್ನಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ವಿದ್ಯಾರ್ಥಿಗಳಿಗೆ ಕ್ಯಾಂಪೊಂದನ್ನು ಆಯೋಜಿಸಿದ್ದರು. ಇದಕ್ಕೆ ವಿದ್ಯಾರ್ಥಿನಿಯಾಗಿ ಜ್ಯೂಲಿ ಕೂಡ ಸೇರಿಕೊಂಡಿದ್ದಳು. ಕ್ಯಾಂಪ್‌ನಲ್ಲಿ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಪರಸ್ಪರ ತಮ್ಮ ದೂರವಾಣಿ ಸಂಖ್ಯೆಗಳನ್ನು ಬದಲಿಸಿಕೊಂಡಿದ್ದರು. ಇದಾದ ಬಳಿಕ ಇವರು ಸುದೀರ್ಘ ಸಂಭಾಷಣೆಯನ್ನು ಆರಂಭಿಸಿದ್ದರು. ಆದರೆ, ಅತ್ತ ಮತುಕನಾಥ್‌ಗೆ ಆಗಲೇ ವಿವಾಹವಾಗಿ ಮಕ್ಕಳು ಕೂಡ ಇದ್ದರು. ಆದರೆ, ಆತ ಯುವತಿಯ ಪ್ರೀತಿಗಾಗಿ ತನ್ನ ಮೊದಲ ಮದುವೆ ಪತ್ನಿ ಮಕ್ಕಳನ್ನು ಬಿಟ್ಟು ಬಂದಿದ್ದರು. ಪರಿಣಾಮ ಅವರನ್ನು ಕೆಲಸದಿಂದಲೂ ಅಮಾನತು ಮಾಡಲಾಗಿತ್ತು. ಇಷ್ಟೆಲ್ಲದರ ಮಧ್ಯೆಯೂ ಇವರ ಪ್ರೀತಿ ಮುಂದುವರೆದಿತ್ತು.

ಆದರೆ ನಂತರ ಇವರಿಬ್ಬರ ಫೋಟೋಗಳು ಸ್ಥಳೀಯ ಪತ್ರಿಕೆಯಲ್ಲಿಯೂ ಕಾಣಿಸಿಕೊಂಡಿದ್ದವು. ಮತುಕನಾಥ್ ಮುಂದೆ ಲವ್ ಗುರು ಎಂದೇ ಫೇಮಸ್ ಆದರು. ಈ ಪ್ರಣಯ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆದವು. ಆದರೆ, 2017ರಲ್ಲಿ ಈ ಪ್ರೊಫೆಸರ್‌ ಅನ್ನು ಆಕೆ ತೊರೆದು ಆಧ್ಮಾತ್ಮಿಕ ಗುರುವಾಗಿ ಬದಲಾಗಿದ್ದಳು. ಈ ಹೊಸ ಪ್ರೇಮ ಪ್ರಸಂಗದೊಂದಿಗೆ ಹಳೆಯ ಮತುಕನಾಥ್– ಜ್ಯೂಲಿ ಪ್ರೇಮಕತೆಯನ್ನು ಸ್ಮರಿಸುವಂತೆ ಮಾಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *