ವಾಟ್ಸಾಪ್‌ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಿಕೊಳ್ಳಬಹುದು.!! – ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ..

ವಾಟ್ಸಾಪ್‌ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಿಕೊಳ್ಳಬಹುದು.!! – ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ :ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಅತಿ ಹೆಚ್ಚು ಫೀಚರ್ಗಳನ್ನು ಪರಿಚಯಿಸಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ.

ವಾರಕ್ಕೆ ಒಂದು ಹೊಸ ಫೀಚರ್ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್ಗಳು ಬರಲಿಕ್ಕಿದ್ದು ಪರೀಕ್ಷಾ ಹಂತದಲ್ಲಿದೆ. ಇದರ ನಡುವೆ ವಾಟ್ಸ್ಆ್ಯಪ್ ದಿಢೀರ್ ಆಗಿ ತನ್ನ ಆಂಡ್ರಾಯ್ಡ್ (Android) ಮತ್ತು ಐಓಎಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ಪರಿಚಯಿಸಿದೆ.

ಹೌದು.. ಈ ಮೊದಲೇ ಘೋಷಿಸಿದಂತೆ ಮೆಟಾ ಒಡೆತನದ ವಾಟ್ಸ್‌ಆ್ಯಪ್, ‘ಮೆಸೇಜ್ ಯುವರ್‌ಸೆಲ್ಫ್ ಬಗ್ಗೆ’ ಫೀಚರ್ ಅನ್ನು ಎಲ್ಲ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಇದೊಂದು ವಿಶಿಷ್ಟವಾದ ಫೀಚರ್ ಆಗಿದ್ದು, ಬಳಕೆದಾರರು ಈ ಬಗ್ಗೆ ಬಹು ದಿನಗಳಿಂದಲೂ ಬೇಡಿಕೆ ಇಟ್ಟಿದರು. ಆ ಬೇಡಿಕೆ ಈಡೇರಿದ್ದು, ಜಗತ್ತಿನಾದ್ಯಂತ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಿದೆ.

ಏನು ಉಪಯೋಗ?

ಮೆಸೇಜ್ ಯುವರ್‌ಸೆಲ್ಫ್ ಫೀಚರ್‌ನಿಂದ ಸಾಕಷ್ಟು ಉಪಯೋಗಗಳಿದ್ದು, ನೋಟ್ಸ್, ರಿಮೈಂಡರ್ಸ್, ಶಾಪಿಂಗ್ ಲಿಸ್ಟ್, ಅಪ್‌ಡೇಟ್‌ಗಳನ್ನು ನಿಮ್ಮ ನಂಬರ್‌ಗೆ ಕಳುಹಿಸಿಕೊಳ್ಳಬಹುದು. ಈ ಮೊದಲು ಈ ರೀತಿ ಮಾಡಲು ಸಾಧ್ಯವಿರಲಿಲ್ಲ. ಈ ಹಿಂದೆ ಮೆಸೇಜ್ ಯುವರ್‌ಸೆಲ್ಫ್ ಬೀಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತಿತ್ತು. ಈಗ ಎಲ್ಲರಿಗೂ ದೊರೆಯುತ್ತಿದೆ.

ಈ ಫೀಚರ್ ಹೇಗೆ ಬಳಸುವುದು?

ಮೊದಲಿಗೆ ನಿಮ್ಮ ವಾಟ್ಸ್ಆ್ಯಪ್ ಅಪ್ ಟು ಡೇಟ್ ಆಗಿದೆಯೇ ಚೆಕ್ ಮಾಡಿಕೊಳ್ಳಿ. ಆಗಿಲ್ಲವೆಂದಾದರೆ, ಪ್ಲೇ ಸ್ಟೋರ್ ಗೆ ಹೋಗಿ ಅಪ್‌ಡೇಟ್ ಮಾಡಿಕೊಳ್ಳಿ. ಬಳಿಕ, ವಾಟ್ಸ್‌ಆ್ಯಪ್ ತೆರೆಯಿರಿ. ಮೊಬೈಲ್ ಸ್ಕ್ರೀನ್ ಮೇಲ್ಬಾಗದಲ್ಲಿ ಕಾಣಿಸುವ ಚಾಟ್ಸ್ ಟ್ಯಾಬ್ ಮೇಲೆ ಟ್ಯಾಪ್ ಮಾಡಿ. ಆಗ ಕೆಳ ಭಾಗದಲ್ಲಿ ಬಲಬದಿಗೆ ಸರ್ಕಲ್‌ನಲ್ಲಿ ಚಾಟ್ ಐಕಾನ್ ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿ.

ಆಗ ಸೆಲೆಕ್ಟ್ ಕಾಂಟಾಕ್ಟ್ ಕೆಳಗೆ ನ್ಯೂ ಗ್ರೂಪ್, ನ್ಯೂ ಕಾಂಟಾಕ್ಟ್ ಮತ್ತು ನ್ಯೂ ಕಮ್ಯುನಿಟಿ ಐಕಾನ್‌ಗಳ ಕೆಳಗೆ ನಿಮಗೆ ಕಾಂಟಾಕ್ಟ್ ಆನ್ ವಾಟ್ಸ್ಆ್ಯಪ್ ಎಂಬ ಡಲ್ ಆಗಿರುವ ಅಕ್ಷರಗಳಿವೆ, ಗಮನಿಸಿ. ಅದರ ಕೆಳಗೆ ನಿಮ್ಮ ಹೆಸರು(You) ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿ, ಆಗ ಮಾಮೂಲಿ ಚಾಟ್ ರೂಮ್ ಓಪನ್ ಆಗುತ್ತದೆ. ನೀವು ಸಂದೇಶಗಳನ್ನು ಕಳುಹಿಸಲು ಶುರು ಮಾಡಬಹುದು.

ಕೆಲವು ವರದಿಗಳ ಪ್ರಕಾರ, ಗ್ರೂಪ್‌ಗಳಲ್ಲಿ ಪ್ರೊಫೈಲ್ ಫೋಟೋಗಳನ್ನು ನೋಡುವುದು, ಶೀರ್ಷಿಕೆಯೊಂದಿಗೆ ಮೀಡಿಯಾ ಫೈಲ್ ಫಾರ್ವರ್ಡ್ ಮಾಡುವುದು ಇತ್ಯಾದಿಗಳಂತಹ ಇನ್ನಷ್ಟು ಮೋಜಿನ ಫೀಚರ್ಸ್‌ಗಳನ್ನು ಭವಿಷ್ಯದಲ್ಲಿ ನಿರೀಕ್ಷಿಸಬಹುದು. ಈ ಫೀಚರ್‌ಗಳನ್ನು ಕಂಪನಿಯು ಮೆಸೇಜ್ ಯುವರ್‌ಸೆಲ್ಫ್ ಬೀಟಾ ಟೆಸ್ಟಿಂಗ್‌ಗೆ ಕಳುಹಿಸಲಾಗಿದೆ. ಆದರೆ, ಯಾವಾಗ ಬಳಕೆಗೆ ದೊರೆಯಲಿವೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *