ಅಂಚೆಕಚೇರಿಯ ಈ ಯೋಜನೆಗೆ ಸೇರಿದ್ರೆ ಪ್ರತೀ ತಿಂಗಳು ಸಿಗುತ್ತೆ 8875 ರೂ – ಹೂಡಿಕೆ ಮಾಡೋದು ಹೇಗೆ? ವಿವರ ಇಲ್ಲಿದೆ…

ಅಂಚೆಕಚೇರಿಯ ಈ ಯೋಜನೆಗೆ ಸೇರಿದ್ರೆ ಪ್ರತೀ ತಿಂಗಳು ಸಿಗುತ್ತೆ 8875 ರೂ – ಹೂಡಿಕೆ ಮಾಡೋದು ಹೇಗೆ? ವಿವರ ಇಲ್ಲಿದೆ…

ನ್ಯೂಸ್ ಆ್ಯರೋ : ಮನುಷ್ಯರಾದ ಮೇಲೆ ಭವಿಷ್ಯದ ದೃಷ್ಟಿಯಿಂದ ನಾವು ಹಣವನ್ನು ಉಳಿತಾಯ ಮಾಡಲು ಅನೇಕ ಮಾರ್ಗಗಳನ್ನು ಕಂಡುಕೊಳ್ತೇವೆ. ಅದರಲ್ಲಿ ಅಂಚೆ ಕಚೇರಿಯಲ್ಲಿ ಮಾಡುವ ಉಳಿತಾಯವೂ ಒಂದು. ಇದೀಗ ಅದರ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ.

2023ರ ಕೇಂದ್ರ ಬಜೆಟ್​ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಯೋಜನೆಯೊಂದನ್ನು ತಂದಿದೆ. ಇದರ ಜೊತೆಗೆ ಬಹುತೇಕ ಯೋಜನೆಗಳ ಹೂಡಿಕೆಯ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಹೂಡಿಕೆ ಮಿತಿ ಹೆಚ್ಚಳವಾಗಿದೆ. 2023ರ ಬಜೆಟ್ ಪ್ರಕಾರ, ಈ ಯೋಜನೆಯಡಿ ಏನೆಲ್ಲಾ ಲಾಭಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ಈ ಯೋಜನೆಯ ಹೂಡಿಕೆ ಮಿತಿ ಎಷ್ಟು…?

ಈ ಯೋಜನೆಯ ಹೂಡಿಕೆ ಮಿತಿ ರೂ. 4.5 ಲಕ್ಷದಿಂದ ರೂ. 9 ಲಕ್ಷ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಮಾಹಿತಿ ನೀಡಿದ್ದಾರೆ. ಜಂಟಿ ಖಾತೆಯಲ್ಲಿ ಹೂಡಿಕೆ ಮಾಡುವ ಮಿತಿ 15 ಲಕ್ಷ ರೂಪಾಯಿ ಹೆಚ್ಚಳವಾಗಿದೆ.

ಹಿರಿಯ ನಾಗರೀಕರೇ ಈ ಯೋಜನೆಯ ಫಲಾನುಭವಿಗಳು. ಈ ಯೋಜನೆಯಡಿಯಲ್ಲಿ ಯಾವುದೇ ಅಪಾಯವಿಲ್ಲದೆ ಪ್ರತಿ ತಿಂಗಳು ಆದಾಯವನ್ನು ಪಡೆಯಬಹುದು. ಪ್ರಸ್ತುತ, ಈ ಯೋಜನೆಯ ಬಡ್ಡಿಯು ಶೇಕಡಾ 7.1 ರಷ್ಟಿದೆ. ಪ್ರತಿ ತಿಂಗಳು ಬಡ್ಡಿ ಪಾವತಿಸಲಾಗುವುದು. ಈ ಬಡ್ಡಿ ಮೊತ್ತವನ್ನು ಹಿಂಪಡೆಯದಿದ್ದರೆ, ಆ ಹಣಕ್ಕೆ ಯಾವುದೇ ಹೆಚ್ಚುವರಿ ಬಡ್ಡಿ ಸಿಗುವುದಿಲ್ಲ. ಹಾಗಾಗಿ ಪ್ರತಿ ತಿಂಗಳು ಹಣವನ್ನು ಹಿಂಪಡೆಯುವುದು ಉತ್ತಮ.

ಹತ್ತು ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಗೆ ಸೇರಬಹುದು. ಈ ಯೋಜನೆಯಲ್ಲಿ ನೀವು ಒಂದು ಲಕ್ಷ ಹೂಡಿಕೆ ಮಾಡಿದ್ದೀರಿ ಎಂದು ನೀವು ಭಾವಿಸಿದರೆ, ಪ್ರತಿ ತಿಂಗಳು ನಿಮಗೆ 592 ರೂಪಾಯಿ ಬರಲಿದೆ. ಅದೇ ರೀತಿ 2 ಲಕ್ಷ ರೂ. ಹೂಡಿಕೆ ಮಾಡಿದ್ರೆ 1183 ಪಡೆಯಬಹುದು. 3 ಲಕ್ಷಕ್ಕೆ 1,775 ರೂ ಬರಲಿದೆ.

ನೀವು 15 ಲಕ್ಷಹೂಡಿಕೆ ಮಾಡಿದ್ರೆ 8,875 ರೂಪಾಯಿ ಸಿಗಲಿದೆ. ನೀವು ಹೂಡಿಕೆಯನ್ನು ಹೆಚ್ಚಿಸಿದಷ್ಟು ನಿಮ್ಮ ಬಡ್ಡಿ ಸಹ ಹೆಚ್ಚಳವಾಗುತ್ತದೆ. ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳಾಗಿವೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *