Onion Bonda Recipe : ಚಳಿಗಾಲದ ತಂಪಿನಲ್ಲಿ ಸವಿಯಿರಿ ಈರುಳ್ಳಿ ಮೊಟ್ಟೆ ಬೋಂಡಾ -ಸಂಜೆ ಟೀ ಜೊತೆ ಸವಿಯಲು ಇದು ಬೆಸ್ಟ್ ಸ್ನ್ಯಾಕ್ಸ್..!!

Onion Bonda Recipe : ಚಳಿಗಾಲದ ತಂಪಿನಲ್ಲಿ ಸವಿಯಿರಿ ಈರುಳ್ಳಿ ಮೊಟ್ಟೆ ಬೋಂಡಾ -ಸಂಜೆ ಟೀ ಜೊತೆ ಸವಿಯಲು ಇದು ಬೆಸ್ಟ್ ಸ್ನ್ಯಾಕ್ಸ್..!!

ನ್ಯೂಸ್ ಆ್ಯರೋ : ಗೃಹಿಣಿಯರಿಗೆ ಸಂಜೆಯ ಸ್ನ್ಯಾಕ್ಸ್ ಏನು ವಿಶೇಷವಾಗಿ ಮಾಡೋದು ಎಂಬ ಚಿಂತೆ ಯಾವಾಗಲೂ ಇದ್ದೇ ಇರುತ್ತದೆ. ಅಂತಹವರಿಗಾಗಿ ನಾವಿಂದು ಈರುಳ್ಳಿ ಮೊಟ್ಟೆಯ ಪಕೋಡಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಸಿಂಪಲ್ ಆಗಿರೋ ಈ ರೆಸಿಪಿ ತುಂಬಾ ಟೇಸ್ಟಿಯೂ ಆಗಿದೆ.

ಸಾಮಾನ್ಯ ಈರುಳ್ಳಿ ಪಕೋಡಾವನ್ನು ನೀವು ಸವಿದಿರುತ್ತೀರಿ. ಆದ್ರೆ ಇದಕ್ಕೆ ಸ್ವಲ್ಪ ಟ್ವಿಸ್ಟ್ ನೀಡಿ ಮೊಟ್ಟೆಯೂ ಸೇರಿಸಿ ಪಕೋಡಾ ಮಾಡಿಲ್ಲ ಎಂದರೆ ಈ ರೆಸಿಪಿಯನ್ನೊಮ್ಮೆ ಖಂಡಿತಾ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:

ಬೇಯಿಸಿದ ಮೊಟ್ಟೆ – 2
ಹೆಚ್ಚಿದ ಈರುಳ್ಳಿ – 2
ಕಡಲೆ ಹಿಟ್ಟು – 1 ಕಪ್
ಮೈದಾ ಹಿಟ್ಟು – 2 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ನೀರು – ಅಗತ್ಯವಿರುವಂತೆ
ಎಣ್ಣೆ – ಹುರಿಯಲು ಬೇಕಾಗುವಷ್ಟು
ಅಡುಗೆ ಸೋಡಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

  • ಮೊದಲಿಗೆ ಒಂದು ಬಟ್ಟಲಿನಲ್ಲಿ ಈರುಳ್ಳಿ ಹಾಕಿ, ಕಡಲೆ ಹಿಟ್ಟು, ಮೈದಾ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನಪುಡಿ, ಸಾಸಿವೆ, ಜೀರಿಗೆ, ಉಪ್ಪು ಹಾಕಿ ನೀರನ್ನು ಸೇರಿಸಿ ದಪ್ಪಗಿನ ಹಿಟ್ಟಾಗಿ ಮಿಶ್ರಣ ಮಾಡಿಕೊಳ್ಳಿ.
  • ಅದಕ್ಕೆ ಹಿಂಗ್ ಸೇರಿಸಿ ಮಿಶ್ರಣ ಮಾಡಿ.
  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  • ಬೇಯಿಸಿದ ಮೊಟ್ಟೆಗಳನ್ನು 4 ಭಾಗಗಳಾಗಿ ಕತ್ತರಿಸಿ, ಒಂದೊಂದೇ ತುಂಡನ್ನು ಈರುಳ್ಳಿ ಮಿಶ್ರಣಕ್ಕೆ ಹಾಕಿಕೊಂಡು ಸುತ್ತಲೂ ಲೇಪಿಸಿಕೊಳ್ಳಿ.
  • ಈಗ ಕಾದ ಎಣ್ಣೆಯಲ್ಲಿ ಪಕೋಡಾ ರೀತಿಯಲ್ಲಿ ಅವುಗಳನ್ನು ಬಿಟ್ಟು ಗರಿಗರಿಯಾಗಿ ಹುರಿದುಕೊಳ್ಳಿ.
  • ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
  • ಇದೀಗ ಈರುಳ್ಳಿ, ಮೊಟ್ಟೆಯ ಪಕೋಡಾ ತಯಾರಾಗಿದ್ದು, ಕೆಚಪ್ ಅಥವಾ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಟೀ ಜೊತೆ ಸವಿಯಿರಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *