ಟಾಟಾ ಕಂಪೆನಿಯಿಂದ‌ ಭರ್ಜರಿ 25000 ರೂ. ವಿದ್ಯಾರ್ಥಿ ವೇತನ – ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ‌ ಹೇಗೆ?

ನ್ಯೂಸ್ ಆ್ಯರೋ : ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯಲು ವಿದ್ಯಾರ್ಥಿ ವೇತನ ಬಹಳಷ್ಟು ಸಹಕಾರಿಯಾಗುತ್ತದೆ. ಇದೀಗ, ಟಾಟಾ ಎಐಎ ಜೀವ ವಿಮಾ ಕಂಪೆನಿಯು ಪ್ರತಿಭಾವಂತ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಬೆಂಬಲ ನೀಡುವುದಕ್ಕಾಗಿ 25,000 ರೂ. ವಿದ್ಯಾರ್ಥಿ ವೇತನ‌ ಒದಗಿಸಲು ನಿರ್ಧರಿಸಿದೆ‌. ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲ ಅರ್ಹರು? ಅರ್ಜಿ‌ ಸಲ್ಲಿಕೆ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಯಾರೆಲ್ಲ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು?

ವಾಣಿಜ್ಯ ಅರ್ಥಶಾಸ್ತ್ರ ಲೆಕ್ಕಪತ್ರ, ನಿರ್ವಹಣೆ ಮತ್ತು ಹಣಕಾಸು, ಬ್ಯಾಂಕಿಂಗ್‌,ವಿಮೆನಿರ್ವಹಣೆ,ಡೇಟಾ ವಿಜ್ಞಾನ, ಅಂಕಿಅಂಶಗಳು, ಅಪಾಯ ನಿರ್ವಹಣೆ ಮತ್ತು ಇತರ ವೃತ್ತಿಪರ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಪಿಜಿ ಡಿಪ್ಲೊಮಾ ಕೋರ್ಸ್‌ಗಳ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಒಂದು ಕಂಪೆನಿ ನೀಡುವ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.

ಅರ್ಹತೆಗಳೇನು?

ಈ ವಿದ್ಯಾರ್ಥಿ ವೇತನವನ್ನು ನೀಡಲು ಟಾಟಾ ಕಂಪೆನಿಯು ಕೆಲವೊಂದು ಅರ್ಹತೆಗಳನ್ನು‌ ಪರಿಗಣಿಸುತ್ತದೆ. ಅವುಗಳೆಂದರೆ,
1.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
2.ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 5 ಲಕ್ಷ ರೂ. ವನ್ನು ಮೀರಬಾರದು.
3.TATA AIA ಉದ್ಯೋಗಿಗಳು/ನಾಯಕರು/ ಏಜೆಂಟರು/ವಿತರಣಾ ಪಾಲುದಾರರು ಇತ್ಯಾದಿಗಳ ಮಕ್ಕಳು ಮತ್ತು Buddy4Study ಅರ್ಜಿ ಸಲ್ಲಿಸಲು ಅರ್ಹರಲ್ಲ.
4.ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯೂಡಿ) ಮತ್ತು ಬಾಲಕಿಯರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅರ್ಜಿ‌ ಸಲ್ಲಿಕೆಗೆ ಬೇಕಾದ ದಾಖಲೆಗಳು?

ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
ಹಿಂದಿನ ತರಗತಿಯ ಮಾರ್ಕ್ ಕಾರ್ಡ್ (ದೃಢೀಕೃತ ಅಂಕ ಪಟ್ಟಿ)
ಸರ್ಕಾರ ನೀಡುವ ಗುರುತಿನ ಚೀಟಿ (ಆಧಾರ್ ಕಾರ್ಡ್/ವೋಟರ್ ಐಡಿ/ ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್)
ಕಾಲೇಜು ಪ್ರವೇಶ ಪುರಾವೆ (ಪ್ರವೇಶ ಪತ್ರ/ ಸಂಸ್ಥೆಯ ಗುರುತಿನ ಚೀಟಿ, ಇತ್ಯಾದಿ)
ವಿಳಾಸದ ಪುರಾವೆ (ಆಧಾರ್ ಕಾರ್ಡ್/ ಚಾಲನಾ ಪರವಾನಗಿ/ವಿದ್ಯುತ್ ಬಿಲ್, ಇತ್ಯಾದಿ.
ಅರ್ಜಿದಾರರ ಬ್ಯಾಂಕ್ ಖಾತೆ ವಿವರ
ಆದಾಯ ಪ್ರಮಾಣಪತ್ರ ಹಾಗೂ
ಜಾತಿ ಪ್ರಮಾಣಪತ್ರದ ದೃಢೀಕೃತ ನಕಲು ಪ್ರತಿ ಅಗತ್ಯವಾಗಿ ಬೇಕಾಗಿರುವ ದಾಖಲೆ ಪತ್ರಗಳಾಗಿವೆ.

ಅರ್ಜಿ ಸಲ್ಲಿಕೆ‌ ಹೇಗೆ?

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ‌ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಟಾಟಾ ಎಐಎ ಸಂಸ್ಥೆಯ ಈ‌ ಕೆಳಗಿರುವ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
https://www.buddy4study.com/page/paras-scholarship-programme

ಟಾಟಾ ಎಐಎ ಸಂಸ್ಥೆ ನೀಡುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು 2023 ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ.