ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ ಹಾಗಲಕಾಯಿ – ವಿವರಗಳಿಗಾಗಿ ಈ ವರದಿ ಓದಿ…

ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ ಹಾಗಲಕಾಯಿ – ವಿವರಗಳಿಗಾಗಿ ಈ ವರದಿ ಓದಿ…

ನ್ಯೂಸ್ ಆ್ಯರೋ‌ : ಚಳಿಗಾಲ ಬಂದಾಗ ಜತೆಗೇ ಹಲವು ಆರೋಗ್ಯ ಸಮಸ್ಯೆಗಳು ಸಹ ಬರುತ್ತವೆ. ಆಗೊಮ್ಮೆ ಈಗೊಮ್ಮೆ ಕೆಮ್ಮು, ಶೀತ, ಗಂಟಲು ನೋವು, ಜ್ವರ ತಪ್ಪುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸುವುದು ಮುಖ್ಯ. ಆದರೆ, ಹೆಚ್ಚಿನವರು ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೀಗೆ ಹುಷಾರು ತಪ್ಪಿದಾಗ ಇಂಗ್ಲಿಷ್ ಮದ್ದಿನ ಮೊರೆ ಹೋಗುತ್ತಾರೆ. ಕಹಿ ಕಹಿ ಮಾತ್ರೆಗಳನ್ನು ಕಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ನೀವು ಇಷ್ಟೆಲ್ಲಾ ಕಷ್ಟ ಪಡ್ಬೇಕಾಗಿಲ್ಲ.

ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಕರೇಲಾ ಅಥವಾ ಹಾಗಲಕಾಯಿಯನ್ನು ಸೇವಿಸಿ. ಹಲವು ಆರೋಗ್ಯ ಸಮಸ್ಯೆಗಳಿಗೆ ಇದುವೇ ರಾಮಬಾಣ.

ಚಳಿಗಾಲದಲ್ಲಿ ಹೊರಗಿನ ಸೋಂಕುಗಳು ಮತ್ತು ಅಲರ್ಜಿಗಳನ್ನು ಎದುರಿಸಲು ದೇಹಕ್ಕೆ ಉತ್ತಮ ಆರೈಕೆಯ ಅಗತ್ಯವಿರುತ್ತದೆ. ದೇಹಕ್ಕೆ ಸಾಕಷ್ಟು ಶಕ್ತಿ ಮತ್ತು ಉಷ್ಣತೆ ಅಗತ್ಯವಿರುವ ಸಮಯವೂ ಇದುವೇ. ಹೀಗಾಗಿ ಚಳಿಗಾಲದಲ್ಲಿ ಎಲ್ಲರಂತೆ ನೀವೂ ಸಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಹಾಗಲಕಾಯಿಯನ್ನು ಸೇರಿಸುವುದನ್ನು ಮರೆಯದಿರಿ.

ಹಾಗಲಕಾಯಿಯನ್ನು ಯಾಕೆ ಸೇವಿಸಬೇಕು?

ಕಹಿಯಾದ ಹಾಗಲಕಾಯಿ ಪಲ್ಯವನ್ನು ನೋಡಿದ್ರೇನೆ ಎಲ್ಲರೂ ಮುಖ ಸಿಂಡರಿಸುತ್ತಾರೆ. ಆದರೂ ಹಾಗಲಕಾಯಿಯನ್ನು ಇಷ್ಟಪಡುವವರು ಸ್ಪಲ್ಪ ಬೆಲ್ಲವನ್ನು ಸೇರಿಸಿ ಇದರ ಪಲ್ಯವನ್ನು ತಿನ್ನುತ್ತಾರೆ. ಅವಿಲು ಮಾಡುವಾಗಲೂ ಬಳಸಿಕೊಳ್ಳುತ್ತಾರೆ. ಯಾಕೆಂದರೆ ಹಾಗಲಕಾಯಿಯಲ್ಲಿರುವ ಆರೋಗ್ಯ ಗುಣಗಳು ಒಂದೆರಡಲ್ಲ. ಚಳಿಗಾಲದಲ್ಲಿ ನಿಮ್ಮ ಆಹಾರ (Food)ದಲ್ಲಿ ಕರೇಲಾವನ್ನು ಯಾಕೆ ಸೇರಿಸಬೇಕು. ಕೆಲವೊಂದು ಕಾರಣಗಳು ಇಲ್ಲಿವೆ.

ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ

ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ಔಷಧಿಯಾಗಿದೆ. ಕರೇಲಾ ಅಥವಾ ಹಾಗಲಕಾಯಿ ಜ್ಯೂಸ್ ನೈಸರ್ಗಿಕವಾಗಿ ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಏಕೆಂದರೆ ಕರೇಲಾ ರಸವು ಇನ್ಸುಲಿನ್‌ನಂತೆ ಕೆಲಸ ಮಾಡುವ ಸಂಯುಕ್ತಗಳನ್ನು ಹೊಂದಿದೆ.

ಕರೇಲಾ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿರುವ ಕಲ್ಮಶಗಳನ್ನು ಶುದ್ಧೀಕರಿಸಲು ಮತ್ತು ನಿರ್ವಿಷಗೊಳಿಸಲು ಇದು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಕುಡಿಯುವುದರಿಂದ ಇದು ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಸುಧಾರಿಸುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಒಳ್ಳೆಯದು.

ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ

ಚಳಿಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಹಾಗಲಕಾಯಿ ಸೇವನೆ ನೆರವಾಗುತ್ತದೆ. ಹಾಗಲಕಾಯಿ ರಸವು ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಕರೇಲಾ ಜ್ಯೂಸ್ (Juice) ಕುಡಿಯುವುದು ಯಕೃತ್ತಿಗೆ ಉತ್ತಮವಾಗಿದೆ. ಏಕೆಂದರೆ ಇದು ಲಿವರ್ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ರಸವನ್ನು ಕುಡಿಯುವುದು ಯಕೃತ್ತಿನ ಕಿಣ್ವಗಳನ್ನು ಹೆಚ್ಚಿಸುತ್ತದೆ, ಇದು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಯಕೃತ್ತಿನ ಮೇಲಿನ ವಿಷವನ್ನು ಕ್ರಮೇಣ ತೆಗೆದುಹಾಕಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಕರೇಲಾ ಜ್ಯೂಸ್ ತಯಾರಿಸುವುದು ಹೇಗೆ?

ಹಾಗಲಕಾಯಿ ಜ್ಯೂಸ್‌ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಇದಕ್ಕೆ ಮೊದಲು ಮಧ್ಯಮ ಗಾತ್ರದ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಕಟ್ ಮಾಡಿ ಮಿಕ್ಸ್‌ ಗೆ ಹಾಕಿಕೊಳ್ಳಿ. ಮಿಕ್ಸಿ ಜಾರ್‌ಗೆ ಸ್ಪಲ್ಪ ಶುಂಠಿ (Ginger), ಒಂದು ಚಿಟಿಕೆ ಅರಿಶಿನ, 2-3 ಕಾಳು ಕರಿಮೆಣಸು, ಒಂದು ಚಿಟಿಕೆ ಉಪ್ಪು ಸೇರಿಸಿ ಗ್ರೈಂಡ್ ಮಾಡಿ. ನಂತರ ಇದಕ್ಕೆ 3 ಚಮಚ ನಿಂಬೆ ರಸವನ್ನು ಸೇರಿಸಿ, ಅದನ್ನು ಮತ್ತೆ ಮಿಶ್ರಣ ಮಾಡಿ. ಇದನ್ನು ಸೋಸಿಕೊಂಡರೆ ಕರೇಲಾ ಜ್ಯೂಸ್ ಸವಿಯಲು ಸಿದ್ಧ. ಇದನ್ನು ಹೆಚ್ಚು ಪೌಷ್ಟಿಕವಾಗಿಸಲು, ಕೆಲವು ಬೀಟ್ ರೂಟ್ ತುಂಡುಗಳನ್ನು ಸಹ ಸೇರಿಸಬಹುದು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *