ಇಂದಿನಿಂದ “ಸ್ವಯಂಚಾಲಿತ ಮ್ಯುಟೇಷನ್ ಮಾಹಿತಿ ಪರಿಷ್ಕರಣೆ ವ್ಯವಸ್ಥೆ ಜಾರಿ – ಮಧ್ಯವರ್ತಿಗಳ ಹಾವಳಿಗೂ ಕಡಿವಾಣ : ಕಂದಾಯ ಸಚಿವ ಕೃಷ್ಣಬೈರೇಗೌಡ

ಇಂದಿನಿಂದ “ಸ್ವಯಂಚಾಲಿತ ಮ್ಯುಟೇಷನ್ ಮಾಹಿತಿ ಪರಿಷ್ಕರಣೆ ವ್ಯವಸ್ಥೆ ಜಾರಿ – ಮಧ್ಯವರ್ತಿಗಳ ಹಾವಳಿಗೂ ಕಡಿವಾಣ : ಕಂದಾಯ ಸಚಿವ ಕೃಷ್ಣಬೈರೇಗೌಡ

ನ್ಯೂಸ್ ಆ್ಯರೋ : ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಹಣಿಯಲ್ಲಿ ದಾಖಲಿಸುವ ಮ್ಯುಟೇಷನ್‌ ಕ್ರಮವನ್ನು ಸ್ವಯಂಚಾಲಿತ ವ್ಯವಸ್ಥೆ ಇಂದಿನಿಂದ ಜಾರಿಯಾಗುತ್ತಿದೆ.

ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕಂದಾಯ ಇಲಾಖೆಯ ಸೇವೆಯಾಗಿರುವ ಪಹಣಿಯಲ್ಲಿ ರಾಜ್ಯದ ರೈತರ ಬ್ಯಾಂಕ್ ಸಾಲ, ತೀರುವಳಿ ಸೇರಿದಂತೆ ವಿವಿಧ ಮಾಹಿತಿಗಳು ದಾಖಲಾಗುವುದಕ್ಕೆ ಗ್ರಾಮಾಧಿಕಾರಿಗಳು ದೃಢೀಕರಣದ ನಂತರ ದಾಖಲಾಗುತ್ತಿದ್ದವು. ಆದರೆ ಇದಕ್ಕೆ ತಿಲಾಂಜಲಿ ನೀಡಲಾಗಿದೆ. ಇನ್ಮುಂದೆ ಪಹಣಿಯಲ್ಲಿ ಈ ಎಲ್ಲಾ ವಿವರಗಳು ಸ್ವಯಂಚಾಲಿತವಾಗಿ ದಾಖಲಾಗಲಿವೆ ಎಂದಿದ್ದಾರೆ.

ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ಸಾಲ ತೀರುವಳಿಯಾದರೆ, ವಿಭಾಗ ಮಾಡಕೊಂಡರೆ, ಆಸ್ತಿಯನ್ನು ಅಡಮಾನ ಇಟ್ಟರೆ, ಎಸಿ ನ್ಯಾಯಾಲಯದ ಆದೇಶಗಳಾಗಿದ್ದರೆ ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆದಾಗ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸುವುದನ್ನು ಸ್ವಯಂಚಾಲಿತ ಮಾಡಲಾಗಿದೆ. ಇದಕ್ಕಾಗಿ ಗ್ರಾಮಾಧಿಕಾರಿಗಳು ಧೃಢೀಕರಣ (ಥಂಬ್ ಕೊಡುವುದು) ಮಾಡುವುದು ಅಗತ್ಯವಿಲ್ಲ ಎಂದು ಹೇಳಿದರು.

ಆಯಾ ಪಹಣಿ ಮೇಲೆ ಬ್ಯಾಂಕ್‌ಗಳು, ನ್ಯಾಯಾಲಯಗಳು ಹೀಗೆ ವಿವಿಧ ಮೂಲಗಳಿಂದ ನೀಡುವ ಮಾಹಿತಿಯನ್ನು ನೇರವಾಗಿ ಪಡೆದು ಅದನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡುವ ಅಗತ್ಯವನ್ನು ತಪ್ಪಿಸಲಾಗುತ್ತಿದೆ. ಇದರಿಂದ ರೈತರ ಸಮಯ, ಅಧಿಕಾರಿಗಳ ಸಮಯ ಪೋಲಾಗುವುದು ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.

ಸದ್ಯ 14,21,116 ಪಹಣಿಗಳಲ್ಲಿ ಈ ರೀತಿ ಸ್ವಯಂಚಾಲಿತ ದಾಖಲೀಕರಣ ಮಾಡಲಾಗಿದೆ. ಇದರಲ್ಲಿ ಶೇ.72ರಷ್ಟು ಸ್ವಯಂ ಚಾಲಿತ ಮಾಡಿದರೆ, ಉಳಿದ ಶೇ.28ರಷ್ಟು ಪ್ರಕರಣಗಳ ಪಹಣಿಗಳನ್ನು ಹಳೆಯ ವ್ಯವಸ್ಥೆಯಲ್ಲಿ ಉಳಿಸಿಕೊಳ್ಳಲಾಗಿದೆ. ಕಾರಣ ಹಕ್ಕು ಬದಲಾವಣೆ, ಇಂಡೀಕರಣ, ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ 15 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ಒದಗಿಸಿ ಆ ಬಳಿಕ ದಾಖಲೀಕರಣ ಮಾಡಬೇಕಾಗಿರುತ್ತದೆ. ಆದ್ದರಿಂದ ಇದರಲ್ಲಿ ಹಳೆಯ ವ್ಯವಸ್ಥೆ ಇಟ್ಟುಕೊಂಡು, ಮುಂದೆ ಎಲ್ಲಾ ಪಹಣಿಗಳಿಗೆ ಆಧಾರ್ ಜೋಡಣೆ ಪೂರ್ಣಗೊಂಡ ಬಳಿಕ ಇವುಗಳನ್ನು ಸಹ ಆಟೋಮ್ಯೂಟೇಷನ್ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ವಿವರಣೆ ನೀಡಿದ್ದಾರೆ.

Related post

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…
ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶ

ಮನೆಕೆಲಸದಾಕೆಯಿಂದ ನಟಿ ಛಾಯಾ ಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ; 66 ಗ್ರಾಂ…

ನ್ಯೂಸ್ ಆರೋ: ಕನ್ನಡ ಹಾಗೂ ಪರಭಾಷೆಯ ಸಿನಿಮಾಗಳಲ್ಲೂ ಮಿಂಚಿರುವ ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯಲ್ಲಿ ಕಳ್ಳತನ ನಡೆದಿದೆ. ಚಿನ್ನಾಭರಣ ಕಳುವಾಗಿರುವ ಬಗ್ಗೆ ಛಾಯಾ ಸಿಂಗ್ ತಾಯಿ…

Leave a Reply

Your email address will not be published. Required fields are marked *