ಪದವಿ ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗ – ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ

ಪದವಿ ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗ – ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ

ನ್ಯೂಸ್ ಆ್ಯರೋ : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗುಪ್ತಚರ ಮಂಡಳಿಯ ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ ಆಫೀಸರ್ ಗ್ರೇಡ್‌ 2 / ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳವರು ಅರ್ಹತೆ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಗುಪ್ತಚರ ಇಲಾಖೆಯು ಒಟ್ಟು 995 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ 377, ಆರ್ಥಿಕವಾಗಿ ಹಿಂದುಳಿದವರಿಗೆ 129, ಒಬಿಸಿಗೆ 222, ಎಸ್‌ಸಿ’ಗೆ 134, ಎಸ್‌ಟಿ’ಗೆ 133 ಹುದ್ದೆಗಳು ಮೀಸಲಿವೆ.

ವಿದ್ಯಾರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಹೊಂದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ವಿಳಾಸ https://www.mha.gov.in/en# ಕ್ಕೆ ಭೇಟಿ ನೀಡಿ. ನವೆಂಬರ್ 25 ರಂದು ಅರ್ಜಿ ಲಿಂಕ್ ಆಕ್ಟಿವೇಟ್‌ ಆಗಲಿದ್ದು, ಅಂದಿನಿಂದ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ
ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂ ಅನ್ನು ಎಲ್ಲ ಅಭ್ಯರ್ಥಿಗಳು ಭರಿಸಬೇಕಿದೆ. ಇನ್ನು ಪರೀಕ್ಷೆ ವೆಚ್ಚ 100 ರೂ ಆಗಿದೆ.

ವೇತನ:

ಈ ಹುದ್ದೆಗೆ 44900-142400 ರೂ ಮಾಸಿಕ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂ ಅನ್ನು ಎಲ್ಲ ಅಭ್ಯರ್ಥಿಗಳು ಭರಿಸಬೇಕಿದೆ. ಇನ್ನು ಪರೀಕ್ಷೆ ವೆಚ್ಚ 100 ರೂ ಆಗಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ ಅರ್ಥೈಸಿಕೊಂಡು ಮುಂದುವರೆಯಬೇಕು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್‌, ಪದವಿ ಪ್ರಮಾಣ ಪತ್ರ, ಇತರೆ ಅಗತ್ಯ ದಾಖಲೆಗಳು ಬೇಕು. ಆನ್‌ಲೈನ್‌ ಹೊರತುಪಡಿಸಿ, ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಜಿ ಶುಲ್ಕವನ್ನು ಮಾತ್ರ ಆಫ್‌ಲೈನ್‌ ಚಲನ್‌ ಮೂಲಕ ಅಥವಾ ಆನ್‌ಲೈನ್‌ ಲೈನ್‌ ಮೂಲಕ ಪಾವತಿಸಬಹುದು.

Related post

ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ಆಸ್ತಿ ಎಷ್ಟು ಕೋಟಿ ಗೊತ್ತಾ?

ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್…

ನ್ಯೂಸ್ ಆ್ಯರೋ : ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಬಿರುಸಿನಿಂದ ಸಾಗಿದೆ. ಈ‌ ಬಾರಿ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್‌…
ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…

Leave a Reply

Your email address will not be published. Required fields are marked *